ನ್ಯೂಯಾರ್ಕ್ನ ಸಬ್ವೇ ಸ್ಟೇಶನ್ಗಳಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ; 5 ಮಂದಿ ಸಾವು, 13 ಜನರಿಗೆ ಗಾಯ
ಇಂದು ಮುಂಜಾನೆ 8.30ರ ಹೊತ್ತಿಗೆ (ಅಲ್ಲಿನ ಸಮಯ) ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಘಟನೆ ನಡೆದ ಸ್ಥಳಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ರೈಲುಗಳ ಸಂಚಾರವೂ ಸ್ಥಗಿತಗೊಂಡಿತ್ತು.
ನ್ಯೂಯಾರ್ಕ್ನ ಬ್ರೂಕ್ಲಿನ್ ನಗರದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಐವರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಇದು ಬ್ರೂಕ್ಲಿನ್ನಲ್ಲಿರುವ ರೈಲು ಸುರಂಗ ಮಾರ್ಗವೊಂದರ ಸ್ಟೇಶನ್ಗಳಲ್ಲಿ ನಡೆದಿದ್ದು, ಆರೋಪಿ ಮುಖಕ್ಕೆ ಗ್ಯಾಸ್ ಮಾಸ್ಕ್ ಧರಿಸಿದ್ದ ಮತ್ತು ನಿರ್ಮಾಣ ಕಾಮಗಾರಿ ನಡೆಸುವವರು ಧರಿಸುವ ವೆಸ್ಟ್ ಕೋಟ್ ಹಾಕಿಕೊಂಡಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸನ್ಸೆಟ್ ಪಾರ್ಕ್ನಲ್ಲಿರುವ 36ನೇ ಸ್ಟ್ರೀಟ್ ಸಬ್ವೇ ಸ್ಟೇಶನ್ನಲ್ಲಿ ನಾಲ್ವರಿಗೆ ಗುಂಡು ಹೊಡೆದ ಈತ ಗ್ರೀನ್ವುಡ್ ಹೈಟ್ಸ್ನಲ್ಲಿರುವ 25ನೇ ಸ್ಟೇಶನ್ನಲ್ಲಿ 9 ಮಂದಿಗೆ ಗುಂಡು ಹೊಡೆದಿದ್ದಾನೆ.
ಇಂದು ಮುಂಜಾನೆ 8.30ರ ಹೊತ್ತಿಗೆ (ಅಲ್ಲಿನ ಸಮಯ) ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಘಟನೆ ನಡೆದ ಸ್ಥಳಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ರೈಲುಗಳ ಸಂಚಾರವೂ ಸ್ಥಗಿತಗೊಂಡಿತ್ತು ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ನ್ಯೂಯಾರ್ಕ್ ಪೊಲೀಸ್ ಡಿಪಾರ್ಟ್ಮೆಂಟ್ (NYPD) ಟ್ವೀಟ್ ಮಾಡಿದ್ದು, ಸದ್ಯ ಗುಂಡಿನ ದಾಳಿ ನಡೆದ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ. ತನಿಖೆ ಕಾರಣಕ್ಕೆ ಈ ನಿಯಮ ವಿಧಿಸಲಾಗಿದೆ. ತುರ್ತು ವಾಹನಗಳು ಮಾತ್ರ ಹೋಗಬಹುದು. ಸ್ಫೋಟಕಗಳು ಪತ್ತೆಯಾಗಿದ್ದರೂ ಕೂಡ ಅವು ನಿಷ್ಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ. ಹಾಗೇ ಶೂಟೌಟ್ ನಡೆದ ಬಳಿಕದ ದೃಶ್ಯಗಳೂ ವೈರಲ್ ಆಗಿವೆ.
ಇನ್ನೂ ಯಾರನ್ನೂ ಬಂಧಿಸಿಲ್ಲ. ಇದೊಂದು ಉಗ್ರರ ದಾಳಿ ಎಂಬುದನ್ನೂ ದೃಢಪಡಿಸಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಗಾಯಾಗಳುಗಳು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಬಳಕೆ ದಾರರು ಇದೊಂದು ಉಗ್ರ ಕೃತ್ಯ ಎಂದೇ ವಾದಿಸುತ್ತಿದ್ದಾರೆ.
******NSFW******
Multiple people shot in the 36th street station in Brooklyn. Multiple undetonated devices also found. Be careful out there. Definitely avoid the subway today. This was a terrorist attack.
CREDIT: Angry_yeti / IG pic.twitter.com/9XYZcmT8BH
— Tom (@TomUlloaa) April 12, 2022
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಹಣಕಾಸು ಸಚಿವ ರಿಶಿ ಸುನಕ್ಗೆ ದಂಡ ವಿಧಿಸಿದ ಪೊಲೀಸರು; ನೋಟಿಸ್ ಕಳಿಸಲು ನಿರ್ಧಾರ
Published On - 7:58 pm, Tue, 12 April 22