AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​, ಹಣಕಾಸು ಸಚಿವ ರಿಶಿ ಸುನಕ್​ಗೆ ದಂಡ ವಿಧಿಸಿದ ಪೊಲೀಸರು; ನೋಟಿಸ್ ಕಳಿಸಲು ನಿರ್ಧಾರ

ಹೀಗೆ ಪಾರ್ಟಿಯಲ್ಲಿ ಪಾಲ್ಗೊಂಡ ಸುಮಾರು 50 ಮಂದಿಗೆ ನಾವು ದಂಡ ವಿಧಿಸುತ್ತೇವೆ. ಈ ಬಗ್ಗೆ ಅವರಿಗೆ ಶೀಘ್ರವೇ ನೋಟಿಸ್​ ಕೂಡ ನೀಡಲಿದ್ದೇವೆ ಎಂದು ಮೆಟ್ರೋಪಾಲಿಟಿನ್​ ಪೊಲೀಸರು ಹೇಳಿಕೆ ನೀಡಿದ್ದಾರೆ.

ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​, ಹಣಕಾಸು ಸಚಿವ ರಿಶಿ ಸುನಕ್​ಗೆ ದಂಡ ವಿಧಿಸಿದ ಪೊಲೀಸರು; ನೋಟಿಸ್ ಕಳಿಸಲು ನಿರ್ಧಾರ
ಬೋರಿಸ್​ ಜಾನ್ಸನ್​
TV9 Web
| Edited By: |

Updated on: Apr 12, 2022 | 7:31 PM

Share

ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್​, ಅವರ ಪತ್ನಿ ಕ್ಯಾರಿ ಜಾನ್ಸನ್​ ಮತ್ತು ಹಣಕಾಸು ಇಲಾಖೆ ಸಚಿವ ರಿಶಿ ಸುನಕ್​ ಅವರಿಗೆ ದಂಡ ವಿಧಿಸಲಾಗಿದೆ. ಇವರು ಕೊರೊನಾ ಲಾಕ್​ಡೌನ್​ ನಿಯಮಗಳನ್ನು ಮೀರಿರುವ ಹಿನ್ನೆಲೆಯಲ್ಲಿ ದಂಡಕ್ಕೆ ಗುರಿಯಾಗಿದ್ದಾರೆ ಎಂದು ಪ್ರಧಾನಿ ಕಚೇರಿಯೇ ತಿಳಿಸಿದೆ. ಹಾಗೇ, ತಾವು ಶೀಘ್ರದಲ್ಲೇ ನಿಮಗೆ ದಂಡದ ನೋಟಿಸ್​ ನೀಡಲಿದ್ದೇವೆ ಎಂದು ಮೆಟ್ರೋಪಾಲಿಟಿನ್​ ಪೊಲೀಸರು ನೊಟಿಫಿಕೇಶನ್​ ಕೂಡ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೇ, ಇದು ಪಾರ್ಟಿಗೇಟ್​ ಹಗರಣಕ್ಕೆ ಸಂಬಂಧಪಟ್ಟ ಕೇಸ್​. ಅಂದರೆ ಕೊವಿಡ್​ 19 ನಿಬಂಧನೆಗಳನ್ನೆಲ್ಲ ಮೀರಿ ಡೌನಿಂಗ್​ ಸ್ಟ್ರೀಟ್ ಮತ್ತು ಕ್ಯಾಬಿನೆಟ್​ ಕಚೇರಿಯಲ್ಲಿ ಪಾರ್ಟಿ, ಕೂಟಗಳನ್ನು ನಡೆಸಿದ ಪ್ರಕರಣ. ಯುಕೆಯ ಡೌನಿಂಗ್​ ಸ್ಟ್ರೀಟ್​ ಎಂದರೆ ಸುಮಾರು 2 ಮೀಟರ್​ ಉದ್ದದ ರಸ್ತೆ. ಅಲ್ಲಿಯೇ ಪ್ರಧಾನಮಂತ್ರಿ ನಿವಾಸ, ಕಚೇರಿಗಳು ಇವೆ.  ವಿವಿಧ ಸರ್ಕಾರಿ ಸ್ಥಳಗಳೂ ಇವೆ. ಕೊವಿಡ್​ 19 ನಿರ್ಬಂಧಗಳ ಪ್ರಕಾರ ಯುಕೆಯಲ್ಲಿ ಗುಂಪುಸೇರುವಂತಿಲ್ಲ, ಯಾವುದೇ ಪಾರ್ಟಿಯನ್ನೂ ಮಾಡುವಂತಿಲ್ಲ. ಆದರೆ ನಿಯಮಗಳೆನ್ನು ಮೀರಿ ಪ್ರಧಾನಿ ಕಾರ್ಯಾಲಯ, ಮತ್ತಿತರ ಸರ್ಕಾರಿ ಕೆಲಸಗಾರರು ಸುಮಾರು 12 ಕೂಟಗಳನ್ನು ನಡೆಸಿದ್ದಾರೆ. ಈ ವೇಳೆ ಮದ್ಯ ಸೇವನೆಯೂ ನಡೆದಿದೆ ಎಂಬ ಪ್ರಕರಣ ದಾಖಲಾಗಿದ್ದು, ಅದರ ತನಿಖೆಯನ್ನೂ ಪೊಲೀಸರು ನಡೆಸುತ್ತಿದ್ದಾರೆ. ಇಂತಹ ಸುಮಾರು 12 ಪಾರ್ಟಿಗಳಲ್ಲಿ ಕೆಲವರಲ್ಲಿ ಲಂಡನ್​ ಪ್ರಧಾನಿ ಬೋರಿಸ್ ಜಾನ್ಸನ್​, ಅವರ ಪತ್ನಿ ಮತ್ತು ಹಣಕಾಸು ಸಚಿವ ಪಾಲ್ಗೊಂಡಿದ್ದು ದೃಢಪಟ್ಟಿದ್ದರಿಂದ ಇದೀಗ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಇನ್ನೂ ಕೆಲವು ಪ್ರಮುಖರು ಪಾಲ್ಗೊಂಡಿರುವ ಬಗ್ಗೆಯೂ ಮಾಹಿತಿ ಇದೆ ಎಂದೂ ಹೇಳಲಾಗಿದೆ.

ಹೀಗೆ ಪಾರ್ಟಿಯಲ್ಲಿ ಪಾಲ್ಗೊಂಡ ಸುಮಾರು 50 ಮಂದಿಗೆ ನಾವು ದಂಡ ವಿಧಿಸುತ್ತೇವೆ. ಈ ಬಗ್ಗೆ ಅವರಿಗೆ ಶೀಘ್ರವೇ ನೋಟಿಸ್​ ಕೂಡ ನೀಡಲಿದ್ದೇವೆ ಎಂದು ಮೆಟ್ರೋಪಾಲಿಟಿನ್​ ಪೊಲೀಸರು ಹೇಳಿಕೆ ನೀಡಿದ ಬೆನ್ನಲ್ಲೇ, ಸರ್ಕಾರದ ವಕ್ತಾರರೊಬ್ಬರು ಈ ಬಗ್ಗೆ ದೃಢಪಡಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್​, ಅವರ ಪತ್ನಿ ಮತ್ತು ಹಣಕಾಸು ಇಲಾಖೆ ಸಚಿವರಿಗೆ ನೋಟಿಫಿಕೇಶನ್​ ಬಂದಿದ್ದು ಹೌದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: LIC IPO: ಏಪ್ರಿಲ್ ಕೊನೆ ವಾರದಲ್ಲಿ ಎಲ್​ಐಸಿ ಐಪಿಒ ಸಾಧ್ಯತೆ; ದಿನಾಂಕ, ಗಾತ್ರ, ಕೋಟಾ ಇತರ ವಿವರ ಇಲ್ಲಿದೆ

Follow Us
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!