AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ

Megastar Chiranjeevi: ತೆಲುಗು ಸಿನಿಮಾಗಳ ರೀ ರಿಲೀಸ್ ಟ್ರೆಂಡ್ ಇತ್ತೀಚೆಗೆ ತುಸು ತಗ್ಗಿತ್ತು. ಆದರೆ ಈ ಟ್ರೆಂಡ್​ಗೆ ಮತ್ತೆ ಜೀವ ತುಂಬಲು ಮೆಗಾಸ್ಟಾರ್ ಸಿನಿಮಾ ಬರುತ್ತಿದೆ. ಅದೂ ಅಂತಿಂಥ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ಒಂದು ಮರು ಬಿಡುಗಡೆ ಆಗಲಿದೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ
Jvas
ಮಂಜುನಾಥ ಸಿ.
|

Updated on: Apr 27, 2025 | 10:05 PM

Share

ತೆಲುಗು ಚಿತ್ರರಂಗದಲ್ಲಿ (Tollywood) ರೀ ರಿಲೀಸ್ ಟ್ರೆಂಡ್ ಕಳೆದ ಕೆಲ ತಿಂಗಳಿನಿಂದ ಬಲು ಜೋರಾಗಿ ನಡೆದಿದೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳು ಮರು ಬಿಡುಗಡೆಯಲ್ಲಿಯೂ ಕೋಟ್ಯಂತರ ರೂಪಾಯಿ ಹಣ ಗಳಿಸಿವೆ. ಸೂಪರ್ ಹಿಟ್ ಸಿನಿಮಾಗಳ ಮರು ಬಿಡುಗಡೆಯನ್ನು ಬಲು ಅದ್ಧೂರಿಯಾಗಿ ತೆಲುಗು ಪ್ರೇಕ್ಷಕರು ಸ್ವಾಗತಿಸುತ್ತಿದ್ದಾರೆ. ಆದರೆ ಕಳೆದ ಕೆಲ ತಿಂಗಳಿನಿಂದ ಈ ಟ್ರೆಂಡ್ ತುಸು ಡಲ್ ಆಗಿತ್ತು. ಆದರೆ ಈಗ ಟ್ರೆಂಡ್​ಗೆ ಮತ್ತೆ ಜೀವ ತುಂಬಲು ಮೆಗಾಸ್ಟಾರ್ ಸಿನಿಮಾ ಬರುತ್ತಿದೆ. ಅದೂ ಅಂತಿಂಥ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ ವೃತ್ತಿ ಜೀವನದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಸಹ ಅವರು ಕೊಟ್ಟಿದ್ದಾರೆ. ಆದರೆ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾದಷ್ಟು ದೊಡ್ಡ ಯಶಸ್ಸು ಗಳಿಸಿದ ಸಿನಿಮಾಗಳು ಕಡಿಮೆಯೇ. ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾ ಸೃಷ್ಟಿಸಿದ ಕೆಲ ದಾಖಲೆಗಳು ಈಗಲೂ ಮುರಿಯಲಾಗಿಲ್ಲವಂತೆ. ಆ ಮಟ್ಟಿಗೆ ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ದೇವಲೋಕದಿಂದ ಬಂದ ಅದ್ಭುತ ಸುಂದರಿಯೊಬ್ಬಾಕೆ, ಒಬ್ಬ ಹ್ಯಾಂಡ್ಸಮ್, ಜಂಟಲ್​ಮ್ಯಾನ್ ವ್ಯಕ್ತಿಯ ಪ್ರೀತಿಯಲ್ಲಿ ಬೀಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಹಾಡುಗಳು, ಹಾಸ್ಯ, ಚಿರಂಜೀವಿಯ ಅದ್ಭುತ ಆಕ್ಷನ್, ಶ್ರೀದೇವಿಯ ಅದ್ಭುತ ಸೌಂದರ್ಯ ಮತ್ತು ಅವರ ಅದ್ಭುತ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆಗಿನ ಕಾಲದಲ್ಲೇ ಬಾಕ್ಸ್ ಆಫೀಸ್​ ನಲ್ಲಿ ದೂಳೆಬ್ಬಿಸಿತ್ತು ಈ ಸಿನಿಮಾ. ಹಲವು ಭಾಷೆಗಳಿಗೆ ರೀಮೇಕ್ ಸಹ ಆಗಿತ್ತು.

ಇದನ್ನೂ ಓದಿ:ಯೋಗರಾಜ್ ಭಟ್ಟರು ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಹಾಡು ಬಿಡುಗಡೆ

ಇದೀಗ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಮೇ 9ರಂದು ಈ ಸಿನಿಮಾ ಮರು ಬಿಡುಗಡೆ ಆಗಲಿದೆ. ವಿಶೇಷೆಂದರೆ ಸಿನಿಮಾ 3ಡಿ ತಂತ್ರಜ್ಞಾನದಲ್ಲಿ ಬಿಡುಗಡೆ ಆಗಲಿದ್ದು, ಕೆಲವು ಚಿತ್ರಮಂದಿರಗಳಲ್ಲಿ 3ಡಿ ಹಾಗೂ ಇನ್ನು ಕೆಲವು ಚಿತ್ರಮಂದಿರಗಳಲ್ಲಿ 2ಡಿ ತಂತ್ರಜ್ಞಾನದೊಟ್ಟಿಗೆ ಬಿಡುಗಡೆ ಆಗಲಿದೆ. ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ರಾಘವೇಂದ್ರ ರಾವ್ ನಿರ್ದೇಶಮ ಮಾಡಿದ್ದ ಈ ಸಿನಿಮಾ ಅನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡಿತ್ತು. ಬಾಲಿವುಡ್​ನ ಅಮರೀಶ್ ಪುರಿ ಈ ಸಿನಿಮಾದ ವಿಲನ್ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ