AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi Turbo 4 Pro: ಬಲಿಷ್ಠ 7550mAh ಬ್ಯಾಟರಿ: ಐಫೋನ್ 16 ನಂತೆ ಕಾಣುವ ಫೋನ್ ಬಿಡುಗಡೆ ಮಾಡಿದ ರೆಡ್ಮಿ

Redmi Turbo 4 Pro Launched: ಈ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಐಫೋನ್ 16 ರಂತೆ ಲಂಬವಾಗಿ ಜೋಡಿಸಲಾದ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP ಮುಖ್ಯ OIS ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 8MP ಅಲ್ಟ್ರಾ ವೈಡ್ ಕ್ಯಾಮೆರಾ ಲಭ್ಯವಿರುತ್ತದೆ.

Redmi Turbo 4 Pro: ಬಲಿಷ್ಠ 7550mAh ಬ್ಯಾಟರಿ: ಐಫೋನ್ 16 ನಂತೆ ಕಾಣುವ ಫೋನ್ ಬಿಡುಗಡೆ ಮಾಡಿದ ರೆಡ್ಮಿ
Redmi Turbo 4 Pro
Vinay Bhat
|

Updated on: Apr 25, 2025 | 9:26 PM

Share

ಬೆಂಗಳೂರು (ಏ. 25): ಶವೋಮೊ ಒಡೆತನದ ಪ್ರಸಿದ್ಧ ರೆಡ್ಮಿ ಬ್ರ್ಯಾಂಡ್ ಮತ್ತೊಂದು ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್ ರೆಡ್ಮಿ ಟರ್ಬೊ 4 ಪ್ರೊ (Redmi Turbo 4 Pro) ಹೆಸರಿನೊಂದಿಗೆ ಬಂದಿದೆ. ಇದು 16GB RAM, ಕ್ವಾಲ್ಕಂ ಸ್ನಾಪ್​ಡ್ರಾಗನ್ 8s Gen 4 ಪ್ರೊಸೆಸರ್‌ನಂತಹ ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ರೆಡ್ಮಿ ಫೋನಿನ ಹಿಂಭಾಗವು ಐಫೋನ್ 16 ನಂತಹ ಕ್ಯಾಮೆರಾ ವಿನ್ಯಾಸವನ್ನು ಹೊಂದಿದೆ. ಅಲ್ಲದೆ, ಇದರಲ್ಲಿ IP65, IP68 ನಂತಹ ನೀರು ಮತ್ತು ಧೂಳಿನ ರೇಟಿಂಗ್‌ ಗಳನ್ನು ನೀಡಲಾಗಿದೆ.

ರೆಡ್ಮಿ ಟರ್ಬೊ 4 ಪ್ರೊ ನಾಲ್ಕು ಶೇಖರಣಾ ರೂಪಾಂತರಗಳಲ್ಲಿ ಲಭ್ಯವಿರುತ್ತದೆ – 12GB RAM + 256GB, 12GB RAM + 512GB, 16GB RAM + 512GB, ಮತ್ತು 16GB RAM + 1TB. ಇದರ ಆರಂಭಿಕ ಬೆಲೆ CNY 2199 (ಸುಮಾರು ರೂ. 25,700). ಅದೇ ಸಮಯದಲ್ಲಿ, ಇದರ ಉನ್ನತ ರೂಪಾಂತರವು CNY 2,999 (ರೂ 35,100) ಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಕಪ್ಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಸಬಹುದು.

ರೆಡ್ಮಿ ನೋಟ್ 4 ಪ್ರೊ ಬೆಲೆ:

  • 12 ಜಿಬಿ RAM + 256 ಜಿಬಿ   CNY 2199 (ಅಂದಾಜು ರೂ. 25,700)
  • 12 ಜಿಬಿ RAM + 512 ಜಿಬಿ   CNY 2299 (ಅಂದಾಜು ರೂ. 29,300)
  • 16 ಜಿಬಿ RAM + 512 ಜಿಬಿ   CNY 2499 (ಅಂದಾಜು ರೂ. 31,600)
  • 16 ಜಿಬಿ RAM + 1 ಟಿಬಿ      CNY 2699 (ಅಂದಾಜು ರೂ. 35,100)

ರೆಡ್ಮಿ ಟರ್ಬೊ 4 ಫೀಚರ್ಸ್:

ಈ ರೆಡ್ಮಿ ಫೋನ್ 6.83-ಇಂಚಿನ OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇಯ ರೆಸಲ್ಯೂಶನ್ 1.5K ಆಗಿದ್ದು, ಇದು 120Hz ಹೆಚ್ಚಿನ ರಿಫ್ರೆಶ್ ದರದೊಂದಿಗೆ 3200 nits ಗರಿಷ್ಠ ಬ್ರೈಟ್​ನೆಸ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8s Gen 4 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, 16GB LPDDR5X RAM ಮತ್ತು 1TB ಸಂಗ್ರಹಣೆಯನ್ನು ಹೊಂದಿದೆ.

ಇದನ್ನೂ ಓದಿ
Image
ನಿಮ್ಮ ಹಳೆಯ ಫೋನ್ ಅನ್ನು ಟಿವಿ-ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್
Image
ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷ ಬಾಳಿಕೆ ಬರುತ್ತೆ?: ಯಾವಾಗ ಬದಲಾಯಿಸಬೇಕು?
Image
Tech Utility: ನೀವು ಸ್ಟೆಬಿಲೈಜರ್ ಇಲ್ಲದೆ ಫ್ರಿಡ್ಜ್ ಬಳಸುತ್ತೀರಾ?
Image
ಹಳೆಯ ಫೋನ್‌ ಮೇಲೆ ಸ್ಟಿಕ್ಕರ್‌ ಅಂಟಿಸಿ ಹೊಸದೆಂದು ಅಂಗಡಿಗಳಲ್ಲಿ ಮಾರಾಟ

Tech Tips: ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್

ಈ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಐಫೋನ್ 16 ರಂತೆ ಲಂಬವಾಗಿ ಜೋಡಿಸಲಾದ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP ಮುಖ್ಯ OIS ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 8MP ಅಲ್ಟ್ರಾ ವೈಡ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಕ್ಯಾಮೆರಾವನ್ನು ಹೊಂದಿದೆ.

ಈ ರೆಡ್ಮಿ ಫೋನ್ 7,550mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 90W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಹೊಂದಿದೆ. ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್‌ನೊಂದಿಗೆ ಬರುತ್ತದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, IP66, IP68 ಮತ್ತು IP69 ನೀರು ಮತ್ತು ಧೂಳಿನ ರೇಟಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?