AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್

ಶವೋಮಿ, ಹುವೈ, ಹಾನರ್ ಮತ್ತು ಕೆಲವು ಸ್ಯಾಮ್ಸಂಗ್ ಮಾದರಿಗಳಂತಹ ಅನೇಕ ಹಳೆಯ ಆಂಡ್ರಾಯ್ಡ್ ಫೋನ್‌ಗಳು IR ಬ್ಲಾಸ್ಟರ್ ಅನ್ನು ಹೊಂದಿವೆ. ಇಲ್ಲದಿದ್ದರೆ, ನೀವು ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ನಿಮ್ಮ ಹಳೆಯ ಫೋನ್ ಅನ್ನು AC ಅಥವಾ ಟಿವಿ ರಿಮೋಟ್ ಆಗಿ ಬಳಸಲು, ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

Tech Tips: ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್
Old Smartphone Into A Tv Or Ac Remote
Follow us
Vinay Bhat
|

Updated on: Apr 24, 2025 | 3:29 PM

ಬೆಂಗಳೂರು (ಏ. 24): ಇಂದು ಅನೇಕ ಜನರು ಬಳಿ ಬಳಸದೇ ಇರುವ ಹಳೆಯ ಫೋನ್‌ಗಳನ್ನು (Old Smartphones) ಇದ್ದೇ ಇರುತ್ತದೆ. ಅವು ಎಲ್ಲೋ ಮೂಲೆಯಲ್ಲಿ ಬಿದ್ದಿರುತ್ತದೆ. ಆದಾಗ್ಯೂ, ಈ ಹಳೆಯ ಫೋನ್‌ಗಳು ಅದ್ಭುತವಾದ ಉಪಯೋಗಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ; ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಏರ್ ಕಂಡಿಷನರ್ (AC) ರಿಮೋಟ್ ಆಗಿ ಪರಿವರ್ತಿಸಬಹುದು. ಇದಕ್ಕಾಗಿ, ನಿಮ್ಮ ಫೋನ್ IR ಬ್ಲಾಸ್ಟರ್ ಅನ್ನು ಬೆಂಬಲಿಸುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಿ?. ಟಿವಿ ಅಥವಾ ಎಸಿಯಂತಹ ಎಲೆಕ್ಟ್ರಾನಿಕ್ ಸಾಧನಗಳು ಅತಿಗೆಂಪು (IR) ಸಂಕೇತಗಳಿಂದ ನಿಯಂತ್ರಿಸಲ್ಪಡುತ್ತವೆ.

ಶವೋಮಿ, ಹುವೈ, ಹಾನರ್ ಮತ್ತು ಕೆಲವು ಸ್ಯಾಮ್​ಸಂಗ್ ಮಾದರಿಗಳಂತಹ ಅನೇಕ ಹಳೆಯ ಆಂಡ್ರಾಯ್ಡ್ ಫೋನ್‌ಗಳು IR ಬ್ಲಾಸ್ಟರ್ ಅನ್ನು ಹೊಂದಿವೆ. ಇಲ್ಲದಿದ್ದರೆ, ನೀವು ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ನಿಮ್ಮ ಹಳೆಯ ಫೋನ್ ಅನ್ನು AC ಅಥವಾ ಟಿವಿ ರಿಮೋಟ್ ಆಗಿ ಬಳಸಲು, ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

ಸಾಮಾನ್ಯವಾಗಿ, ಫೋನ್ ಬ್ರ್ಯಾಂಡ್ ಅನ್ನು ಅವಲಂಬಿಸಿ ಡೀಫಾಲ್ಟ್ ರಿಮೋಟ್ ಅಪ್ಲಿಕೇಶನ್ ಅನ್ನು ಮೊದಲೇ ಅದರಲ್ಲಿ ಅಳವಡಿಸಲಾಗಿರುತ್ತದೆ. ಉದಾಹರಣೆಗೆ, Mi Remote ನಂತಹ ಅಪ್ಲಿಕೇಶನ್‌ಗಳು ಶವೋಮಿ ನಲ್ಲಿ ಲಭ್ಯವಿದೆ ಮತ್ತು ಸ್ಮಾರ್ಟ್ ರಿಮೋಟ್ ಹುವೈ ನಲ್ಲಿ ಲಭ್ಯವಿದೆ. ಇದಲ್ಲದೆ, ಫೋನ್‌ನಲ್ಲಿ ರಿಮೋಟ್ ಅಪ್ಲಿಕೇಶನ್ ಇಲ್ಲದಿದ್ದರೆ, ನೀವು ಅದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಮಿ ರಿಮೋಟ್ ಕಂಟ್ರೋಲರ್, ಪೀಲ್ ಸ್ಮಾರ್ಟ್ ರಿಮೋಟ್ ಮತ್ತು ಎನಿಮೋಟ್ ಸ್ಮಾರ್ಟ್ ಐಆರ್ ರಿಮೋಟ್‌ನಂತಹ ಅಪ್ಲಿಕೇಶನ್‌ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ
Image
ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷ ಬಾಳಿಕೆ ಬರುತ್ತೆ?: ಯಾವಾಗ ಬದಲಾಯಿಸಬೇಕು?
Image
Tech Utility: ನೀವು ಸ್ಟೆಬಿಲೈಜರ್ ಇಲ್ಲದೆ ಫ್ರಿಡ್ಜ್ ಬಳಸುತ್ತೀರಾ?
Image
ಹಳೆಯ ಫೋನ್‌ ಮೇಲೆ ಸ್ಟಿಕ್ಕರ್‌ ಅಂಟಿಸಿ ಹೊಸದೆಂದು ಅಂಗಡಿಗಳಲ್ಲಿ ಮಾರಾಟ
Image
ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ, ತಕ್ಷಣ ಹೀಗೆ ಮಾಡಿ

Tech Utility: ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ?: ಅದನ್ನು ಯಾವಾಗ ಬದಲಾಯಿಸಬೇಕು?

  • ಇದಕ್ಕಾಗಿ, ಮೊದಲು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ನಂತರ, ಆ ಅಪ್ಲಿಕೇಶನ್ ತೆರೆಯಿರಿ ಮತ್ತು “ಆ್ಯಡ್ ರಿಮೋಟ್” ಅಥವಾ “+” ಅನ್ನು ಟ್ಯಾಪ್ ಮಾಡಿ.
  • ಈಗ ಸಾಧನದ ಪ್ರಕಾರವನ್ನು ಆಯ್ಕೆಮಾಡಿ – ಉದಾಹರಣೆಗೆ ಟಿವಿ, ಎಸಿ, ಸೆಟ್ ಟಾಪ್ ಬಾಕ್ಸ್, ಇತ್ಯಾದಿ. ಇದರ ನಂತರ, ಸೋನಿ, ಎಲ್‌ಜಿ, ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
  • ನಂತರ ಅಪ್ಲಿಕೇಶನ್ ಕೆಲವು ಬಟನ್‌ಗಳನ್ನು ಒತ್ತಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಫೋನ್ ಸಾಧನಕ್ಕೆ ಪ್ರತಿಕ್ರಿಯಿಸಿದರೆ, ನಿಮ್ಮ ಫೋನ್ ಸಂಪೂರ್ಣವಾಗಿ ರಿಮೋಟ್ ಕಂಟ್ರೋಲ್ ಆಗಿ ಮಾರ್ಪಟ್ಟಿದೆ.
  • ನಿಮ್ಮ ಫೋನ್‌ನಲ್ಲಿ ಐಆರ್ ಇಲ್ಲದಿದ್ದರೂ ಸಹ, ನೀವು ಸ್ಮಾರ್ಟ್ ಟಿವಿಗಳು ಮತ್ತು ಕೆಲವು ಎಸಿಗಳನ್ನು ವೈಫೈ ಅಥವಾ ಬ್ಲೂಟೂತ್ ಮೂಲಕ ನಿಯಂತ್ರಿಸಬಹುದು – ಆದರೆ ಅವು ‘ಸ್ಮಾರ್ಟ್’ ಆಗಿದ್ದರೆ ಮಾತ್ರ.

ನೀವು ವೈಫೈ ಆಧಾರಿತ ರಿಮೋಟ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನೀವು Chromecast ಅಥವಾ ಆಂಡ್ರಾಯ್ಡ್ ಟಿವಿ ಹೊಂದಿದ್ದರೆ, ಈ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್ (ಸ್ಯಾಮ್‌ಸಂಗ್ ಟಿವಿಗಳಿಗಾಗಿ), ಎಲ್‌ಜಿ ಟಿವಿ ಪ್ಲಸ್ (ಎಲ್‌ಜಿ ಸ್ಮಾರ್ಟ್ ಟಿವಿಗಳಿಗಾಗಿ), ಸೋನಿ ಬ್ರಾವಿಯಾ ಟಿವಿ ಅಪ್ಲಿಕೇಶನ್, ಹಾಗೆಯೇ ಎಲ್‌ಜಿ ಥಿನ್‌ಕ್ಯೂ, ಡೈಕಿನ್ ಮೊಬೈಲ್ ಕಂಟ್ರೋಲರ್, ವೋಲ್ಟಾಸ್ ಸ್ಮಾರ್ಟ್ ಎಸಿ ಅಪ್ಲಿಕೇಶನ್‌ಗಳು ಎಸಿ ಬ್ರಾಂಡ್ ಅಪ್ಲಿಕೇಶನ್‌ಗಳಿಗೆ ಲಭ್ಯವಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ