ಪಾಕ್ ಯೂಟ್ಯೂಬರ್ನಿಂದ ಶಾಕಿಂಗ್ ವಿಚಾರ ಬಹಿರಂಗ: ಪಾಕಿಸ್ತಾನದಲ್ಲಿ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಗೊತ್ತೇ?
ಈ ವಿಡಿಯೋದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸುವ ಮೊಬೈಲ್‌ಗಳ ಬಗ್ಗೆ ಹೇಳಲಾಗಿದೆ ಮತ್ತು ಅವುಗಳ ಬೆಲೆಯ ಕುರಿತು ಮಾಹಿತಿ ನೀಡಲಾಗಿದೆ. ಇದರಲ್ಲಿ 48 ಸಾವಿರ ರೂ. ಗಳಿಂದ 1.47 ಲಕ್ಷ ರೂ. ಗಳವರೆಗಿನ ಬೆಲೆಯ ಆಪಲ್ ಐಫೋನ್‌ನ ಹಲವು ಮಾದರಿಗಳು ಸೇರಿವೆ. ಪಾಕಿಸ್ತಾನದಲ್ಲಿ ಫೋನ್‌ಗಳ ಬೆಲೆ ಏರಿಕೆಗೆ ಹಲವು ಕಾರಣಗಳಿವೆ.

Pakistan on Mobile Prices: ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ (Smartphones) ಬೆಲೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ, ಇವುಗಳಲ್ಲಿ ಹೆಚ್ಚಿನ ಡಿಫರೆನ್ಸ್ ಇರುವುದಿಲ್ಲ. ಹೀಗಿರುವಾಗ, ಇತ್ತೀಚೆಗೆ ಪಾಕಿಸ್ತಾನದ ಯೂಟ್ಯೂಬರ್ ಒಬ್ಬ ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಭಾರತದೊಂದಿಗೆ ಹೋಲಿಸುವ ವಿಡಿಯೋ ವೈರಲ್ ಆಗಿದ್ದು, ಇದು ಎಲ್ಲರಿಗೂ ಅಚ್ಚರಿ ಮೂಡಿದೆ. ಈ ವಿಡಿಯೋದಲ್ಲಿ ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳು ಪಾಕಿಸ್ತಾನದಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚು ದುಬಾರಿಯಾಗಿ ಮಾರಾಟವಾಗುತ್ತಿವೆ ಎಂಬುದನ್ನು ಹೇಳಲಾಗಿದೆ. ಈ ವ್ಯತ್ಯಾಸವು ಆಘಾತಕಾರಿ ಮಾತ್ರವಲ್ಲದೆ ಎರಡೂ ದೇಶಗಳ ಆರ್ಥಿಕ ಪರಿಸ್ಥಿತಿ ಮತ್ತು ಮಾರುಕಟ್ಟೆ ನೀತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
ಪಾಕಿಸ್ತಾನದಲ್ಲಿ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಿವೆ ಏಕೆ?:
ಈ ವಿಡಿಯೋದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸುವ ಮೊಬೈಲ್‌ಗಳ ಬಗ್ಗೆ ಹೇಳಲಾಗಿದೆ ಮತ್ತು ಅವುಗಳ ಬೆಲೆಯ ಕುರಿತು ಮಾಹಿತಿ ನೀಡಲಾಗಿದೆ. ಇದರಲ್ಲಿ 48 ಸಾವಿರ ರೂ. ಗಳಿಂದ 1.47 ಲಕ್ಷ ರೂ. ಗಳವರೆಗಿನ ಬೆಲೆಯ ಆಪಲ್ ಐಫೋನ್‌ನ ಹಲವು ಮಾದರಿಗಳು ಸೇರಿವೆ. ಪಾಕಿಸ್ತಾನದಲ್ಲಿ ಫೋನ್‌ಗಳ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪಿಟಿಎ (ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ) ಇದಕ್ಕೆ ದೊಡ್ಡ ಕಾರಣ ಎನ್ನಬಹುದು.
ಪಿಟಿಎ ಎಂದರೇನು?:
ವಾಸ್ತವವಾಗಿ, ಪಿಟಿಎ ಎಂದರೆ ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ. ಪಿಟಿಎ ಮೊಬೈಲ್ ಫೋನ್‌ಗಳು ಎಂದರೆ, ಬಳಕೆದಾರರು ಸಿಮ್ ಕಾರ್ಡ್ ಬಳಸಬಹುದಾದ ಫೋನುಗಳಾಗಿವೆ. ಮತ್ತೊಂದೆಡೆ, ಪಿಟಿಎ ಅಲ್ಲದ ಫೋನ್‌ಗಳುವೆ. ಇದು ಬಳಕೆದಾರರು ಸಿಮ್ ಬಳಸಲು ಸಾಧ್ಯವಾಗದ ಫೋನ್‌ಗಳಾಗಿವೆ. ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಸುಮಾರು 2.47 ಲಕ್ಷ ರೂ. ಗೆ ಖರೀದಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ, ಅದು ಪಿಟಿಎ ಅಲ್ಲದ ಫೋನ್ ಆಗಿತ್ತು. ಅದೇ ಸಮಯದಲ್ಲಿ, ಫೋನ್ ಅನ್ನು ಪಿಟಿಎ ಅನುಮೋದಿಸಲು, ಸರ್ಕಾರಕ್ಕೆ ಸುಮಾರು 1.48 ಲಕ್ಷ ರೂ. ಪಾವತಿಸಬೇಕಾಗುತ್ತದೆ, ಹೀಗಾದಾಗ ಫೋನ್‌ನ ಬೆಲೆ ಸುಮಾರು 4 ಲಕ್ಷ ರೂ. ತಲುಪುತ್ತದೆ. ಅದೇ ಸಮಯದಲ್ಲಿ, ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ವಿವೋ ನಂತಹ ಬ್ರಾಂಡ್‌ಗಳ ಫೋನ್‌ಗಳು ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸುಮಾರು 30 ರಿಂದ 40 ಪ್ರತಿಶತದಷ್ಟು ಹೆಚ್ಚು ದುಬಾರಿಯಾಗಿದೆ.
ಸ್ಮಾರ್ಟ್ಫೋನ್ನಲ್ಲಿರುವ IP68, IP69 ರೇಟಿಂಗ್ ಎಂದರೇನು?: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಪಾಕಿಸ್ತಾನದಲ್ಲಿ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಲು ಕಾರಣವೇನು?:
- ಪಾಕಿಸ್ತಾನದ ರೂಪಾಯಿ ಯುಎಸ್ ಡಾಲರ್ ವಿರುದ್ಧ ದುರ್ಬಲಗೊಂಡಿದ್ದು, ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಯಲ್ಲಿ ಏರಿಕೆಯಾಗಿದೆ.
- ಪಾಕಿಸ್ತಾನದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ಆಮದು ಸುಂಕ ಮತ್ತು ತೆರಿಗೆಗಳು ವಿಧಿಸಲಾಗುತ್ತಿದ್ದು, ಇದರಿಂದಾಗಿ ಅವುಗಳ ಬೆಲೆಗಳು ಹೆಚ್ಚಾಗುತ್ತವೆ.
- ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅಸ್ಥಿರವಾಗಿದ್ದು, ವಿದೇಶಿ ಹೂಡಿಕೆ ಮತ್ತು ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
- ಪಾಕಿಸ್ತಾನದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಕೊರತೆಯಿದೆ, ಇಲ್ಲಿ ಬಳಕೆದಾರರಿಗೆ ಸೀಮಿತ ಆಯ್ಕೆ ಮಾತ್ರ ಇರುತ್ತದೆ. ಇದರಿಂದ ಬೆಲೆಗಳು ಕೂಡ ಹೆಚ್ಚು ಇರುತ್ತದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸ್ಮಾರ್ಟ್‌ಫೋನ್ ಬೆಲೆಗಳಲ್ಲಿನ ಈ ವ್ಯತ್ಯಾಸವು ಆರ್ಥಿಕ ನೀತಿಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ಪರಿಣಾಮ ಮಾತ್ರವಲ್ಲ, ಇದಕ್ಕೆ ಇತರೆ ಕಾರಣ ಕೂಡ ಇದೆ. ಭಾರತದಲ್ಲಿ ಬಳಕೆದಾರರು ಹೊಸ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಯಲ್ಲಿ ಪಡೆಯುತ್ತಿದ್ದರೆ, ಪಾಕಿಸ್ತಾನದ ಜನರು ಅದೇ ತಂತ್ರಜ್ಞಾನವನ್ನು ಪಡೆಯಲು ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ