AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Technology Day 2022: ಇದನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವ ಮತ್ತು ಈ ವರ್ಷದ ಥೀಮ್​: ಇಲ್ಲಿದೆ ಮಾಹಿತಿ

ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಮೊದಲ ಬಾರಿಗೆ 11 ಮೇ 1999 ರಂದು ಆಚರಿಸಲಾಯಿತು. 1998 ರ ಮೇ 11 ರಂದು, ರಾಜಸ್ಥಾನದ ಭಾರತೀಯ ಸೇನೆಯ ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಆಪರೇಷನ್ ಶಕ್ತಿ ಅಡಿಯಲ್ಲಿ ಮೂರು ಯಶಸ್ವಿ ಪರಮಾಣು ಪರೀಕ್ಷೆಗಳನ್ನು ನಡೆಸಿತು.

National Technology Day 2022: ಇದನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವ ಮತ್ತು ಈ ವರ್ಷದ ಥೀಮ್​: ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರImage Credit source: Google
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 11, 2022 | 8:00 AM

Share

ತಂತ್ರಜ್ಞಾನವು ದಿನದಿಂದ ದಿನಕ್ಕೆ ಪ್ರಗತಿಯಾಗುತ್ತಿದೆ. ಭಾರತೀಯರು ಯಾವಾಗಲೂ ಉತ್ತಮ ಆವಿಷ್ಕಾರಗಳೊಂದಿಗೆ ತಂತ್ರಜ್ಞಾನದ (Technology)  ಪ್ರಗತಿಗೆ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಆದ್ದರಿಂದ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಗುರುತಿಸಲು ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಏರೋಸ್ಪೇಸ್ ಇಂಜಿನಿಯರ್ ಮತ್ತು ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಗಳ ವಾರ್ಷಿಕೋತ್ಸವ ಎಂದು ಕೂಡ ಗುರುತಿಸಲಾಗುತ್ತದೆ. ಅದರ ಯಶಸ್ವಿ ಪರೀಕ್ಷೆಯ ನಂತರ, ಆಗಿನ ಪ್ರಧಾನಿ ಅಟಲ್ ಬಿಹಾರಿ ಬಾಜಪೇಯಿ ಅವರು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ ವನ್ನು ಘೋಷಿಸಿದರು.

ರಾಷ್ಟ್ರೀಯ ತಂತ್ರಜ್ಞಾನ ದಿನ 2022: ಮಹತ್ವ ಮತ್ತು ಇತಿಹಾಸ

ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಮೊದಲ ಬಾರಿಗೆ 11 ಮೇ 1999 ರಂದು ಆಚರಿಸಲಾಯಿತು. 1998 ರ ಮೇ 11 ರಂದು, ರಾಜಸ್ಥಾನದ ಭಾರತೀಯ ಸೇನೆಯ ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಆಪರೇಷನ್ ಶಕ್ತಿ ಅಡಿಯಲ್ಲಿ ಮೂರು ಯಶಸ್ವಿ ಪರಮಾಣು ಪರೀಕ್ಷೆಗಳನ್ನು ನಡೆಸಿತು. ಇದರ ನಂತರ, ಮೇ 13 ರಂದು ಮತ್ತೆ ಎರಡು ಪರಮಾಣು ಪರೀಕ್ಷೆಗಳನ್ನು ಡಾ ಎಪಿಜೆ ಅಬ್ದುಲ್ ಕಲಾಂ ಅವರ ಆಡಳಿತದಲ್ಲಿ ನಡೆಸಲಾಯಿತು. 1999 ರ ಮೇ 11 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಮಹತ್ವದ ಸಾಧನೆಯನ್ನು ಘೋಷಿಸಿದರು. ಮತ್ತು ಅಂದಿನಿಂದ, ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಗೌರವಿಸಲಾಗುತ್ತದೆ. ಮತ್ತು ಅವರ ತಾಂತ್ರಿಕ ಆವಿಷ್ಕಾರಗಳನ್ನು ಭಾರತದ ಬೆಳವಣಿಗೆಗೆ ಗಣನೀಯವಾಗಿವೆ.

1998 ರಲ್ಲಿ ಈ ದಿನದಂದು, ಭಾರತವು ಥರ್ಮೋನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳು ಮತ್ತು ವಿದಳನ ಬಾಂಬ್‌ಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿತ್ತು. ಭಾರತದ ಮೊದಲ ಸ್ವದೇಶಿ ವಿಮಾನ ಹಂಸ-1, ಹಾರಾಟ ನಡೆಸಿತು ಮತ್ತು ಡಿಆರ್​ಡಿಓ (DRDO) ಮೇಲ್ಮೈಯಿಂದ ಆಕಾಶಕ್ಕೆ ತ್ರಿಶೂಲ್ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು. ಈ ದಿನದಂದು ಪ್ರತಿ ವರ್ಷ ಭಾರತೀಯ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ, ಭಾರತದಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳು ವೈಜ್ಞಾನಿಕ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ರಾಷ್ಟ್ರೀಯ ತಂತ್ರಜ್ಞಾನ ದಿನ 2022: ಥೀಮ್

2022ರ ರಾಷ್ಟ್ರೀಯ ತಂತ್ರಜ್ಞಾನ ದಿನದ ಥೀಮ್ ಏನೆಂದರೆ “ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ವಿಧಾನ”. ಈ ವಿಷಯವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದರು.