HDFC Car Loan: ಎಚ್‌ಡಿಎಫ್‌ಸಿ ಬ್ಯಾಂಕ್ನಿಂದ 30 ನಿಮಿಷದಲ್ಲಿ ಕಾರು ಸಾಲ ನೀಡುವ ‘ಎಕ್ಸ್‌ಪ್ರೆಸ್ ಕಾರ್ ಲೋನ್ಸ್’
30 ನಿಮಿಷಗಳೊಳಗಾಗಿ ಕಾರು ಸಾಲ ನೀಡುವ ಎಕ್ಸ್‌ಪ್ರೆಸ್ ಕಾರ್ ಲೋನ್ಸ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ನಿಂದ ಆರಂಭಿಸಲಾಗಿದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.
ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ನಿಂದ (HDFC Bank) ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರು ಮತ್ತು ಹೊಸ ಗ್ರಾಹಕರಿಗಾಗಿ 30 ನಿಮಿಷಗಳ ‘ಎಕ್ಸ್‌ಪ್ರೆಸ್ ಕಾರ್ ಲೋನ್ಸ್’ ಅನ್ನು ಪ್ರಾರಂಭಿಸಲಾಗಿದೆ. ಖರೀದಿದಾರರು 20 ಲಕ್ಷದವರೆಗೆ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಸಾಲದ ಮೊತ್ತವನ್ನು 30 ನಿಮಿಷದೊಳಗೆ ಡೀಲರ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಶೇ 20ರಿಂದ 30ರಷ್ಟು ಗ್ರಾಹಕರು ರೂ. 20 ಲಕ್ಷದವರೆಗಿನ ಸಾಲಕ್ಕಾಗಿ ಈ ಹೊಸ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಬ್ಯಾಂಕ್ ನಿರೀಕ್ಷಿಸುತ್ತಿದೆ. ಎಕ್ಸ್‌ಪ್ರೆಸ್ ಸಾಲ ಸೌಲಭ್ಯವು ಪ್ರಸ್ತುತ ನಾಲ್ಕು-ಚಕ್ರದ ವಾಹನಗಳಿಗೆ ಲಭ್ಯವಿದ್ದು, ಶೀಘ್ರದಲ್ಲೇ ದ್ವಿಚಕ್ರ ವಾಹನಗಳಿಗೂ ಲಭ್ಯವಾಗಲಿದೆ. ಕಾರು ಖರೀದಿದಾರರಿಗೆ ಸಮಗ್ರ, ವೇಗದ, ಹೆಚ್ಚು ಅನುಕೂಲಕರ ಮತ್ತು ಅಂತರ್ಗತ ಡಿಜಿಟಲ್ ಪ್ರಯಾಣವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ರೂಪಿಸಿದೆ. ಇದು ಕಾರು ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ದೇಶದಾದ್ಯಂತ ಕಾರು ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
“ಈಗ ನಾವು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಎಂಡ್-ಟು-ಎಂಡ್ ಡಿಜಿಟಲ್ ಕಾರು ಸಾಲ ಪರಿಹಾರವನ್ನು ಪ್ರಾರಂಭಿಸುವ ಮೂಲಕ ಹೆಜ್ಜೆ ಹಾಕುತ್ತಿದ್ದೇವೆ. ಇದು ನಮ್ಮ ಎಲ್ಲ ಶಾಖೆಗಳು, ಡೀಲರ್‌ಶಿಪ್‌ಗಳು ಮತ್ತು ಅಂತಿಮವಾಗಿ ಥರ್ಡ್ ಪಾರ್ಟಿ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ,” ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ರೀಟೇಲ್ ಆಸ್ತಿಗಳ ದೇಶದ ಮುಖ್ಯಸ್ಥ ಅರವಿಂದ್ ಕಪಿಲ್ ಹೇಳಿದ್ದಾರೆ. “ಆಟೋಮೋಟಿವ್ ಎಕೋ ಸಿಸ್ಟಮ್ ವಿಕಸನಗೊಂಡಿದ್ದರೂ ಗ್ರಾಹಕರ ಅನುಭವವನ್ನು ಪರಿವರ್ತಿಸುವ ಮೂಲಕ ಗ್ರಾಹಕರಿಗೆ ವಿಶೇಷವಾಗಿ ಅರೆನಗರ ಮತ್ತು ಗ್ರಾಮೀಣ ಭಾರತದಲ್ಲಿನ ಮೌಲ್ಯವನ್ನು ಹೊರತರಲು ಇನ್ನೂ ಗಮನಾರ್ಹ ಅವಕಾಶವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಡಿಜಿಟಲ್ ನಮಗೆ ಜೀವನ ವಿಧಾನವಾಗಿದೆ ಮತ್ತು ಇದು ನಮ್ಮ ಪಥವನ್ನು ಹೆಚ್ಚುತ್ತಿರುವ ಬೆಳವಣಿಗೆಯಿಂದ ಭಾರೀ ಬೆಳವಣಿಗೆಗೆ ಬದಲಾಯಿಸಬಹುದು ಎಂದು ನಾವು ಬಲವಾಗಿ ನಂಬುತ್ತೇವೆ,” ಎಂದು ಅವರು ಹೇಳಿದ್ದಾರೆ.
ಭಾರತೀಯ ವಾಹನೋದ್ಯಮವು ಮುಂದಿನ 5ರಿಂದ 7 ವರ್ಷಗಳಲ್ಲಿ ಪ್ರತಿ ವರ್ಷ 35 ಮಿಲಿಯನ್ ಹೊಸ ವಾಹನ ಯೂನಿಟ್ ಮಾರಾಟದೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಉದ್ಯಮವಾಗಲು ಸಿದ್ಧವಾಗಿದೆ. ಸುಮಾರು ಒಂದು ದಶಕದಲ್ಲಿ ಇದು 350 ಮಿಲಿಯನ್‌ಗಿಂತಲೂ ಹೆಚ್ಚು 4 ಚಕ್ರ ವಾಹನಗಳು ಮತ್ತು 250 ಮಿಲಿಯನ್‌ಗಿಂತಲೂ ಹೆಚ್ಚು ದ್ವಿಚಕ್ರ ವಾಹನಗಳು ರಸ್ತೆಗಿಳಿಯುತ್ತವೆ ಎಂದು ಅಂದಾಜಿಸಲಾಗಿದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ