- Kannada News Photo gallery Actress Shilpa Shetty Take a break From Social media And shares a blank post
ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡ ಶಿಲ್ಪಾ ಶೆಟ್ಟಿ; ನಟಿಗೆ ಬೇಸರ ತರಿಸಿದ್ದೇನು?
ಈಗ ಶಿಲ್ಪಾ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಬ್ಲ್ಯಾಂಕ್ ಇರುವ ಫೋಟೋವನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ಒಂದೇ ರೀತಿಯ ವಿಚಾರ ಬೋರ್ ಆಗಿದೆ. ಎಲ್ಲವೂ ಒಂದೇ ರೀತಿಯಲ್ಲಿ ಕಾಣುತ್ತಿದೆ ಎಂದಿದ್ದಾರೆ ಅವರು.
Updated on: May 12, 2022 | 5:15 PM

ಸೆಲೆಬ್ರಿಟಿಗಳು ಫ್ಯಾನ್ಸ್ ಜತೆ ಕನೆಕ್ಟ್ ಆಗಲು ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಇದು ಅನಿವಾರ್ಯ ಕೂಡ ಆಗಿ ಬಿಡುತ್ತದೆ. ಶಿಲ್ಪಾ ಶೆಟ್ಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಿದ್ದರು. ಆದರೆ, ಈಗ ಅವರು ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲೂ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಲೇ ಇದ್ದರು.

ಈಗ ಶಿಲ್ಪಾ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಬ್ಲ್ಯಾಂಕ್ ಇರುವ ಫೋಟೋವನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ‘ಒಂದೇ ರೀತಿಯ ವಿಚಾರ ಬೋರ್ ಆಗಿದೆ. ಎಲ್ಲವೂ ಒಂದೇ ರೀತಿಯಲ್ಲಿ ಕಾಣುತ್ತಿದೆ. ಹೊಸ ವಿಚಾರ ಸಿಗುವ ವರೆಗೆ ನಾನು ಸೋಶಿಯಲ್ ಮೀಡಿಯಾದಿಂದ ದೂರ ಇರುತ್ತೇನೆ’ ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರ ಬಳಿ ಸೋಶಿಯಲ್ ಮೀಡಿಯಾದಿಂದ ದೂರ ಹೋಗದಂತೆ ಕೋರಿಕೊಂಡಿದ್ದಾರೆ. ‘ಇನ್ನೂ ಕೆಲವರು ಬ್ರೇಕ್ ತೆಗೆದುಕೊಂಡು ಬನ್ನಿ. ಹೊಸತನ ಸಿಗಲಿದೆ’ ಎಂದು ಹಾರೈಸಿದ್ದಾರೆ.

ಶಿಲ್ಪಾ ಶೆಟ್ಟಿ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, ಸಿನಿಮಾ ಕೆಲಸಗಳಲ್ಲಿ ಅವರು ಅಷ್ಟಾಗಿ ತೊಡಗಿಕೊಳ್ಳುತ್ತಿಲ್ಲ.



















