Trending | ಗೀತಾ ಭಾಟಿ ಚಪ್ಪಲಿಯನ್ನು ವಾಪಸ್ ಕೊಡ್ರಪ್ಪೋ ಎಂದ ಟ್ವೀಟಿಗರು

ರೈತರ ಪರ ಮತ್ತು ವಿರೋಧದ ವಿಚಾರವು ಟ್ವಿಟರ್​ನಲ್ಲೂ ಮುಂಚೂಣಿಯಲ್ಲಿದೆ. ಇಂಡಿಯಾ ಟ್ರೆಂಡ್ಸ್ ವಿಭಾಗದಲ್ಲಿ ಮೊದಲ ಮೂರು ಹ್ಯಾಷ್​ಟ್ಯಾಗ್​ಗಳು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.

Trending | ಗೀತಾ ಭಾಟಿ ಚಪ್ಪಲಿಯನ್ನು ವಾಪಸ್ ಕೊಡ್ರಪ್ಪೋ ಎಂದ ಟ್ವೀಟಿಗರು
ಗೀತಾ ಭಾಟಿ
Follow us
TV9 Web
| Updated By: ganapathi bhat

Updated on:Apr 07, 2022 | 5:34 PM

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಜೋರಾಗುತ್ತಿದ್ದು, ದೇಶಾದ್ಯಂತ ವಿವಿಧ ಪಕ್ಷ, ಸಂಘಟನೆಗಳು ರೈತರಿಗೆ ಬೆಂಬಲ ಸೂಚಿಸಿವೆ. ಅಷ್ಟೇ ಪ್ರಮಾಣದಲ್ಲಿ ಸರ್ಕಾರದ ಪರವಾದ ಅಭಿಪ್ರಾಯಗಳೂ ಕೇಳಿಬಂದಿವೆ.

ರೈತರ ಪರ ಮತ್ತು ವಿರೋಧದ ವಿಚಾರವು ಟ್ವಿಟರ್​ನಲ್ಲೂ ಮುಂಚೂಣಿಯಲ್ಲಿದೆ. ಇಂಡಿಯಾ ಟ್ರೆಂಡ್ಸ್ ವಿಭಾಗದಲ್ಲಿ ಮೊದಲ ಮೂರು ಹ್ಯಾಷ್​ಟ್ಯಾಗ್​ಗಳು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.

ಗೀತಾ ಭಾಟೀ ಚಪ್ಪಲಿಯನ್ನು ವಾಪಸ್ ಕೊಡಿ ಎಂದ ನೆಟ್ಟಿಗರು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ಭಾರತೀಯ ಏಕತಾ ಸಂಘದ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಭಾಟಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಚಪ್ಪಲಿ ಕಳೆದುಕೊಂಡಿರುವ ಅವರು, ಚಪ್ಪಲಿ ಕಳೆದುಹೋದದ್ದಕ್ಕೆ ಸರ್ಕಾರ ಮತ್ತು ಪೊಲೀಸರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅವರು ಹೀಗೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರು ಗೀತಾ ಭಾಟಿ ಚಪ್ಪಲಿಯನ್ನು ವಾಪಸ್ ಕೊಡ್ರಪ್ಪೋ ಎಂದು ತಮಾಷೆ ಮಾಡಿದ್ದಾರೆ. ‘ಗೀತಾ ಭಾಟೀಕಾ ಸ್ಯಾಂಡಲ್ ವಾಪಸ್ ಕರೋ’ ಎಂಬ ಹ್ಯಾಷ್​ಟ್ಯಾಗ್ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಇಂದು ಸಂಜೆಯ ವೇಳೆಗೆ ಒಟ್ಟು 22,800 ಟ್ವೀಟ್​ಗಳು ಆಗಿವೆ.

ನಾಳೆ ಭಾರತ್ ಬಂದ್ ಎಂದ ಟ್ವೀಟಿಗರು ನಾಳೆ ನಡೆಯಲಿರುವ ಭಾರತ್ ಬಂದ್ ಬೆಂಬಲಿಸಿ ಖಲ್ ಭಾರತ್ ಬಂದ್ ರಹೇಗಾ ಎಂಬ ಹ್ಯಾಷ್​ಟ್ಯಾಗ್ ಇಂದು ಮುಂಜಾನೆಯಿಂದ ಟ್ವಿಟರ್ ಟ್ರೆಂಡಿಂಗ್​ನಲ್ಲಿದೆ. ಈವರೆಗೆ ಒಟ್ಟು 1.75 ಲಕ್ಷ ಟ್ವೀಟ್ಸ್ ಆಗಿದ್ದು ಸದ್ಯ ಎರಡನೇ ಸ್ಥಾನದಲ್ಲಿದೆ.

ನರೇಂದ್ರ ಮೋದಿ ಪರ ರೈತರು ಭಾರತ್ ಬಂದ್​ಗೆ ವಿರೋಧ ವ್ಯಕ್ತಪಡಿಸಿರುವ ಪೋಸ್ಟ್​ಗಳೂ ಟ್ವಿಟರ್​ನಲ್ಲಿ ಹರಿದಾಡುತ್ತಿವೆ. ನರೇಂದ್ರ ಮೋದಿ ಪರವಾಗಿ, ನೂತನ ಕೃಷಿ ಮಸೂದೆಯನ್ನು ಬೆಂಬಲಿಸಿ ಹಲವರು ಟ್ವೀಟ್ ಮಾಡಿದ್ದಾರೆ. ‘ಕಿಸಾನ್ ಸ್ಟಾಂಡ್ಸ್ ವಿದ್ ಮೋದಿ’ ಎಂಬ ಹ್ಯಾಷ್​ಟ್ಯಾಗ್ ಟ್ವಿಟರ್ ಟ್ರೆಂಡಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿದೆ.

ನಾನೂ ಕೃಷಿಕ, ನಾನೂ ರೈತ ಆದರೆ ನಾನು ಭಾರತ್ ಬಂದ್ ಬೆಂಬಲಿಸುವುದಿಲ್ಲ. ನಾನು ಮೋದಿ ಪರ ವಹಿಸುತ್ತೇನೆ ಎಂಬ ಪೋಸ್ಟ್​ಗಳು ಕಾಣುತ್ತಿವೆ. ಇಂದು ಸಂಜೆಯ ವೇಳೆಗೆ ಒಟ್ಟು 28,500 ಟ್ವೀಟ್​ಗಳು ಆಗಿವೆ.

Published On - 7:12 pm, Mon, 7 December 20

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ