Guinness World Record: 75ರ ಹರೆಯದಲ್ಲಿ ಶೀರ್ಷಾಸನ ಮಾಡಿ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ
ಟೋನಿ ಹೆಲೌ ‘ಹೆಡ್ಸ್ಟಾಂಡ್’ ಮಾಡಿ ದಾಖಲೆ ಬರೆದ ವ್ಯಕ್ತಿಯಾಗಿದ್ದು, ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಅವರು 2021ರ ಅಕ್ಟೋಬರ್ 16ರಂದು ತಮ್ಮ 75ನೇ ವರ್ಷ ಮತ್ತು 33 ದಿನಗಳ ವಯಸ್ಸಿನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.
‘ಹೆಡ್ಸ್ಟಾಂಡ್’ (Headstand) ಭಂಗಿಯಲ್ಲಿ ನಿಂತು 75 ವರ್ಷದ ವೃದ್ಧರೋರ್ವರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಯೋಗದ ಪರಿಭಾಷೆಯಲ್ಲಿ ‘ಶೀರ್ಷಾಸನ’ ಎಂದು ಕರೆಯಲಾಗುವ ಈ ಆಸನವನ್ನು ಇಂಗ್ಲೀಷ್ನಲ್ಲಿ ಸಾಮಾನ್ಯವಾಗಿ ಹೆಡ್ಸ್ಟಾಂಡ್ ಎನ್ನಲಾಗುತ್ತದೆ. ಇದನ್ನು ಜಿಮ್ನಾಸ್ಟಿಕ್ಸ್, ಏರೋಬಿಕ್ಸ್, ನೃತ್ಯ ಸೇರಿದಂತೆ ವಿವಿಧ ಕಸರತ್ತುಗಳಲ್ಲಿ ಬಳಸಲಾಗುತ್ತದೆ. ಈ ಆಸನವನ್ನು ಮಾಡುವವರಿಗೆ ಸರಿಯಾದ ಪರಿಣತಿ ಬೇಕು. ತುಸು ಹೆಚ್ಚುಕಡಿಮೆಯಾದರೂ ತಲೆ ಅಥವಾ ಕುತ್ತಿಗೆಗೆ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಯುವಕರು ಸಲೀಸಾಗಿ ಮಾಡಬಹುದಾದ ಈ ಆಸನವನ್ನು ವಯಸ್ಸಾದವರು ಮಾಡುವುದು ಕಡಿಮೆ. ಅವರಿಗೆ ಇದನ್ನು ಮಾಡುವಂತೆ ಶಿಫಾರಸು ಮಾಡುವುದು ಕೂಡ ವಿರಳ. 60-70 ವರ್ಷ ವಯಸ್ಸಾದವರು ದೇಹವನ್ನು ಶೀರ್ಷಾಸನಕ್ಕೆ ತಕ್ಕ ಹಾಗೆ ಬ್ಯಾಲೆನ್ಸ್ ಮಾಡುವುದು ಕಷ್ಟವಾದ್ದರಿಂದ ಅವರಿಗೆ ಈ ಆಸನ ಮಾಡುವಂತೆ ಯಾರೂ ಶಿಫಾರಸು ಮಾಡುವುದಿಲ್ಲ. ಇದೀಗ ಕೆನಡಾದ 75ರ ಹರೆಯದ ವ್ಯಕ್ತಿಯೋರ್ವರು ‘ಹೆಡ್ಸ್ಟಾಂಡ್’ ಮಾಡಿ ಗಿನ್ನೆಸ್ ದಾಖಲೆ (Guinness World Record) ನಿರ್ಮಿಸಿದ್ದಾರೆ.
ಟೋನಿ ಹೆಲೌ ‘ಹೆಡ್ಸ್ಟಾಂಡ್’ ಮಾಡಿ ದಾಖಲೆ ಬರೆದ ವ್ಯಕ್ತಿಯಾಗಿದ್ದು, ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಅವರು 2021ರ ಅಕ್ಟೋಬರ್ 16ರಂದು ತಮ್ಮ 75ನೇ ವರ್ಷ ಮತ್ತು 33 ದಿನಗಳ ವಯಸ್ಸಿನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಟೋನಿ ಹೆಲೌ ಅವರು ಹೆಡ್‌ಸ್ಟ್ಯಾಂಡ್ ಪ್ರದರ್ಶಿಸುತ್ತಿರುವ ಕ್ಲಿಪ್ ಅನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
New record: Oldest person to perform a headstand – Tony Helou, 75 years and 33 days old
From Deux-Montagnes, Quebec, Canada, Tony performs a headstand after doing his 20-minute morning jog and some push-ups…
— Guinness World Records (@GWR) May 11, 2022
ಟೋನಿ ಹೆಲೌ ಅವರ ಕಸರತ್ತಿನ ವಿಡಿಯೋ ಇಲ್ಲಿದೆ:
View this post on Instagram
ಈ ಸಾಧನೆಗೆ ತಮ್ಮ ಕುಟುಂಬವೇ ಸ್ಫೂರ್ತಿ ಎಂದಿರುವ ಟೋನಿ ಹೆಲೌ, ಯಾವ ವಯಸ್ಸಿನವರೂ ಸಾಧಿಸಿ ತೋರಿಸಬಹುದು ಎಂದು ಸಾಬೀತುಪಡಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ. ತಂದೆಯ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ಟೋನಿ ಅವರ ಪುತ್ರಿ ರೋಲಾ ಹೆಲೌ, ‘‘ಅವರು ಮಾಡುವ ಆಸನವನ್ನು ನೋಡಿ ಜನರು ವಿಸ್ಮಯಗೊಳ್ಳುತ್ತಾರೆ. ಜನರ ಅಚ್ಚರಿಯ ಪ್ರತಿಕ್ರಿಯೆ ತಂದೆಗೆ ಮತ್ತಷ್ಟು ಪ್ರೇರಣೆ’’ ಎಂದಿದ್ದಾರೆ.
ಪ್ರಸ್ತುತ ಟೋನಿ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಕಸರತ್ತಿಗೆ ಜನರು ತಲೆದೂಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ