- Kannada News Photo gallery Andrew Symonds lesser known facts curious habits childhood and nick name details inside
Andrew Symonds: ಆಂಡ್ರ್ಯೂ ಸೈಮಂಡ್ಸ್ ಬಗ್ಗೆ ಬಹುತೇಕರಿಗೆ ತಿಳಿದಿರದ ಅಚ್ಚರಿಯ ಸಂಗತಿಗಳಿವು
Andrew Symonds Death: ಆಂಡ್ರ್ಯೂ ಸೈಮಂಡ್ಸ್ ಶನಿವಾರ (ಮೇ.14) ರಾತ್ರಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಸೈಮಂಡ್ಸ್ ಅವರ ವೃತ್ತಿಜೀವನದಂತೆಯೇ ವೈಯಕ್ತಿಕ ಜೀವನವೂ ವರ್ಣರಂಜಿತವಾಗಿದೆ.
Updated on: May 15, 2022 | 2:02 PM



ಆಂಡ್ರ್ಯೂ ಸೈಮಂಡ್ಸ್ ಕ್ರಿಕೆಟ್ ಆಡಲು ಇಂಗ್ಲೆಂಡ್ ಬದಲಾಗಿ ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿದರು. 1995 ರಲ್ಲಿ ಇಂಗ್ಲೆಂಡ್‌ನ ಎ ತಂಡದಲ್ಲಿ ಸೈಮಂಡ್ಸ್ ಅವರಿಗೆ ಸ್ಥಾನ ನೀಡಲಾಗಿತ್ತು. ಅದಾಗ್ಯೂ ಅವರು ಆ ಅವಕಾಶವನ್ನು ನಿರಾಕರಿಸಿದರು.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ತಂಡಕ್ಕೆ ಸೈಮಂಡ್ಸ್ ಆಯ್ಕೆಯಾದರು. ಇಂಗ್ಲೆಂಡ್ ವಿರುದ್ಧ 108 ರನ್ ಗಳಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿತ್ತು.

ಸೈಮಂಡ್ಸ್ ತಮ್ಮ 23ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ ನಂತರದ ಐದು ವರ್ಷಗಳ ಕಾಲ ಅವರಿಂದ ಸ್ಥಿರ ಪ್ರದರ್ಶನ ಬರಲಿಲ್ಲ. ಹೀಗಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಸೈಮಂಡ್ಸ್ ಕ್ರಿಕೆಟ್ ತ್ಯಜಿಸಲೂ ಕೂಡ ಯೋಚಿಸಿದ್ದರು.

2002ರಲ್ಲಿ ಅವರು ಕ್ರಿಕೆಟ್‌ನಿಂದ ರಗ್ಬಿ ಆಟದಲ್ಲಿ ತೊಡಗಿಸಿಕೊಂಡರು. ಬ್ರಿಸ್ಬೇನ್ ಬ್ರಾಂಕೋಸ್ ರಗ್ಬಿ ತಂಡದೊಂದಿಗೆ ತರಬೇತಿಯನ್ನೂ ಸೈಮಂಡ್ಸ್ ಪ್ರಾರಂಭಿಸಿದ್ದರು. ಆದರೆ 2003ರ ವಿಶ್ವಕಪ್ನಲ್ಲಿ ಸೈಮಂಡ್ಸ್ ಅಚ್ಚರಿಯಾಗಿ ಆಯ್ಕೆಯಾಗಿ ಅದ್ಭುತ ಪ್ರದರ್ಶನ ತೋರಿದ್ದರು. ಅಲ್ಲಿಂದ ಅವರು ಆಸ್ಟ್ರೇಲಿಯಾ ತಂಡದಲ್ಲಿ ಸತತವಾಗಿ ಅವಕಾಶ ಪಡೆದರು.

ಆಂಡ್ರ್ಯೂ ಸೈಮಂಡ್ಸ್‌ಗೆ ಮೀನುಗಾರಿಕೆಯೆಂದರೆ ಪ್ರಾಣ. ಮ್ಯಾಥ್ಯೂ ಹೇಡನ್ ಜತೆಗೂ ಮೀನು ಹಿಡಿಯಲು ಸೈಮಂಡ್ಸ್ ಒಮ್ಮೆ ತೆರಳಿದ್ದರು.

ಆಸ್ಟ್ರೇಲಿಯಾ ಆಟಗಾರರು ಸೈಮಂಡ್ಸ್ರನ್ನು ಪ್ರೀತಿಯಿಂದ ರಾಯ್ ಎಂದು ಕರೆಯುತ್ತಿದ್ದರು.

ಆಂಡ್ರ್ಯೂ ಸೈಮಂಡ್ಸ್



















