Thomas Cup 2022: 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್​ನಲ್ಲಿ ಭಾರತ ಚಾಂಪಿಯನ್!

Thomas Cup 2022: 73 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಈ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿತ್ತು. ಈ ಹಿಂದೆ ಭಾರತ ಒಮ್ಮೆ ಮಾತ್ರ ಸೆಮಿಫೈನಲ್ ತಲುಪಿತ್ತು.

|

Updated on:May 15, 2022 | 4:04 PM

ಭಾರತ ಪುರುಷರ ತಂಡ ಥಾಮಸ್ ಕಪ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿದೆ. 73 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಈ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿತ್ತು. ಈ ಹಿಂದೆ ಭಾರತ ಒಮ್ಮೆ ಮಾತ್ರ ಸೆಮಿಫೈನಲ್ ತಲುಪಿತ್ತು.

1 / 5
1952 ರಲ್ಲಿ ಭಾರತ ಈ ಪಂದ್ಯಾವಳಿಯಲ್ಲಿ ಬಾಗವಹಿಸಿ, ಅಂತಿಮ ಸುತ್ತಿನ ಅಂತರ-ವಲಯದಲ್ಲಿ ಮೂರನೇ ಸ್ಥಾನ ಗಳಿಸಿತು. ಇದಾದ ನಂತರ 1955ರಲ್ಲಿಯೂ ಅದೇ ಜಾಗದಲ್ಲಿ ಉಳಿಯಿತು. 1973 ರಲ್ಲಿ, ಭಾರತದ ಪ್ರದರ್ಶನ ಕುಂಠಿತಗೊಂಡು ಐದನೇ ಸ್ಥಾನವನ್ನು ತಲುಪಿತು.

2 / 5
Thomas Cup 2022: 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್​ನಲ್ಲಿ ಭಾರತ ಚಾಂಪಿಯನ್!

ಈ ವರ್ಷಕ್ಕಿಂತ ಮೊದಲು 1979ರಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಅನುಭವಿ ಆಟಗಾರ ಪ್ರಕಾಶ್ ಪಡುಕೋಣೆ ನಾಯಕತ್ವದಲ್ಲಿ ತಂಡವು ಮೊದಲ ಬಾರಿಗೆ ಸೆಮಿಫೈನಲ್ ತಲುಪಿತ್ತು. ಈ ತಂಡವು ಸೈಯದ್ ಮೋದಿ ಮತ್ತು ಪಾರ್ಥೋ ಅವರಂತಹ ಆಟಗಾರರನ್ನು ಒಳಗೊಂಡಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 2-7 ಅಂತರದಿಂದ ಸೋತಿತ್ತು.

3 / 5
Thomas Cup 2022: 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್​ನಲ್ಲಿ ಭಾರತ ಚಾಂಪಿಯನ್!

ಭಾರತ ಕೂಡ 3 ಬಾರಿ ಕ್ವಾರ್ಟರ್ ಫೈನಲ್ ತಲುಪಿತ್ತು. 2006ರಲ್ಲಿ ಚೇತನ್ ಆನಂದ್, ಅರವಿಂದ್ ಭಟ್ ಅವರಂತಹ ಸ್ಟಾರ್ ಗಳಿಂದ ಕಂಗೊಳಿಸುತ್ತಿದ್ದ ತಂಡ ಕ್ವಾರ್ಟರ್ ಫೈನಲ್ ತಲುಪಿತ್ತು. ಇದಾದ ನಂತರ 2010ರಲ್ಲೂ ಭಾರತ ಕ್ವಾರ್ಟರ್ ಫೈನಲ್ ತಲುಪಿತ್ತು. ಆ ತಂಡದಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಪಿ ಕಶ್ಯಪ್ ಕೂಡ ಸೇರಿದ್ದರು. 2020ರಲ್ಲೂ ತಂಡ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು.

4 / 5
Thomas Cup 2022: 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್​ನಲ್ಲಿ ಭಾರತ ಚಾಂಪಿಯನ್!

ಇದಲ್ಲದೇ ಹೆಚ್ಚಿನ ಬಾರಿ ಪುರುಷರ ತಂಡ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ಅವರು 1988 ರಲ್ಲಿ 8 ನೇ ಸ್ಥಾನ, 2000 ರಲ್ಲಿ 7 ನೇ, 2014 ರಲ್ಲಿ 11 ನೇ ಮತ್ತು 2016 ರಲ್ಲಿ 13 ನೇ ಸ್ಥಾನದಲ್ಲಿದ್ದರು. 2018 ರಲ್ಲಿ, ಅವರು 10 ನೇ ಸ್ಥಾನದಲ್ಲಿ ಉಳಿಯುವ ಮೂಲಕ ಪ್ರಯಾಣವನ್ನು ಮುಗಿಸಿದರು.

5 / 5

Published On - 3:45 pm, Sun, 15 May 22

Follow us