IPL 2022: SRH ಸೋತಿದ್ದು RCB ತಂಡಕ್ಕೆ ಪ್ಲಸ್ ಪಾಯಿಂಟ್

IPL 2022 Rcb Playoffs Chances: ಆರ್​ಸಿಬಿ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್​ ಹೆಚ್ಚಿಸಿಕೊಳ್ಳಬೇಕು.

IPL 2022: SRH ಸೋತಿದ್ದು RCB ತಂಡಕ್ಕೆ ಪ್ಲಸ್ ಪಾಯಿಂಟ್
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 15, 2022 | 2:52 PM

IPL 2022: ಐಪಿಎಲ್​ ಸೀಸನ್​ 15 ರಲ್ಲಿ ಆರ್​ಸಿಬಿ (RCB) ತಂಡಕ್ಕೆ ಇನ್ನು ಕೇವಲ ಒಂದು ಪಂದ್ಯ ಮಾತ್ರವಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ಪ್ಲೇಆಫ್​ಗೆ ಪ್ರವೇಶಿಸಬಹುದು. ಆದರೆ ಅತ್ತ ಪ್ಲೇಆಫ್ ರೇಸ್​ನಲ್ಲಿದ್ದ ಮೂರು ತಂಡಗಳಲ್ಲಿ ಒಂದು ತಂಡವು ಸೋತಿರುವುದು ಇದೀಗ ಆರ್​ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಅಗಿದೆ. ಏಕೆಂದರೆ ಈ ಹಿಂದೆ ಪ್ಲೇಆಫ್ ರೇಸ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ , ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳಿದ್ದವು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಸೋಲುವ ಮೂಲಕ ಇದೀಗ ಎಸ್​ಆರ್​ಹೆಚ್ ತಂಡವು ಪ್ಲೇಆಫ್ ರೇಸ್​ನಿಂದ ಬಹುತೇಕ ಹೊರಬಿದ್ದಿದೆ.

ಏಕೆಂದರೆ ಎಸ್​ಆರ್​ಹೆಚ್ ತಂಡಕ್ಕೆ ಇನ್ನು ಉಳಿದಿರುವುದು ಕೇವಲ 2 ಪಂದ್ಯ ಮಾತ್ರ. ಈ ಎರಡು ಪಂದ್ಯಗಳಲ್ಲಿ ಗೆದ್ದರೂ ಎಸ್​ಆರ್​ಹೆಚ್ ಪಾಯಿಂಟ್ 14 ಆಗಲಿದೆ. ಆದರೆ ಅತ್ತ ಆರ್​ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ 16 ಪಾಯಿಂಟ್ಸ್​ ಗಳಿಸಲಿದೆ. ಈ ಮೂಲಕ ಪ್ಲೇಆಫ್​ ಪ್ರವೇಶಿಸಬಹುದು. ಇತ್ತ ಎಸ್​ಆರ್​ಹೆಚ್ ತಂಡವು ಕೆಕೆಆರ್ ವಿರುದ್ದ ಸೋಲುವುದರೊಂದಿಗೆ ಆರ್​ಸಿಬಿಗೆ ಪ್ಲೇಆಫ್​ ರೇಸ್​ನಿಂದ ಒಂದು ತಂಡದ ಪೈಪೋಟಿ ಕಡಿಮೆಯಾಗಿದೆ.

ಆದರೆ ಆರ್​ಸಿಬಿ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ 16 ಪಾಯಿಂಟ್ಸ್​ ಪಡೆದರೂ ಪ್ಲೇಆಫ್​ ಕನ್​ಫರ್ಮ್ ಆಗುವುದಿಲ್ಲ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳಿಗೂ 16 ಪಾಯಿಂಟ್ಸ್​ಗಳಿಸುವ ಅವಕಾಶವಿದೆ. ಹೀಗಾಗಿ ಈ ಎರಡು ತಂಡಗಳು ಹೆಚ್ಚಿನ್ ರನ್​ ರೇಟ್​ನೊಂದಿಗೆ ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ನಾಲ್ಕನೇ ಸ್ಥಾನಕ್ಕೇರಬಹುದು. ಇದರೊಂದಿಗೆ ಆರ್​ಸಿಬಿ ತಂಡವು ಪ್ಲೇಆಫ್​ನಿಂದ ಹೊರಬೀಳಬಹುದು.

ಇದನ್ನೂ ಓದಿ
Image
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
Image
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!
Image
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
Image
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!

ಆರ್​ಸಿಬಿ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್​ ಹೆಚ್ಚಿಸಿಕೊಳ್ಳಬೇಕು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂದಿನ ಪಂದ್ಯದಲ್ಲಿ ಸೋತರೆ ನೆಟ್ ರನ್​ ರೇಟ್ ಅವಶ್ಯಕತೆಯಿಲ್ಲದೆ ಆರ್​ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ.

ಅಂದರೆ ಗುಜರಾತ್ ಟೈಟನ್ಸ್ ವಿರುದ್ದದ ಗೆಲುವಿನೊಂದಿಗೆ ಆರ್​ಸಿಬಿ ತಂಡದ ಪ್ಲೇಆಫ್ ನಿರ್ಧಾರವಾಗಲಿದೆ. ಆದರೆ ಇತ್ತ ಪಂಜಾಬ್ ಕಿಂಗ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳಲ್ಲಿ ಒಂದು ತಂಡವು 16 ಪಾಯಿಂಟ್ಸ್​ ಕಲೆಹಾಕಿದರೆ ಆರ್​ಸಿಬಿ ತಂಡದ ಸ್ಥಾನಕ್ಕೆ ಕುತ್ತು ಬರಬಹುದು. ಏಕೆಂದರೆ ಆರ್​ಸಿಬಿ ತಂಡದ ನೆಟ್​ ರನ್​ ರೇಟ್ ಮೈನಸ್​ (-0.323) ಇದ್ದು ಉಳಿದ ತಂಡಗಳ ನೆಟ್ ರನ್​ ರೇಟ್​ ಪ್ಲಸ್​ನಲ್ಲಿದೆ. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದ ಗೆಲುವಿನ ಜೊತೆ ಆರ್​ಸಿಬಿ ತಂಡವು ಉತ್ತಮ ನೆಟ್ ರನ್​ ರೇಟ್ ಕೂಡ ಸಂಪಾದಿಸಬೇಕಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Sun, 15 May 22

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ