IPL 2022: ಸಿಕ್ಸ್ಗಳ ಸುರಿಮಳೆ: ಐಪಿಎಲ್ನಲ್ಲಿ ಹೊಸ ದಾಖಲೆ
IPL 2022: ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ಗಳು ಬಾರಿಸಿದ್ದು, ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ಗಳು ಮೂಡಿಬಂದ ಸೀಸನ್ ಎಂಬ ದಾಖಲೆಯನ್ನು ಐಪಿಎಲ್ 2022 ತನ್ನದಾಗಿಸಿಕೊಂಡಿದೆ.
Updated on:May 15, 2022 | 5:30 PM

ಐಪಿಎಲ್ನಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆ ಸಾಮಾನ್ಯ. ಆದರೆ ಈ ಬಾರಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಮೂಡಿಬಂದಿರುವುದು ವಿಶೇಷ. ಅಂದರೆ ಐಪಿಎಲ್ನ ಮೊದಲ ಸೀಸನ್ (2008) ನಲ್ಲಿ ಒಟ್ಟು 619 ಸಿಕ್ಸ್ಗಳು ಮೂಡಿಬಂದಿತ್ತು. ಇದಾದ ಮರುವರ್ಷ, ಅಂದರೆ 2009 ರಲ್ಲಿ ಮೂಡಿಬಂದ ಸಿಕ್ಸ್ಗಳ ಸಂಖ್ಯೆ ಕೇವಲ 442 ಸಿಕ್ಸ್ಗಳು ಮಾತ್ರ.

ಆದರೆ 2012 ರಲ್ಲಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 700 ಸಿಕ್ಸ್ಗಳು ಮೂಡಿಬಂದಿತ್ತು. ಅಂದರೆ ನಾಲ್ಕನೇ ಸೀಸನ್ ಐಪಿಎಲ್ನಲ್ಲಿ ಒಟ್ಟು 731 ಸಿಕ್ಸ್ಗಳನ್ನು ಬಾರಿಸಿದ್ದರು.

ಇದಾದ ಬಳಿಕ 2018 ರಲ್ಲಿ ಮೊದಲ ಬಾರಿಗೆ 800 ಸಿಕ್ಸ್ಗಳ ಗಡಿದಾಟಿತ್ತು. ಆ ಸೀಸನ್ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 872. ಆ ನಂತರ 2019 ರಲ್ಲಿ784 ಸಿಕ್ಸ್ಗಳು ಹಾಗೂ 2020 ರಲ್ಲಿ 734 ಸಿಕ್ಸ್ಗಳು ಮೂಡಿಬಂದಿತ್ತು.

ಇದೀಗ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿ 800 ಸಿಕ್ಸ್ಗಳ ಗಡಿದಾಟಿದೆ. ವಿಶೇಷ ಎಂದರೆ ಈ ಬಾರಿ 2018 ರಲ್ಲಿ ದಾಖಲಾಗಿದ್ದ 872 ಸಿಕ್ಸ್ಗಳನ್ನು ದಾಟಿ ಹೊಸ ಇತಿಹಾಸ ನಿರ್ಮಿಸಿದೆ.

ಐಪಿಎಲ್ ಸೀಸನ್ 15 ನಲ್ಲಿ ಇದುವರೆಗೆ 873 ಸಿಕ್ಸ್ಗಳು ಮೂಡಿಬಂದಿದ್ದು, ಈ ಮೂಲಕ ಐಪಿಎಲ್ನಲ್ಲಿ ನಿರ್ಮಾಣವಾಗಿದ್ದ ಸೀಸನ್ವೊಂದರ 872 ಸಿಕ್ಸ್ಗಳ ದಾಖಲೆ ಈ ಬಾರಿ ಮುರಿಯಲ್ಪಟ್ಟಿದೆ.

ಇನ್ನು ಕೆಲ ಲೀಗ್ ಪಂದ್ಯಗಳು ಹಾಗೂ ಪ್ಲೇಆಫ್ ಪಂದ್ಯಗಳಿರುವ ಕಾರಣ ಈ ಸಲ ಸಿಕ್ಸ್ಗಳ ಸಂಖ್ಯೆ 900 ದಾಟಲಿದೆಯಾ ಕಾದು ನೋಡಬೇಕಿದೆ.
Published On - 5:30 pm, Sun, 15 May 22



















