- Kannada News Photo gallery A R Rahman daughter Khatija Rahman and Riyasdeen Shaik Mohamed marriage photos
ಎ.ಆರ್. ರೆಹಮಾನ್ ಮಗಳು ಖತಿಜಾ ಮದುವೆ ಫೋಟೋಸ್ ವೈರಲ್; ಶುಭ ಹಾರೈಸಿದ ಸೆಲೆಬ್ರಿಟಿಗಳು
ಎ.ಆರ್. ರೆಹಮಾನ್ ಪುತ್ರಿ ಖತಿಜಾ ರೆಹಮಾನ್ ಅವರನ್ನು ಕೈ ಹಿಡಿದಿರುವ ರಿಯಾಸ್ದೀನ್ ಶೇಖ್ ಮೊಹಮ್ಮದ್ ಕೂಡ ಸಂಗೀತವನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರು ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
Updated on:May 06, 2022 | 3:01 PM

A R Rahman daughter Khatija Rahman and Riyasdeen Shaik Mohamed marriage photos

A R Rahman daughter Khatija Rahman and Riyasdeen Shaik Mohamed marriage photos

ಮಗಳ ಮದುವೆಯ ಖುಷಿಯ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಎ.ಆರ್. ರೆಹಮಾನ್ ಅವರು ಎಲ್ಲರ ಶುಭ ಹಾರೈಕೆ ಬೇಡಿದ್ದಾರೆ. ‘ಈ ದಂಪತಿ ಮೇಲೆ ದೇವರ ಕೃಪೆ ಇರಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗಳಿಗಾಗಿ ಮುಂಚಿತವಾಗಿಯೇ ಧನ್ಯವಾದಗಳು’ ಎಂದು ಎ.ಆರ್. ರೆಹಮಾನ್ ಬರೆದುಕೊಂಡಿದ್ದಾರೆ.

2021ರ ಡಿಸೆಂಬರ್ 29ರಂದು ರಿಯಾಸ್ದೀನ್ ಶೇಖ್ ಮೊಹಮ್ಮದ್ ಮತ್ತು ಖತಿಜಾ ರೆಹಮಾನ್ ನಿಶ್ಚಿತಾರ್ಥ ನೆರವೇರಿತ್ತು. ಖತಿಜಾ ರೆಹಮಾನ್ ಅವರು ಕೂಡ ಸಂಗೀತದಲ್ಲಿ ಪಳಗಿದ್ದಾರೆ. ಅನೇಕ ಸಿನಿಮಾ ಗೀತೆಗಳನ್ನು ಅವರು ಹಾಡಿದ್ದಾರೆ.

ಮದುವೆ ನಂತರದ ಫೋಟೋ ಹಂಚಿಕೊಂಡಿರುವ ಖತಿಜಾ ರೆಹಮಾನ್ ಅವರು, ‘ಇದು ನನ್ನ ಜೀವನದ ಬಹುನಿರೀಕ್ಷಿತ ದಿನ’ ಎಂದು ಬರೆದುಕೊಂಡಿದ್ದಾರೆ. ಖತಿಜಾ ಮತ್ತು ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರಿಗೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.
Published On - 3:01 pm, Fri, 6 May 22
























