AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hypertension Day 2022 : ‘ಪಕ್ಷಿಲೋಕವೇ ನನ್ನ ಹೃದಯದ ಡಾಕ್ಟರ್’ ಡಾ. ನಿಸರ್ಗ

Dr Nisarga : ನೀವು ಯಾವುದಕ್ಕಾದರೂ ಕುತೂಹಲದಿಂದ ಒಮ್ಮೆ ತೆರೆದುಕೊಂಡರೆ ಸಾಕು. ಅದು ತಾನಾಗಿಯೇ ಆಹ್ವಾನಿಸಲು ಶುರು ಮಾಡುತ್ತದೆ. ಅದನ್ನು ಅನುಭವಿಸಬೇಕು. ಅದು ತೋರುವ ದಾರಿಗೆ ತೆರೆದುಕೊಳ್ಳುತ್ತಾ ಹೋಗಬೇಕು. ಆಗಲೇ ಸೌಂದರ್ಯ ಪ್ರಜ್ಞೆ ಅರಿವಾಗುವುದು.

World Hypertension Day 2022 : ‘ಪಕ್ಷಿಲೋಕವೇ ನನ್ನ ಹೃದಯದ ಡಾಕ್ಟರ್’ ಡಾ. ನಿಸರ್ಗ
ಡಾ. ನಿಸರ್ಗ, ಹೃದಯ ಶಸ್ತ್ರಚಿಕಿತ್ಸಕ, ಕಿಮ್ಸ್, ಹೈದರಾಬಾದ್
ಶ್ರೀದೇವಿ ಕಳಸದ
|

Updated on:May 17, 2022 | 4:14 PM

Share

Bird Photography : ಹೃದಯ ಶಸ್ತ್ರ ಚಿಕಿತ್ಸಕನಾದ ನಾನೂ ಕೂಡ ನನ್ನ ಹೃದಯದ ಬಡಿತದ ಕಡೆ ಗಮನ ಕೊಡಲೇಬೇಕಾಗುತ್ತದೆ.  ಸಾಕಷ್ಟು ಸಲ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ನನ್ನೊಳಗನ್ನು ತಡವಿ ಒತ್ತಡ ಸೃಷ್ಟಿಮಾಡುತ್ತಿರುತ್ತದೆ. ಆಗ ಅದು ನನ್ನ ಅರಿವಿಗೆ ಬರುತ್ತಿದ್ದಂತೆ ಅದರಿಂದ ಹೊರಬರಲು ನನ್ನ ಮನಸ್ಸಿಗೆ ನಾನೇ ಸೂಚನೆ ಕೊಟ್ಟುಕೊಳ್ಳಲು ಪ್ರಾರಂಭಿಸುತ್ತೇನೆ. ಸಮಾಧಾನ, ಇದು ಈ ಕ್ಷಣದ ಒತ್ತಡ ಮಾತ್ರ. ಇದರಿಂದ ಹೊರಬರಲೇಬೇಕು ಅಂತೆಲ್ಲ. ಬಹುಶಃ ಇದು ನಮ್ಮನ್ನು ನಾವು ಸೂಕ್ಷ್ಮವಾಗಿ ಗಮನಿಸಿಕೊಳ್ಳುವ ಅಭ್ಯಾಸವಿರುವ ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ. ನಮ್ಮ ಮನಸ್ಸು ಭಾರವಾಗುವುದು ಹೇಗೆ ಗೊತ್ತಾಗುತ್ತದೆಯೋ ಮನಸ್ಸು ಹಗೂರವಾಗುವುದೂ ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ. ಇದರ ಮಧ್ಯೆ ನಮ್ಮ ದೇಹದಲ್ಲಿ ಏರುಪೇರಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದೇ. ಈ ಭಾರ ಮತ್ತು ಹಗೂರದ ಮಧ್ಯೆ ಉಸಿರಾಟಕ್ಕಾಗಿ ಏನಾದರೊಂದು ಸಾಧನ ಬೇಕಲ್ಲ? ಇತ್ತೀಚಿನ ಎರಡು ವರ್ಷಗಳಲ್ಲಿ ನನ್ನನ್ನು ಆವರಿಸಿಕೊಂಡಿರುವುದು ಕುಳಿತ ಹಕ್ಕಿಗಳನ್ನು ಸೆರೆಹಿಡಿಯುವ ಧ್ಯಾನವಲ್ಲ, ಹಾರುತ್ತ ಸವಾಲೆಸೆಯುವಂಥ ಹಕ್ಕಿಗಳ ಚಲನಾಲೋಕ. ಡಾ. ನಿಸರ್ಗ, ಹೃದಯ ಶಸ್ತ್ರಚಿಕಿತ್ಸಕ, ಕಿಮ್ಸ್, ಹೈದರಾಬಾದ್  

ನಿರಂತರವಾಗಿ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಮುಳುಗಿ ಹೋಗುವ ನನಗೆ ಕೊವಿಡ್ ಸಮಯದಲ್ಲಿ ಸ್ವಲ್ಪ ಸಮಯ ಸಿಕ್ಕಿತು ಎನ್ನಬಹುದು. ಆಗ ಕ್ಯಾಮೆರಾ ತೆಗೆದುಕೊಂಡು ಸಂಜೆಯೋ ಬೆಳಗ್ಗೆಯೋ ಸುತ್ತಾಡತೊಡಗಿದೆ. ಅದೆಷ್ಟು ಹೊಸಬಗೆಯ ವಿಷಯ, ವಿಚಾರಗಳಿಗೆ ನಿಸರ್ಗದಲ್ಲಿ ಎನ್ನಿಸತೊಡಗಿತು. ಬಹುಶಃ ನಾನೇ ಕಣ್ಣುಮುಚ್ಚಿಕೊಂಡಿದ್ದೆನೇನೋ. ಸಾಕಷ್ಟು ಪ್ರಾಣಿಗಳ ಹೆಸರುಗಳು ಗೊತ್ತು. ಅವುಗಳ ಚಲನವಲನವೂ. ಆದರೆ ಪುಟ್ಟಹಕ್ಕಿಗಳ ಪ್ರಭೇದ, ಅವುಗಳ ಮನಸ್ಥಿತಿ, ಜೀವನಗತಿ, ಸ್ವಭಾವ ಅದೆಲ್ಲ ನಮಗೆ ಎಷ್ಟು ಗೊತ್ತಿರಲಿಕ್ಕೆ ಸಾಧ್ಯ? ಈ ಕುತೂಹಲವೇ ನನ್ನನ್ನು ಮೌನವಾಗಿ ಕಾಯುವಂತೆ ಮಾಡಲು ಕಲಿಸಿತು. ಗಂಟೆಗಟ್ಟಲೆ ಕಾಯ್ದು ನೂರಾರು ಕ್ಲಿಕ್ ಮಾಡಿದಾಗ ದಕ್ಕುತ್ತಿದ್ದದ್ದು ಒಂದೋ ಎರಡು ಫೋಟೋ. ನೀವು ಯಾವುದಕ್ಕಾದರೂ ಕುತೂಹಲದಿಂದ ಒಮ್ಮೆ ತೆರೆದುಕೊಂಡರೆ ಸಾಕು. ಅದು ತಾನಾಗಿಯೇ ಆಹ್ವಾನಿಸಲು ಶುರು ಮಾಡುತ್ತದೆ. ಅದನ್ನು ಅನುಭವಿಸಬೇಕು. ಅದು ತೋರುವ ದಾರಿಗೆ ತೆರೆದುಕೊಳ್ಳುತ್ತಾ ಹೋಗಬೇಕು. ಆಗಲೇ ಸೌಂದರ್ಯ ಪ್ರಜ್ಞೆ ಅರಿವಾಗುವುದು.

World Hypertension Day special Bird Photography expert Dr Nisarga

‘ಯಾರಿಲ್ಲಿ ಎಣ್ಣೆ ಹಚ್ಚಿ ಬಾಚಿದ್ದು?’ ಫೋಟೋ : ಡಾ. ನಿಸರ್ಗ

ಹೇಗೆ ಚಿತ್ರಕಾರ, ಶಿಲ್ಪಕಾರ ಕೃತಿ ರಚಿಸುತ್ತಾನೋ ಹಾಗೆ ನೀವು ತೆಗೆದ ಫೋಟೋ ನಿಮ್ಮ ಕಲಾಕೃತಿ. ಈ ಕಲಾಕೃತಿ ಮೂಡಬೇಕಾದರೆ ನೀವು ಜಗತ್ತಿನ ಎಲ್ಲಾ ಜಂಜಗಳಿಂದ ಮುಕ್ತವಾಗಿರುತ್ತೀರಿ. ನಿಮ್ಮ ಉಸಿರಿನ ಲಯ ನಿಮಗೇ ಕೇಳಿಸುವಷ್ಟರ ಮಟ್ಟಿಗೆ ನಿಮ್ಮೊಳಗೆ ಶಾಂತತೆ ಆವರಿಸಿಕೊಂಡಿರುತ್ತದೆ. ಆಗ ಖಂಡಿತ ನಿಮ್ಮ ಆರೋಗ್ಯ, ಆಯುಷ್ಯ ಗಟ್ಟಿಯಾಗಿರುತ್ತದೆ. ಯಂತ್ರಗಳೊಂದಿಗಿರುವ ನಾವು ಪ್ರಕೃತಿ ಜೊತೆಗಿರುವುದನ್ನು ರೂಢಿಸಿಕೊಂಡರಷ್ಟೇ ಉಳಿವು. ಈತನಕ ಎರಡು ವರ್ಷಗಳಲ್ಲಿ ಸುಮಾರು 460 ಹಕ್ಕಿಗಳ ಫೋಟೋಗ್ರಫಿ ಮಾಡಿದ್ದೇನೆ. ನನಗೆ ಯಾವಾಗಲೂ ಸವಾಲಿನ ಕೆಲಸ ಇಷ್ಟ. ಸ್ಟಿಲ್​ ಫೋಟೋಗ್ರಫಿಗಿಂತ ಚಲನೆಯುಳ್ಳ ವಸ್ತುವನ್ನು ಹಿಡಿದಿಡುವುದಿದೆಯಲ್ಲ? ಮೈಕ್ರೋ ಸೆಕೆಂಡ್​ ವೇಗದಲ್ಲಿರುವುದನ್ನು ‘ನಿಲ್ಲಿಸುವ’ ಜಾಗೃತಾವಸ್ಥೆ ಇದೆಯಲ್ಲ? ಮತ್ತದರ ಹಾವಭಾವ, ಭಂಗಿಯನ್ನು ಹಿಡಿದಿಡುವುದಿದೆಯಲ್ಲ? ಅದೆಲ್ಲವನ್ನೂ ಕ್ಯಾಮೆರಾದಲ್ಲಿ ಹಿಡಿಯಲು ಬಹಳ ಕಾಯುತ್ತೇನೆ. ಈ ಕಾಯುವಿಕೆಯ ಸುಖವೇ ನನಗಿಷ್ಟ. ಬೆಳಗ್ಗೆಯೋ ಸಂಜೆಯೋ ಹೀಗೆ ಹಕ್ಕಿಗಳ ಲೋಕದಲ್ಲಿ ವಿಹರಿಸಿದರೆ ನನ್ನ ಹೃದಯ ನನ್ನ ಮಾತು ಕೇಳುತ್ತದೆ ಎಂದು ನಂಬಿಕೆಯೊಂದಿಗೆ ಸಾಗುತ್ತಿದ್ದೇನೆ.

ಇದನ್ನೂ ಓದಿ
Image
World Hypertension Day 2022: ‘ನೂಲುಧ್ಯಾನ’ದಲ್ಲಿ ನಿರತ ಡಾ. ಸಂಜೀವ ಕುಲಕರ್ಣಿ
Image
World Hypertension Day 2022 : ನಿಮ್ಮಲ್ಲಿರುವುದು ಕೆಟ್ಟ ಒತ್ತಡವೋ ಒಳ್ಳೆಯ ಒತ್ತಡವೋ? ಗುರುತಿಸಿಕೊಳ್ಳಿ
Image
World Hypertension Day 2022: ಅಧಿಕ ರಕ್ತದೊತ್ತಡದ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬೇಡಿ
Image
Art Of Yoga: ಪಂಚ ಮಹಾಪ್ರಾಣ ಎಂದರೇನು? ದೇಹಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

Published On - 3:54 pm, Tue, 17 May 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ