Viral Video: ರೈಲು ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಲಂಡನ್ ರಾಣಿ ಎಲಿಜಬೆತ್; ಯಾಕೆ ಗೊತ್ತಾ?
ಏಳು ವಾರಗಳ ಹಿಂದೆ ಸೆಂಟ್ರಲ್ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ರಾಜ ಮತ್ತು ತನ್ನ ಪತಿ ದಿವಂಗತ ಪ್ರಿನ್ಸ್ ಫಿಲಿಪ್ನ ಸ್ಮಾರಕ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದ ಎಲಿಜಬೆತ್, ಮಂಗಳವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ವಯಸ್ಸಿನ ಹಿನ್ನೆಲೆ ಲಂಡನ್ ರಾಣಿ ಎಲಿಜಬೆತ್(Queen Elizabeth) ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದರೆ, ಮಂಗಳವಾರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, 96 ವರ್ಷದ ರಾಣಿ ಎಲಿಜಬೆತ್ ಅವರು, ತನ್ನ ಗೌರವಯುತವಾಗಿ ನೂತನವಾಗಿ ನಿರ್ಮಾಣಗೊಂಡಿರುವ ಸಬ್ವೇ ಲೈನ್ ಅನ್ನು ಅನಾವರಣಗೊಳಿಸಿದರು. ಮಂಗಳವಾರದಂದು ಅವರು ಮಧ್ಯ ಲಂಡನ್(central London)ನಲ್ಲಿರುವ ಪ್ಯಾಡಿಂಗ್ಟನ್ ನಿಲ್ದಾಣ(Paddington Station)ಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಏಳು ವಾರಗಳ ಹಿಂದೆ ಸೆಂಟ್ರಲ್ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ರಾಜ ಮತ್ತು ತನ್ನ ಪತಿ ದಿವಂಗತ ಪ್ರಿನ್ಸ್ ಫಿಲಿಪ್ನ ಸ್ಮಾರಕ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದ ಎಲಿಜಬೆತ್, ಇದೇ ಮೊದಲ ಬಾರಿ ಮಂಗಳವಾರ ಕಾಣಿಸಿಕೊಂಡರು.
ಇದನ್ನೂ ಓದಿ: ರಾಣಿ ಎಲಿಜಬೆತ್
ಲಂಡನ್ನ ಮೇಯರ್ ಸಾದಿಕ್ ಖಾನ್ ಅವರು ರಾಣಿ ಎಲಿಜಬೆತ್ ಅವರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಬಗೆಗಿನ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ”ಅವರ ಗೌರವಯುತವಾಗಿ ನಿರ್ಮಾಣಗೊಂಡಿರುವ ಎಲಿಜಬೆತ್ ಲೈನ್ ಅನ್ನು ಅನಾವರಣಗೊಳಿಸಿದರು. ಮುಂದಿನ ವಾರದಿಂದ ಲಂಡನ್ನವರು ಮತ್ತು ವೀಕ್ಷಿಸಲು ಬರುವವರಿಗೆ ಇದು ಮುಕ್ತವಾಗಿರಲಿದೆ” ಎಂದಿದ್ದಾರೆ.
A fantastic day to unveil the new Elizabeth line with Her Majesty.
I can’t wait to see Londoners and visitors alike taking full advantage of this transformative new line next week. pic.twitter.com/6jorLCtxlE
— Mayor of London, Sadiq Khan (@MayorofLondon) May 17, 2022
ಎಲಿಜಬೆತ್ ಲೈನ್ ಅನಾವರಣಗೊಳಿಸಲು ಆಗಮಿಸಿದ ರಾಣಿ ಎಲಿಜಬೆತ್ ಅವರಿಗೆ ಆಯ್ಸ್ಟರ್ ಕಾರ್ಡ್ ನೀಡಲಾಯಿತು. ಇದರ ಜೊತೆಗೆ ಟಿಕೆಟ್ ಯಂತ್ರದಲ್ಲಿ ಅದನ್ನು ಹೇಗೆ ಬಳಸಬೇಕು ಎಂದು ತೋರಿಸಲಾಯಿತು. ಇದೇ ವೇಳೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಎಲಿಜಬೆತ್ ಕಿರಿಯ ಪುತ್ರ ಪ್ರಿನ್ಸ್ ಎಡ್ವರ್ಡ್ ಅವರೊಂದಿಗೆ ಇದ್ದರು. ರಾಣಿ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಬೋರಿಸ್ ಜಾನ್ಸನ್, ಎಲಿಜಬೆತ್ ಲೈನ್ ಅನಾವರಣಗೊಳಿಸಲು ಆಗಮಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಎಲಿಜಬೆತ್ ಭೇಟಿ ಬಗ್ಗೆ ಮಾಹಿತಿ ಹಂಚಿಕೊಂಡ ಬಕಿಂಗ್ಹ್ಯಾಮ್ ಪ್ಯಾಲೇಸ್, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಯೋಜಕರಿಗೆ ತಿಳಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಸಂತೋಷದ ಬೆಳವಣಿಗೆ ಎಂದು ಬಣ್ಣಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 10:24 am, Thu, 19 May 22