AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಗಂಡುಮಕ್ಕಳಿಗೆ ಜನ್ಮನೀಡಿದ ಅವಳಿ ಸಹೋದರಿಯರು!

ಕ್ಯಾಲಿಫೋರ್ನಿಯಾದ ಅವಳಿ ಸಹೋದರಿಯರಿಬ್ಬರು ಯೊರ್ಬಾ ಲಿಂಡಾ ಆಸ್ಪತ್ರೆಯಲ್ಲಿ ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡಿರುವುದು ಭಾರಿ ಸುದ್ದಿಯಾಗುತ್ತಿದೆ. ಇಂತಹದ್ದೇ ಘಟನೆ 2020ರಲ್ಲಿ ಇದೇ ಆಸ್ಪತ್ರೆಯಲ್ಲಿ ಅವಳಿ ಸಹೋದರಿಯರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.

Trending: ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಗಂಡುಮಕ್ಕಳಿಗೆ ಜನ್ಮನೀಡಿದ ಅವಳಿ ಸಹೋದರಿಯರು!
ಗಂಡು ಮಕ್ಕಳಿಗೆ ಜನ್ಮ ನೀಡಿದ ಅವಳಿ ಸಹೋದರಿಯರುImage Credit source: washingtonpost.com
TV9 Web
| Edited By: |

Updated on: May 19, 2022 | 11:17 AM

Share

ಈ ಜಗತ್ತಿನಲ್ಲಿ ಅಚ್ಚರಿಗಳ ಮೇಲೊಂದು ಅಚ್ಚರಿಗಳು ನಡೆಯುತ್ತಲೇ ಇರುತ್ತದೆ. ಅದರಂತೆ ಕ್ಯಾಲಿಫೋರ್ನಿಯಾ(California)ದಲ್ಲೂ ಒಂದು ಅಚ್ಚರಿಯ ಸಂಗತಿಯೊಂದು ನಡೆದಿದೆ. ಏನೆಂದರೆ, ಅವಳಿ(Twins) ಸಹೋದರಿಯರಿಬ್ಬರು ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಒಂದೇ ಅಳತೆಯ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಾ ಎಂಬ ಅವಳಿ ಸಹೋದರಿಯರು ಮೇ 5ರಂದು ಯೊರ್ಬಾ ಲಿಂಡಾ(Yorba Linda)ದ ಆಸ್ಪತ್ರೆಯಲ್ಲಿ ಕೇವಲ ಗಂಟೆಗಳ ಅಂತರದಲ್ಲಿ ತಮ್ಮ ಪುತ್ರರಿಗೆ ಜನ್ಮ ನೀಡಿದರು ಎಂದು ವರಿಯಾಗಿದೆ. ಅದರಂತೆ, ಆಲಿವರ್ ಮತ್ತು ಸಿಲಾಸ್ ಎಂಬ ಮಕ್ಕಳು 7 ಪೌಂಡ್ಸ್ ತೂಕ, ಮೂರು ಔನ್ಸ್(Ounces) ಮತ್ತು 20 ಇಂಚು ಉದ್ದದೊಂದಿಗೆ ಜನಿಸಿದ್ದಾರೆ. ಎರಿನ್ ಅವರ ಝಾಕ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇವರ ವಿವಾಹಕ್ಕೂ ಮುನ್ನ ಜಿಲ್, ತನ್ನ ಗರ್ಭಧಾರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಿವಾಹಿತ ಸಹೋದರಿಯರು 45 ನಿಮಿಷಗಳ ದೂರದ ಅಂತದಲ್ಲಿ ವಾಸಿಸುತ್ತಿದ್ದರು. ಆದರೆ, ಗರ್ಭಾವಸ್ಥೆ ಸಮಯದಲ್ಲಿ ತಮ್ಮ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ.

ಇದನ್ನೂ ಓದಿ: ಅವಳಿ ಸಹೋದರರು

ಈ ಬಗ್ಗೆ ಮಾಹಿತಿ ಹಂಚಿಕೊಂಡ ಜಿಲ್, ”ನಮ್ಮ ಗರ್ಭಾವಸ್ಥೆಯ ಸಮಯವನ್ನು ಒಟ್ಟಿಗೆ ಕಳೆದಿರುವುದು ನಿಜವಾಗಿಯೂ ವಿಶೇಷವಾಗಿತ್ತು. ಗರ್ಭಧಾರಣೆಯ ದಿನನಿತ್ಯದ ಬದಲಾವಣೆಗಳು, ಅಪರಿಚಿತರು ಮತ್ತು ಪ್ರಶ್ನೆಗಳು, ನೈಸರ್ಗಿಕ ಚಿಂತೆಗಳ ಮೂಲಕ ಹೋಗುತ್ತಿದ್ದರೂ ನಾವು ನಿರಂತರವಾಗಿ ಪರಸ್ಪರ ಪರಿಶೀಲಿಸಲು ಮತ್ತು ಪರಸ್ಪರ ಬೆಂಬಲಿಸಲು ಸಾಧ್ಯವಾಯಿತು” ಎಂದು ಹೇಳಿದರು.

ವಿಶೇಷವೆಂದರೆ, ಅವಳಿ ಸಹೋದರಿಯರಾದ ಎರಿನ್ ಮತ್ತು ಜಿಲ್ ಪುತ್ರರಿಗೆ ಜನ್ಮ ನೀಡಿದ ಇದೇ ಆಸ್ಪತ್ರೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಹೌದು, 2020ರ ಅಕ್ಟೋಬರ್ 29ರಂದು ಇದೇ ಆಸ್ಪತ್ರೆಯಲ್ಲಿ ಅವಳಿಗಳಾದ ಶರತ್ಕಾಲ ಶಾ ಮತ್ತು ಅಂಬರ್ ಟ್ರಾಮೊಂಟಾನಾ ಎಂಬ ಅವಳಿ ಸಹೋದರಿಯರು ಅವರ ಜನ್ಮದಿನದಂದೇ ಕೇವಲ 90 ನಿಮಿಷಗಳ ಅಂತರದಲ್ಲಿ ತಮ್ಮ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಟೆನ್ನಿಸ್ಸೀಯ ನಾಕ್ಸ್​ವಿಲ್ಲೆಯಿಂದ ಬಂದಿರುವ ಅವಳಿ ಸಹೋದರಿಯರು ಇವರಾಗಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ