AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯ ರೈ ಬಚ್ಚನ್​ರಂತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವ ಯುವತಿಯ ಹೆಸರು ಅಶಿತಾ ಸಿಂಗ್

ಐಶ್ವರ್ಯ ರೈ ಬಚ್ಚನ್​ರಂತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವ ಯುವತಿಯ ಹೆಸರು ಅಶಿತಾ ಸಿಂಗ್

TV9 Web
| Edited By: |

Updated on:Aug 05, 2021 | 6:27 PM

Share

ಅಶಿತಾಳನ್ನು ಕರೆದೊಯ್ದು, ಅಭಿಷೇಕ್ ಬಚ್ಚನ್ ಎದುರು ನಿಲ್ಲಿಸಿದರೆ ಬಿಗ್ ಬಿ ಸುಪುತ್ರನೂ ಗೊಂದಲಕ್ಕೆ ಬೀಳುವಷ್ಟು ಹೋಲಿಕೆ ಅಶಿತಾ ಹೊಂದಿದ್ದಾರೆ.

ಮಂಗಳೂರಿನ ಹುಡುಗಿ ಸ್ನೇಹಾ ಉಲ್ಲಾಳ್ ನಿಮಗೆ ನೆನಪಿದ್ದಾರೆ ತಾನೆ? 2005ರಲ್ಲಿ ಬಿಡುಗಡೆಯಾದ ಲಕ್ಕಿ: ನೋ ಟೈಮ್ ಫಾರ್ ಲವ್ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ನಾಯಕಿ ನಟಿಸಿದ್ದ ಸ್ನೇಹಾ ನೋಡೋದಿಕ್ಕೆ ಥೇಟ್ ಮಂಗಳೂರಿನವರೇ ಆಗಿರುವ ಬಾಲಿವುಡ್ ಜನಪ್ರಿಯ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಹಾಗೆ ಕಾಣುತ್ತಿದ್ದರು. ಆ ಕಾರಣಕ್ಕೆ ಸ್ನೇಹಾಗೆ ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರಗಳಲ್ಲಿ ಅವಕಾಶಗಳೂ ಸಿಕ್ಕವು. ಈಗ ಸ್ನೇಹಾ ಎಲ್ಲಿದ್ದಾರೆ ಅನ್ನವುದೇ ಜನರಿಗೆ ಗೊತ್ತಿಲ್ಲ, ಬಿಡಿ ಅದು ಹಳೆ ವಿಷಯ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅಶಿತಾ ಸಿಂಗ್. ಈಕೆ ಸಹ ಅಕ್ಷರಶಃ ಐಶ್ವರ್ಯ ಅವರಂತೆ ಕಾಣುತ್ತಾರೆ, ಅವರ ತದ್ರೂಪು ಅಥವಾ ಪಡಿಯಚ್ಚು. ಅಶಿತಾಳನ್ನು ಕರೆದೊಯ್ದು, ಅಭಿಷೇಕ್ ಬಚ್ಚನ್ ಎದುರು ನಿಲ್ಲಿಸಿದರೆ ಬಿಗ್ ಬಿ ಸುಪುತ್ರನೂ ಗೊಂದಲಕ್ಕೆ ಬೀಳುವಷ್ಟು ಹೋಲಿಕೆ ಅಶಿತಾ ಹೊಂದಿದ್ದಾರೆ. ಈ ವಿಡಿಯೋನಲ್ಲಿರುವ ಪೋಟೋಗಳನ್ನು ನೋಡಿದರೆ ನೀವೂ ಆಶ್ಚರ್ಯಪಡುತ್ತೀರಿ.

ಆಶಿತಾಗೆ ಇನ್ಸ್ಟಾಗ್ರಾಮ್ನಲ್ಲಿ 27,000 ಫಲೋಯರ್ಸ್ ಇದ್ದಾರೆ ಮಾರಾಯ್ರೇ! ಅವರಲ್ಲಿ ಅನೇಕರು ಆಕೆಗೆ, ‘ನೀವು ಥೇಟು ಐಶ್ವರ್ಯ ಅವರಂತೆ ಬಹಳ ಚಂದ ಇದ್ದೀರಾ,’ ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನು ಕೆಲವರು, ‘ಐಶ್ವರ್ಯ ಜೀ ಮತ್ತ್ತು ನೀವು ಅವಳಿ-ಜವಳಿಗಳಂತೆ ಕಾಣುತ್ತೀರಿ’ ಎಂದಿದ್ದಾರೆ.

ಮತ್ತೇ ಕೆಲವರು ಬಾಲಿವುಡ್ ಮತ್ತು ಟಾಲಿಚುಡ್ ಸಿನಿಮಾಗಳಲ್ಲಿ ನಟಿಸುವಂತೆ ಸಲಹೆ ನೀಡಿದ್ದಾರೆ. ಅವಳಿ ಸಹೋದರಿಯರ ಚಿತ್ರಕತೆ ಇದ್ದು ಒಂದು ಪಾತ್ರದಲ್ಲಿ ಐಶ್ವರ್ಯ ನಟಿಸಿದರೆ ಮತ್ತೊಂದರಲ್ಲಿ ನೀವು ನಟಿಸಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ 

Published on: Aug 05, 2021 06:18 PM