Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೃಷ್ಟಿ ಭ್ರಮೆ ಡಿಜಿಟಲ್ ಯುಗದ ಸೃಷ್ಟಿ ಅಲ್ಲ, ನಮ್ಮ ಶಿಲ್ಪಿಗಳು 9 ಶತಮಾನಗಳಷ್ಟು ಹಿಂದೆಯೇ ದೇವಾಲಯದಲ್ಲಿ ಅಂಥದನ್ನು ಕೆತ್ತಿದ್ದಾರೆ!!

ಬಲಭಾಗದ ಜೀವಿಯ ಮೇಲೆ ನೀವು ದೃಷ್ಟಿಯನ್ನು ಕೇಂದ್ರೀಕರಿಸಿದರೆ ಆನೆ ಕಾಣಿಸುತ್ತದೆ. ಆದರೆ, ಆನೆಯ ದೇಹ ಮತ್ತು ಕಾಲುಗಳನ್ನು ನೀವು ಮರೆಮಾಡಿದರೆ ಎಡಭಾಗದಲ್ಲಿ ಆಕಾಶದತ್ತ ಮುಖ ಮಾಡಿರುವ ಹೋರಿಯ ಚಿತ್ರ ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ.

ದೃಷ್ಟಿ ಭ್ರಮೆ ಡಿಜಿಟಲ್ ಯುಗದ ಸೃಷ್ಟಿ ಅಲ್ಲ, ನಮ್ಮ ಶಿಲ್ಪಿಗಳು 9 ಶತಮಾನಗಳಷ್ಟು ಹಿಂದೆಯೇ ದೇವಾಲಯದಲ್ಲಿ ಅಂಥದನ್ನು ಕೆತ್ತಿದ್ದಾರೆ!!
ಹಿಂದೂ ದೇವಾಲಯದಲ್ಲಿ ದೃಷ್ಟಿ ಭ್ರಮೆಯನ್ನುಂಟು ಮಾಡುವ ಕೆತ್ತನೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 20, 2022 | 1:04 AM

ಎಲ್ಲೆಡೆ ದೃಷ್ಟಿ ಭ್ರಮೆ (Optical Illusion) ಅಥವಾ ಭ್ರಾಂತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೆದುಳಿಗೆ ಕಸರತ್ತು (brain teasers) ನೀಡುವ ಈ ಆಯಾಮದ ಮೇಲೆ ನಾವು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೇವೆ. ಇದು ನಮ್ಮ ವ್ಯಕ್ತಿತ್ವವನ್ನು (personality) ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಅಂತಲೂ ಹೇಳಲಾಗುತ್ತದೆ. ದೃಷ್ಟಿ ಭ್ರಮೆಯ ವಿಷಯ ನಿಸ್ಸಂದೇಹವಾಗಿ ನಮಗೆ ಹೊಸದೆನಿಸಿದೆ, ಯಾಕೆಂದರೆ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನಾವು ಇತ್ತೀಚಿಗಷ್ಟೇ ನೋಡಲಾರಂಭಿಸಿದ್ದೇವೆ, ಅದರೆ ಇದಕ್ಕೆ ಶತಮಾನಗಳ ಇತಿಹಾಸವಿದೆ ಅಂದರೆ ನಂಬ್ತೀರಾ?

ದೃಷ್ಟಿ ಭ್ರಮೆ ಅಂಶವನ್ನು ನಮ್ಮ ಶಿಲ್ಪಿಗಳು, ಮನಶಾಸ್ತ್ರಜ್ಞರು ದಶಕಗಳಿಂದ ಉಪಯೋಗಿಸಿಕೊಂಡು ಬಂದಿದ್ದಾರೆ. ಕಲ್ಲಿನಲ್ಲಿ ಕೆತ್ತಿ ಸೃಷ್ಟಿಸಿರಬಹುದಾದ ದೃಷ್ಟಿ ಭ್ರಮೆಯನ್ನು ನೀವು ನೋಡಿರಲಾರಿರಿ. ಅದನ್ನು ನಾವಿಲ್ಲಿ ತೋರಿಸುತ್ತಿದ್ದೇವೆ.

ತಮಿಳುನಾಡಿನ ಕುಂಭಕೋಣಂನಲ್ಲಿರುವ ಐರಾವತೇಶ್ವರ ದೇವಸ್ಥಾನ ಹಿಂದೂಗಳಿಗೆ ಪವಿತ್ರ ದೇಗುಲವೆನಿಸಿದೆ ಮತ್ತು ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಚೋಳ ಅರಸೊತ್ತಿಗೆಯ ಮುಕುಟ ಮಣಿಯಾಗಿದ್ದ ಸದರಿ ದೇವಸ್ಥಾನವನ್ನು ಸುಮಾರು 900 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ದೇವಸ್ಥಾನದಲ್ಲಿ 12 ನೇ ಶತಮಾನದ ದ್ರಾವಿಡ ಶಿಲ್ಪಕಲೆ ಮತ್ತು ಕಲ್ಲಿನಲ್ಲಿ ಸುಂದರವಾಗಿ ಕೆತ್ತಿದ ರಥ ಮತ್ತು ಅವತಾರಗಳನ್ನು ಕಾಣಬಹುದು.

ಇಲ್ಲಿರುವ ಪ್ರಾಚೀನ ದೃಷ್ಟಿ ಭ್ರಮೆಯ ಕೆತ್ತನೆಯಲ್ಲಿ ಒಂದು ತಲೆಯ ಎರಡು ಜೀವಿಗಳ ಸಂಯೋಜನೆ ಕಾಣುತ್ತದೆ. ಅದು ಸರಿ, ಆದರೆ ಈ ಜೀವಿಗಳು ಅಥವಾ ಪ್ರಾಣಿಗಳು ಯಾವು?

ಬಲಭಾಗದ ಜೀವಿಯ ಮೇಲೆ ನೀವು ದೃಷ್ಟಿಯನ್ನು ಕೇಂದ್ರೀಕರಿಸಿದರೆ ಆನೆ ಕಾಣಿಸುತ್ತದೆ. ಆದರೆ, ಆನೆಯ ದೇಹ ಮತ್ತು ಕಾಲುಗಳನ್ನು ನೀವು ಮರೆಮಾಡಿದರೆ ಎಡಭಾಗದಲ್ಲಿ ಆಕಾಶದತ್ತ ಮುಖ ಮಾಡಿರುವ ಹೋರಿಯ ಚಿತ್ರ ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ.

ಹಿಂದೂ ಧರ್ಮದ ಪ್ರಕಾರ ಹೋರಿ ಅಂದರೆ ನಂದಿ ಶಿವನ ವಾಹನವಾಗಿದ್ದರೆ, ಪುರಾಣಗಳಲ್ಲಿ ಐರಾವತ ಎಂದು ಉಲ್ಲೇಖವಾಗಿರುವ ಬಿಳಿಯಾನೆ ಸ್ವರ್ಗಾಧಿಪತಿಯಾಗಿರುವ ಇಂದ್ರನ ವಾಹನವಾಗಿದೆ.

ಇಲ್ಲಿರುವ ವಿಡಿಯೋ ಐರಾವತೇಶ್ವರ ದೇವಸ್ಥಾನದಲ್ಲಿರುವ ಎರಡು ಜೀವಿಗಳನ್ನು ಬೇರ್ಪಡಿಸುತ್ತದೆ. ಹಾಗಾಗಿ, ಈ ಎರಡು ಜೀವಿಗಳು ಪ್ರತ್ಯೇಕಸಲ್ಪಟ್ಟಾಗ ಹೇಗೆ ಒಂದೊಂದಾಗಿ ಕಾಣುತ್ತವೆ ಅಂತ ನೋಡಬಹುದು.

ಈಗಿನ ಕಾಲದಲ್ಲಿ ನಾವು ವೀಕ್ಷಿಸುವ ದೃಷ್ಟಿ ಭ್ರಮೆಯನ್ನು ಡಿಜಿಟಲ್ ಸಾಫ್ಟ್ ವೇರ್ ಗಳನ್ನು ಬಳಸಿ ಸೃಷ್ಟಿಸಲಾಗಿರುತ್ತದೆ. ಆದರೆ ನಮ್ಮ ದೇಶದ ಶಿಲ್ಪಿಗಳು ಶತಮಾನಗಳ ಹಿಂದೆ ಕಲ್ಲುಗಳಲ್ಲಿ ದೃಷ್ಟಿಭ್ರಮೆ ಉಂಟು ಮಾಡುವ ಕೆತ್ತನೆಗಳನ್ನು ಮಾಡಿದ್ದಾರೆ.

16ನೇ ಶತಮಾನದಲ್ಲಿ ಹ್ಯಾನ್ಸ್ ಹೊಲ್ಬೀನ್ ದಿ ಯಂಗರ್ ರಚಿಸಿದ ಒಂದು ವರ್ಣಚಿತ್ರವನ್ನು ಅತ್ಯಂತ ಹಳೆಯ ಆಪ್ಟಿಕಲ್ ಭ್ರಮೆಯ ಕೃತಿ ಎಂದು ಹೇಳಲಾಗುತ್ತದೆ. ಆದರೆ ನಮ್ಮ ಶಿಲ್ಪಿಗಳು ಅದಕ್ಕೂ 400 ವರ್ಷಗಳಷ್ಟು ಮೊದಲೇ ಕುಂಭಕೋಣಂನ ಐರಾವತ ದೇವಾಲಯದ ಕಲ್ಲುಗಳಲ್ಲಿ ಅದನ್ನು ಸೃಷ್ಟಿಸಿದ್ದಾರೆ.

ಮೇರಾ ಭಾರತ್ ಮಹಾನ್!!

ಇದನ್ನೂ ಓದಿ:  Chethana Raj: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್