Viral Video: ಮಧ್ಯಪ್ರದೇಶದಲ್ಲಿ ಹುಲಿ ಮರಿಗಳಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಗ್ರಾಮಸ್ಥರು

ಮಧ್ಯಪ್ರದೇಶದ ಸಿಯೋನಿಯಲ್ಲಿ ಎರಡು ಹುಲಿ ಮರಿಗಳ ಮೇಲೆ ಗ್ರಾಮಸ್ಥರು ಕಲ್ಲಿನಿಂದ ದಾಳಿ ಮಾಡಿರುವ ಮನಕಲಕುವ ವಿಡಿಯೋ ಸಾನಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

Viral Video: ಮಧ್ಯಪ್ರದೇಶದಲ್ಲಿ ಹುಲಿ ಮರಿಗಳಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಗ್ರಾಮಸ್ಥರು
ಹುಲಿ ಮರಿಗಳಿಗೆ ಕಲ್ಲು ಎಸೆಯುತ್ತಿರುವುದು.
Follow us
TV9 Web
| Updated By: ವಿವೇಕ ಬಿರಾದಾರ

Updated on:May 20, 2022 | 2:42 PM

ಮಧ್ಯಪ್ರದೇಶ: ಭೂಮಿ ಮೇಲೆ ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದು ಇಲ್ಲ ಅನ್ನುತ್ತಾರೆ. ಅದು ಅಕ್ಷರಶಃ ಸತ್ಯ ಕೂಡ. ನಾವು ಪ್ರತಿವರ್ಷ ವಲ್ಡ್ ಎನಿಮಲ್​ ಡೇ ಆಚಾರಿಸುತ್ತವೆ. ಹಾಗೇ ವಲ್ಡ್ ಟೈಗರ್ಸ್ ಡೇ (ಹುಲಿಗಳ ದಿನ)ವನ್ನು ಆಚರಿಸಿತ್ತೇವೆ. ಈ ದಿನ ಹುಲಿಗಳ ಕುರಿತು ದೊಡ್ಡ ಭಾಷಣಗಳನ್ನು ಮಾತನಾಡುತ್ತೇವೆ. ವಾಟ್ಸಪ್ ಸ್ಟೇಟ್ಸ್, ಫೇಸ್​ಬುಕ್ ನಲ್ಲಿ ಹುಲಿಗಳನ್ನು ಸಂರಕ್ಷಿಸಿ ಅಂತ ಬರೆದುಕೊಳ್ಳುತ್ತೇವೆ. ಆದರೆ ನಿಜವಾದ ಹುಲಿ ಬಂದರೆ ಕಲ್ಲು ಹೊಡೆಯುತ್ತೇವೆ.

ಹೌದು ಮಧ್ಯಪ್ರದೇಶದ (Madya Pradesh) ಸಿಯೋನಿಯಲ್ಲಿ ಎರಡು ಹುಲಿ (Tiger) ಮರಿಗಳ ಮೇಲೆ ಗ್ರಾಮಸ್ಥರು ಕಲ್ಲಿನಿಂದ ದಾಳಿ ಮಾಡಿರುವ ಮನಕಲಕುವ ವಿಡಿಯೋ ಸಾನಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶದ ಬೆಳಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ಎರಡು ಹುಲಿ ಮರಿಗಳ ಮೇಲೆ ಗ್ರಾಮಸ್ಥರು ಕಲ್ಲು ಎಸೆಯುತ್ತಿದ್ದಾರೆ. ಕಲ್ಲುಗಳಿಂದ ರಕ್ಷಿಸಿಕೊಳ್ಳಲು ಹುಲಿ ಒಂದು ಬಂಡೆಯ ಹಿಂದೆ ಕುಂಟುತ್ತಾ ಹೋಗಿ ಅಡಗಿ ಕುಳಿತುಕೊಳ್ಳುತ್ತಿದೆ. ಇಷ್ಟಾದರೂ ಬಿಡದ ಜನರು ಮತ್ತೆ ಅದರ ಮೇಲೆ ಕಲ್ಲು ಎಸೆದಿದ್ದಾರೆ.

ಇದನ್ನೂ ಓದಿ
Image
ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ
Image
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ಡೆತ್​​ನೋಟ್ ಬಗ್ಗೆ ಪೊಲೀಸರಿಗೆ ಅನುಮಾನ
Image
ಸಿಎಂ ಹೇಮಂತ್ ಸೊರೇನ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಜಾರ್ಖಂಡ್ ಸರ್ಕಾರ
Image
Assam Flood: ಪ್ರವಾಹಕ್ಕೆ ತುತ್ತಾದ ಆಸ್ಸಾಂನ 27 ಜಿಲ್ಲೆಗಳು, ಪ್ರವಾಹಕ್ಕೆ ಸಿಲುಕಿ 11 ಸಾವು, 80,298 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರ

ಇದನ್ನು ಓದಿ: ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ?

ವಿಡಿಯೋ ಕುರಿತು ತೀರ್ವ ಅಸಮಾಧಾನ ವ್ಯಕ್ತಪಡಿಸಿರುವ IAS, IFS ಅಧಿಕಾರಿಗಳು ಟ್ವೀಟ್ ಮಾಡಿ ಇದು ಅಮಾನವೀಯ ಘಟನೆ. ಮನುಷ್ಯನಿಗೆ ನಾಚಿಕೆಯಾಗಬೇಕು. ಕರುಣಾಚನಕ ನಡುವಳಿಕೆ ಎಂದು ಬರೆದುಕೊಂಡಿದ್ದಾರೆ.

ಹುಲಿ ಮರಿಗಳ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಆದಿಲ್ ಅವರು ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ರಕ್ಷಣಾ ತಂಡವು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತಲುಪಿದ ನಂತರ, ಅಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸಿ ಸುಮಾರು 6 ತಿಂಗಳ ವಯಸ್ಸಿನ ಎರಡು ಹುಲಿ ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವನ್ಯಜೀವಿ ವೈದ್ಯರ ಆರೋಗ್ಯ ತಪಾಸಣೆಯ ನಂತರ ಮರಿಗಳನ್ನು ಕನ್ಹಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:41 pm, Fri, 20 May 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್