Assam Flood: ಪ್ರವಾಹಕ್ಕೆ ತುತ್ತಾದ ಆಸ್ಸಾಂನ 27 ಜಿಲ್ಲೆಗಳು, ಪ್ರವಾಹಕ್ಕೆ ಸಿಲುಕಿ 11 ಸಾವು, 80,298 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರ
ಆಸ್ಸಾಂನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಆಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ.
ಆಸ್ಸಾಂ: ಆಸ್ಸಾಂ (Assam) ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಆಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ರಾಜ್ಯದಲ್ಲಿ ಪ್ರವಾಹದಿಂದ (Assam Flood) ಪರಿಸ್ಥತಿ ಬಹಳಷ್ಟು ಹದಗೆಟ್ಟಿದ್ದು, ಪ್ರವಾಹ ಪೀಡಿತರ ಸಂಖ್ಯೆ 7,17,000 ಏರಿಕೆಯಾಗಿದೆ. ಮೇ 13 ರಿಂದ ಇಲ್ಲಿಯವರೆಗೆ ಪ್ರವಾಹಕ್ಕೆ ಸಿಲುಕಿ 11 ಜನರು ಸಾವನ್ನಪ್ಪಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಗುರುವಾರ (ಮೇ 19) ಹೊರಡಿಸಿದ ಬುಲೆಟಿನ್ ಪ್ರಕಾರ, 27 ಜಿಲ್ಲೆಗಳ 75 ಕಂದಾಯ ವಲಯಗಳಲ್ಲಿ 1,790 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಸುಮಾರು 64,000 ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದೆ ಎಂದು ತಿಳಿಸಿದೆ.
ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿತ , 4 ಜನರಿಗೆ ಗಾಯ
ಇನ್ನೂ ಮೇ 13ರಿಂದ ಇಲ್ಲಿಯವರೆಗೆ 2 ಜನರು ಸಾವನ್ನಪ್ಪಿದ್ದು, ಅವರು ನಾಗಾವ್ ಜಿಲ್ಲೆಯ ಕಂಪುರದವರು ಎಂದು ತಿಳಿದು ಬಂದಿದೆ. ASDMA ವರದಿ ಪ್ರಕಾರ, ಪ್ರವಾಹದಿಂದ ಸ್ಥಳಾಂತರಗೊಂಡ 80,298 ಪೀಡಿತ ಜನರು 14 ಜಿಲ್ಲೆಗಳಲ್ಲಿ 167 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನು ಓದಿ: ಅಸ್ಸಾಂ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಶಾಸಕರನ್ನು ಬೆನ್ನ ಮೇಲೆ ಹೊತ್ತು ಸಾಗಿದ ರಕ್ಷಣಾ ಕಾರ್ಯಕರ್ತ; ವಿಡಿಯೊ ವೈರಲ್
ಗುರುವಾರವೂ ರಕ್ಷಣಾ ಕಾರ್ಯಗಳು ಮುಂದುವರಿದಿದ್ದು, ಕ್ಯಾಚಾರ್, ದರ್ರಾಂಗ್, ಹೊಜೈ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ 130 ದೋಣಿಗಳ ಮೂಲಕ 7,229 ಜನರನ್ನು ಸ್ಥಳಾಂತರಿಸಲಾಗಿದೆ. ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು 105 ಜನರನ್ನು ರಕ್ಷಿಸಿವೆ. ಗುರುವಾರ ದಿಮಾ ಹಸಾವೊ ಜಿಲ್ಲೆಯ ಪ್ರಧಾನ ಕಛೇರಿಯಾದ ಹಾಫ್‌ಲಾಂಗ್‌ಗೆ ಐಎಎಫ್ ಚಾಪರ್‌ಗಳ ಮುಖಾಂತರ ಆಹಾರ ಸಾಮಗ್ರಿಗಳನ್ನು ರವಾನಿಸಲಾಯಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:20 pm, Fri, 20 May 22