ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿತ , 4 ಜನರಿಗೆ ಗಾಯ

TV9 Digital Desk

| Edited By: ವಿವೇಕ ಬಿರಾದಾರ

Updated on:May 20, 2022 | 12:26 PM

ಜಮ್ಮು-ಕಾಶ್ಮೀರದ ರಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಖೋನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ  ಒಂದು ಸಣ್ಣ ಭಾಗ ಕುಸಿದಿದೆ.

ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿತ , 4 ಜನರಿಗೆ ಗಾಯ
ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿತ

Follow us on

ಜಮ್ಮು&ಕಾಶ್ಮೀರ: ಜಮ್ಮು-ಕಾಶ್ಮೀರದ (Jammu&Kashmir) ರಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಖೋನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ  ಒಂದು ಸಣ್ಣ ಭಾಗ ಕುಸಿದಿದೆ. ಗುರುವಾರ (ಮೇ 19) ರಂದು ಅವಘಡ ಸಂಭವಿಸಿದೆ. ಘಟನೆಯಲ್ಲಿ 4 ಜನರು ಗಾಯಗೊಂಡಿದ್ದು, ಅವಶೇಷಗಳ ಅಡಿ ಸಾಕಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (Police) ಮತ್ತು ಭಾರತೀಯ ಸೇನೆ (Indian Army), ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಕಲ್ಲುಗಳು ದೊರೆತಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಇದನ್ನು ಓದಿ: ದೇಶದಲ್ಲಿ ಇಂಧನ ದರ ಸ್ಥಿರ; ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ಇದನ್ನೂ ಓದಿ

ಇನ್ನು ಅವಶೇಷಗಳ ಅಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕನಿಷ್ಠ 10 ಮಂದಿ ಇನ್ನೂ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ರಾಂಬನ್ ಡೆಪ್ಯುಟಿ ಕಮಿಷನರ್ ಮಸ್ಸರತುಲ್ ಇಸ್ಲಾಂ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಭೇಟಿ ನೀಡಿದ್ದಾರೆ. ಘಟನೆಯಲ್ಲಿ ಹಲವಾರು ಯಂತ್ರಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಸುರಂಗ ನಿರ್ಮಾಣದಲ್ಲಿ ತೊಡಗಿರುವ ಸರಳಾ ಕಂಪನಿಗೆ ಸೇರಿದ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಜಾದವ್ ರಾಯ್ (23), ಗೌತಮ್ ರಾಯ್ (22), ಸುಧೀರ್ ರಾಯ್ (31), ದೀಪಕ್ ರಾಯ್ (33), ಪರಿಮಳ್ ರಾಯ್ (38), ಶಿವ ಚೌಹಾಣ್ (26), ನವರಾಜ್ ಚೌಧರಿ (26), ಕುಶಿ ರಾಮ್ (25), ಮುಜಾಫರ್ (38) ಮತ್ತು ಇಸ್ರತ್ (30) ನಾಪತ್ತೆಯಾಗಿದ್ದಾರೆ ಎಂದು ಗುರುತಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ನಾಗರಿಕ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada