AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navjot Sidhu: ಶರಣಾಗಲು ಒಂದು ವಾರ ಸಮಯ ಕೇಳಿದ ನವಜೋತ್ ಸಿಂಗ್ ಸಿಧು

ಪಂಜಾಬ್​ನ ಮಾಜಿ ಸಚಿವರೂ ಆಗಿರುವ ಸಿಧು ಹಿಂದೆ ಭಾರತ ಕ್ರಿಕೆಟ್​ ತಂಡದಲ್ಲಿ ಆಡುತ್ತಿದ್ದರು. 1988ರ ಡಿ.27ರಂದು ಪಾಟಿಯಾಲದಲ್ಲಿ ವೃದ್ಧರೊಬ್ಬರ ಮೇಲೆ ಸಿಧು ಹಲ್ಲೆ ನಡೆಸಿದ್ದರು.

Navjot Sidhu: ಶರಣಾಗಲು ಒಂದು ವಾರ ಸಮಯ ಕೇಳಿದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
TV9 Web
| Edited By: |

Updated on:May 20, 2022 | 11:52 AM

Share

ದೆಹಲಿ: ಚಂಡಿಗಡದಲ್ಲಿ 1988ರಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಬೇಕಾಗಿರುವ ನವಜೋತ್ ಸಿಂಗ್ ಸಿಧು (Navjot Singh Sidhu) ನ್ಯಾಯಾಲಯಕ್ಕೆ ಶರಣಾಗಲು ಒಂದು ವಾರ ಕಾಲಾವಕಾಶ ಬೇಕು ಎಂದು ಸುಪ್ರೀಂಕೋರ್ಟ್​​ಗೆ ವಿನಂತಿಸಿದ್ದಾರೆ. ಪಂಜಾಬ್​ನ ಮಾಜಿ ಸಚಿವರೂ ಆಗಿರುವ ಸಿಧು ಹಿಂದೆ ಭಾರತ ಕ್ರಿಕೆಟ್​ ತಂಡದಲ್ಲಿ ಆಡುತ್ತಿದ್ದರು. 1988ರ ಡಿ.27ರಂದು ಪಾಟಿಯಾಲದಲ್ಲಿ ವೃದ್ಧರೊಬ್ಬರ ಮೇಲೆ ಸಿಧು ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದ ಕಾರಣ ವೃದ್ಧರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ನಿನ್ನೆ (ಮೇ 19) ಸುಪ್ರೀಂಕೋರ್ಟ್​ ನಿನ್ನೆ ಶಿಕ್ಷೆ ವಿಧಿಸಿತ್ತು.

34 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಶರಣಾಗಲು ಸಮಯಾವಕಾಶ ಕೋರಿದ ನವಜೋತ್ ಸಿಂಗ್​ ಸಿಧುಗೆ ಈ ಬಗ್ಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ. ಕೋರ್ಟ್ ಸೂಚನೆಯ ಮೇರೆಗೆ ಸಿಧು ಪರವಾಗಿ ಅರ್ಜಿ ಸಲ್ಲಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ನವಜೋತ್ ಸಿಂಗ್ ಸಿಧು ಶರಣಾಗುತ್ತಾರೆ. ಆರೋಗ್ಯ ಸಮಸ್ಯೆ ಇರುವುದರಿಂದ, ಪರಿಹಾರಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೋರಿದರು.

ನ್ಯಾಯಾಲಯದ ಎದುರು ಶರಣಾಗುವುದಾಗಿ ಸಿಧು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು. ಪಂಜಾಬ್​ನ ಪಾಟಿಯಾಲ ನ್ಯಾಯಾಲಯದಲ್ಲಿ ಸಿಧು ಶರಣಾಗಬಹುದು ಎಂದು ಇಂದು ಮುಂಜಾನೆ ಕೆಲ ಮಾಧ್ಯಗಳಲ್ಲಿ ವರದಿಗಳು ಪ್ರಕಟವಾಗಿದ್ದವು.

ತಾಜಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Fri, 20 May 22

Follow Us
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?
ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಅಪಾಯಕಾರಿ ವ್ಹೀಲಿಂಗ್
ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಅಪಾಯಕಾರಿ ವ್ಹೀಲಿಂಗ್
ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ!
ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ!
ಯುಗಾದಿ ವರ್ಷ ಭವಿಷ್ಯ; ಜೂನ್‌ನಿಂದ ಈ ರಾಶಿಗೆ ರಾಜಯೋಗ ಆರಂಭ
ಯುಗಾದಿ ವರ್ಷ ಭವಿಷ್ಯ; ಜೂನ್‌ನಿಂದ ಈ ರಾಶಿಗೆ ರಾಜಯೋಗ ಆರಂಭ
ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ ಆಚೆ ಹೋದ ತಾಯಿ, ಒಳಗೆ ಸಿಲುಕಿದ ಮಗಳು
ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ ಆಚೆ ಹೋದ ತಾಯಿ, ಒಳಗೆ ಸಿಲುಕಿದ ಮಗಳು
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಧನು ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಧನು ರಾಶಿಯವರಿಗೆ ಹೇಗಿರಲಿದೆ?