AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elon Musk: ಮಸ್ಕ್ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪಕ್ಕೆ ವಿಮಾನ ಪರಿಚಾರಕಿಗೆ 250000 ಯುಎಸ್​ಡಿ ಕೊಟ್ಟು ಇತ್ಯರ್ಥ ಮಾಡಿದ ಕಂಪೆನಿ ಎಂದ ವರದಿ

ಎಲಾನ್​ ಮಸ್ಕ್ ಅವರು ವಿಮಾನ ಪರಿಚಾರಕಿ ಜತೆಗೆ ಲೈಂಗಿಕ ದುರ್ವರ್ತನೆ ನಡೆಸಿದ ಪ್ರಕರಣವನ್ನು ಸ್ಪೇಸ್ಎಕ್ಸ್ 250000 ಯುಎಸ್​ಡಿಗೆ ಇತ್ಯರ್ಥಪಡಿಸಿದೆ ಎಂದು ವರದಿ ಆಗಿದೆ.

Elon Musk: ಮಸ್ಕ್ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪಕ್ಕೆ ವಿಮಾನ ಪರಿಚಾರಕಿಗೆ 250000 ಯುಎಸ್​ಡಿ ಕೊಟ್ಟು ಇತ್ಯರ್ಥ ಮಾಡಿದ ಕಂಪೆನಿ ಎಂದ ವರದಿ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: May 20, 2022 | 1:05 PM

Share

ಕಂಪೆನಿಯ ಕಾರ್ಪೊರೇಟ್ ವಿಮಾನದಲ್ಲಿ ವಿಮಾನ ಪರಿಚಾರಕಿ ಎದುರು ಎಲಾನ್​ ಮಸ್ಕ್ (Elon Musk) ದಿರಿಸನ್ನು ತೆರೆದು, ಅಸಭ್ಯವಾಗಿ ವರ್ತಿಸಿದರೆಂದು ಆರೋಪ ಕೇಳಿಬಂದಿದೆ. ಬಿಜಿನೆಸ್ ಇನ್‌ಸೈಡರ್‌ನ ವರದಿಯ ಪ್ರಕಾರ, ಸ್ಪೇಸ್‌ಎಕ್ಸ್​ನ ಎಲಾನ್​ ಮಸ್ಕ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಇತ್ಯರ್ಥಗೊಳಿಸಲು 250,000 ಪಾವತಿಸಿದೆ. ಈ ಘಟನೆಯು 2016ರಲ್ಲಿ ಸಂಭವಿಸಿದೆ. ಬಿಜಿನೆಸ್ ಇನ್​ಸೈಡರ್ ಪ್ರಕಾರ, ಹಾಗೂ ವಿಮಾನ ಪರಿಚಾರಕಿಯ ಸ್ನೇಹಿತನ ಪ್ರಕಾರ, ಸಂಸ್ಥೆಯು 2018ರಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಆದರೆ ಸಂಸ್ಥೆ ಜತೆಗೆ ಬಹಿರಂಗಪಡಿಸದಿರುವ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ.

ಇನ್ಸೈಡರ್ ಪ್ರಕಾರ, ಮಸ್ಕ್ “ಪೂರ್ತಿ ಬಾಡಿ ಮಸಾಜ್”ಗೆ ವಿನಂತಿಸಿದ್ದಾರೆ. ಮತ್ತೂ ಮುಂದುವರಿದು “ಹೆಚ್ಚು ಮಾಡುವುದಾದರೆ” ಕುದುರೆಯನ್ನು ಖರೀದಿಸಿ ಕೊಡುವುದಾಗಿ ವಿಮಾನ ಪರಿಚಾರಕಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಆಕೆಗೆ ತನ್ನ ಸ್ವಂತ ಹಣದಿಂದ ವೃತ್ತಿಪರ ಮಸಾಜ್ ತರಬೇತಿಗಾಗಿ ಪಾವತಿಸಲು ಪ್ರೋತ್ಸಾಹಿಸಲಾಗಿದೆ ಎಂದು ವರದಿಯಾಗಿದೆ.

2018ರಲ್ಲಿ ಈ ಆರೋಪಗಳನ್ನು ಬೆಂಬಲಿಸುವ ಘೋಷಣೆಗೆ ಸಹಿ ಹಾಕುವಂತೆ ಆ ವಿಮಾನ ಪರಿಚಾರಕಿಯ ಸ್ನೇಹಿತನನ್ನು ಆಕೆಯ ವಕೀಲರು ವಿನಂತಿಸಿದ ನಂತರ ಆರೋಪಗಳ ಬಗ್ಗೆ ಇನ್​ಸೈಡರ್‌ಗೆ ತಿಳಿಸಿದ್ದಾರೆ. ಇನ್​ಸೈಡರ್ ಪ್ರಕಾರ, ಆ ವಿಮಾನ ಪರಿಚಾರಕಿಯು ಮಸ್ಕ್‌ ಜತೆಗೆ ಯಾವುದೇ ಲೈಂಗಿಕ ಕ್ರಿಯೆಗಳನ್ನು ಮಾಡಲು ನಿರಾಕರಿಸಿದರು ಮತ್ತು ಪ್ರಯಾಣದ ನಂತರ “ತುಂಬಾ ಕೋಪಗೊಂಡರು”. ಈ ಘಟನೆ ಆದ ಮೇಲೆ ಆಕೆಯ ಸಹೋದ್ಯೋಗಿಗಳು ಹೇಳುವಂತೆ, ಸ್ಪೇಸ್​ಎಕ್ಸ್​ನಿಂದ (SpaceX) ಆಕೆಗೆ ಹಾಕುತ್ತಿದ್ದ ಪಾಳಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಈ ಬೆಳವಣಿಗೆಯನ್ನು ಮಹಿಳೆಯು ತನ್ನ ವಿರುದ್ಧದ ಪ್ರತೀಕಾರ ಎಂದು ವ್ಯಾಖ್ಯಾನಿಸಿದ್ದಾರೆ.

ಇನ್​ಸೈಡರ್​ ಪ್ರಕಾರ, ವಿಮಾನ ಪರಿಚಾರಕಿಯು 2018ರಲ್ಲಿ ಸ್ಪೇಸ್‌ಎಕ್ಸ್‌ನ ಮಾನವ ಸಂಪನ್ಮೂಲ ವಿಭಾಗಕ್ಕೆ ದೂರು ನೀಡಿದ್ದು, ಮಸ್ಕ್ ವಿನಂತಿಗೆ ತನ್ನ ನಿರಾಕರಣೆ ಪರಿಣಾಮವಾಗಿ ವೃತ್ತಿಜೀವನದಲ್ಲಿ ಹಿನ್ನಡೆಯನ್ನು ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸಂಸ್ಥೆಯು ನ್ಯಾಯಾಲಯ ಅಥವಾ ಆರ್ಬಿಟ್ರೇಟರ್ ಬದಲಿಗೆ ಮಧ್ಯವರ್ತಿಗೆ ದೂರನ್ನು ತಂದಿತು ಹಾಗೂ ಪರಿಚಾರಕಿ 250,000 ಯುಎಸ್​ಡಿ ಬೇರ್ಪಡಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಮಸ್ಕ್ ಅಥವಾ ಟೆಸ್ಲಾ ಅಥವಾ ಸ್ಪೇಸ್ ಎಕ್ಸ್ ವಿರುದ್ಧ ಮಾತನಾಡುವಂತಿಲ್ಲ ಎಂಬುದೂ ಸೇರಿದಂತೆ ಈ ಪಾವತಿ ಬಗ್ಗೆ ಕೂಡ ಚರ್ಚೆ ಮಾಡುವಂತಿಲ್ಲ ಎಂಬುದು ಒಳಗೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟ: ಸಿಇಒ ಪರಾಗ್ ಅಗರ್​ವಾಲ್ ಮಾತಿಗೆ ಹಲವು ಅರ್ಥ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ