ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ಡೆತ್​​ನೋಟ್ ಬಗ್ಗೆ ಪೊಲೀಸರಿಗೆ ಅನುಮಾನ

TV9 Digital Desk

| Edited By: TV9 SEO

Updated on:May 20, 2022 | 2:34 PM

ಅನಂತರಾಜು ಡೆತ್​ನೋಟ್ ಅವರು ಸಾಯುವ ಮೊದಲು ಬರೆದಿದ್ದಾ ಅಥವಾ ಬಹುಮುಂಚೆಯೇ ಇದನ್ನು ಸಿದ್ಧಪಡಿಸಲಾಗಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ಡೆತ್​​ನೋಟ್ ಬಗ್ಗೆ ಪೊಲೀಸರಿಗೆ ಅನುಮಾನ
ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಿಜೆಪಿ ನಾಯಕ ಅನಂತರಾಜು

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಅನಂತರಾಜು ಸಾಯುವ ಮೊದಲು ಅವರ ಪತ್ನಿ ಮತ್ತು ಮತ್ತೊಬ್ಬ ಹೆಂಗಸು ರೇಖಾ ಅವರೊಂದಿಗೆ ಆಗಿದ್ದ ಮಾತುಕತೆಯ ಟೆಲಿಫೋನ್ ಸಂಭಾಷಣೆ ಬಹಿರಂಗಗೊಂಡ ನಂತರ ಪ್ರಕರಣದ ತನಿಖೆಯ ದಿಕ್ಕು ಬದಲಾಗಿತ್ತು. ಪತ್ನಿ ನೀಡಿದ್ದ ದೂರು ಆಧರಿಸಿ, ಈ ಮೊದಲು ಇದೊಂದು ಹನಿಟ್ರ್ಯಾಪ್ ಪ್ರಕರಣ ಇರಬಹುದು ಎಂದು ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಅನಂತರ ಆಡಿಯೊ ಬಹಿರಂಗಗೊಂಡ ಬಳಿಕ ತನಿಖೆಯ ದಿಕ್ಕು ಬದಲಾಯಿತು.

ಅನಂತರಾಜು ಪತ್ನಿಯ ಆಡಿಯೋ ಬಹಿರಂಗಗೊಂಡ ಆದ ಬಳಿಕ ಪೊಲೀಸರಿಗೆ ಡೆತ್​ನೋಟ್ ಬಗ್ಗೆಯೇ ಅನುಮಾನ ಮೂಡಿದೆ. ಅನಂತರಾಜು ಡೆತ್​ನೋಟ್ ಅವರು ಸಾಯುವ ಮೊದಲು ಬರೆದಿದ್ದಾ ಅಥವಾ ಬಹುಮುಂಚೆಯೇ ಇದನ್ನು ಸಿದ್ಧಪಡಿಸಲಾಗಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಮೇ 12ರಂದು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅನಂತರಾಜು ಶವ ಪತ್ತೆಯಾಗಿತ್ತು. ಈ ಮೊದಲು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅನಾರೋಗ್ಯ ಮುಖ್ಯ ಕಾರಣ ಎಂದು ಹೇಳಲಾಗುತ್ತಿತ್ತು.

ಅನಂತರಾಜು ಮೃತಪಟ್ಟ ಎರಡು ದಿನಗಳ ಬಳಿಕ ಪತ್ನಿ ಸುಮಾ ಇದೊಂದು ಹನಿಟ್ರ್ಯಾಪ್ ಎಂದು ಕೆವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಇದಾದ ಬಳಿಕ ರೇಖಾ ಮತ್ತು ಸುಮಾ ಅವರ ಮಾತುಕತೆಯ ಆಡಿಯೋ ವೈರಲ್ ಆಗಿತ್ತು. ಬಳಿಕ ಪತ್ನಿ ಸುಮಾ ಮೇಲೆಯೆ ಅನುಮಾನಗಳು ಬೊಟ್ಟು ಮಾಡಿದ್ದವು. ಡೆತ್​ನೋಟ್ ಬಗ್ಗೆ ಅನುಮಾನಗೊಂಡಿರುವ ಪೊಲೀಸರು ಅನಂತರಾಜು ಕೈಬರಹದ ಮಾದರಿಯನ್ನು ಎಫ್​ಎಲ್​ಎಸ್​ಗೆ ರವಾನಿಸಿ ವರದಿ ಕೋರಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಪತಿ ಸಾವಿನ ಬಗ್ಗೆ ಮತ್ತೊಬ್ಬ ಮಹಿಳೆಯ ಜೊತೆ ಹೆಂಡತಿ ಮಾತುಕತೆ ವೈರಲ್

ವೈರಲ್ ಆಡಿಯೊದಲ್ಲಿದ್ದ ಮಾತುಕತೆ

‘ನಿನ್ನ ಅನಂತ ಸಾಯ್ತಾನೆ, ಫೇಸ್​ಬುಕ್​ನಲ್ಲಿ ನೋಡ್ತೀಯಾ’ ಎಂದೆಲ್ಲಾ ರೇಖಾ ಎಂಬಾಕೆಗೆ ಸುಮಾ ಬೆದರಿಕೆ ಹಾಕಿದ್ದರು. ಕಳೆದ ಆರು ವರ್ಷಗಳಿಂದ ಅನಂತರಾಜು ಮತ್ತು ರೇಖಾ ಸಂಬಂಧ ಇರಿಸಿಕೊಂಡಿದ್ದರು. ತನ್ನ ಗಂಡ ಪರಸ್ತ್ರೀ ಸಂಬಂಧ ಬೆಳೆಸಿರುವುದು ತಿಳಿದು ಸುಮಾ ಕೆಂಡಾಮಂಡಲವಾಗಿದ್ದರು. ಇದೇ ಸಿಟ್ಟಿನಲ್ಲಿ ರೇಖಾಗೆ ಫೋನ್ ಮಾಡಿ, ‘ಅನಂತರಾಜುನ ಸಾಯಿಸ್ತೀನಿ, ನಾನು ಕೊಡುವ ಟಾರ್ಚರ್​ಗೆ ಹಾರ್ಟ್ ಅಟ್ಯಾಕ್ ಆಗಿ ಸಾಯ್ತಾನೆ ನೋಡು’ ಎಂದು ಸುಮಾ ಬೆದರಿಕೆ ಹಾಕಿದ್ದರು.

ಸುಮಾ ಮಾತು ಕೇಳಿ ರೇಖಾ ಕಣ್ಣೀರು ಹಾಕಿ ಬೇಡಿಕೊಂಡಿದ್ದರು. ‘ಅವನನ್ನೂ ಬಿಡಲ್ಲ, ನಿನ್ನನ್ನೂ ಬಿಡಲ್ಲ’ ಎಂದು ಧಮಕಿ ಹಾಕಿದ್ದ ಸುಮಾ, ‘ಅವನು ಸತ್ತಮೇಲೆ, ನೀನೇ ಮುಂದೆ ನಿಂತು ಎಲ್ಲವನ್ನೂ ಮಾಡಬೇಕು. ಹೆಂಡತಿ ಸ್ಥಾನ ಕೊಡುತ್ತೇನೆ’ ಎಂದು ವ್ಯಂಗ್ಯವಾಡಿದ್ದರು. ‘ನನ್ನ ಕ್ಯಾರೆಕ್ಟರ್ ಹಾಳಾದ್ರು ಪರವಾಗಿಲ್ಲ, ನಿನ್ನ ಸಹವಾಸಕ್ಕೆ ಬರಲ್ಲ. ಅನಂತುಗೆ ಏನೂ ಮಾಡ್ಬೇಡ, ಚೆನ್ನಾಗಿ ನೋಡ್ಕೊ’ ಎಂದೆಲ್ಲಾ ಬೇಡಿಕೊಂಡಿದ್ದರು. ಇದೇ ಫೋನ್ ಕಾಲ್​ನಲ್ಲಿ ಅನಂತು ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಮಾತುಕತೆ ನಡೆದಿದೆ. ಈ ಸಂಭಾಷಣೆ ನಡೆದ ದಿನಾಂಕದ ಬಗ್ಗೆ ನಿಖರ ವಿವರ ಲಭ್ಯವಾಗಿಲ್ಲ. ಅನಂತರಾಜು ಸಾಯುವ 20 ದಿನಗಳ ಮೊದಲು ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊ 6 ನಿಮಿಷ 49 ಸೆಕೆಂಡ್​ಇದೆ. ಆಡಿಯೊದಲ್ಲಿ ಅನಂತರಾಜು ಅವರು ಹಾರ್ಟ್​ ಅಟ್ಯಾಕ್ ಆಗಿ ಸಾಯುತ್ತಾರೆಂದು ಪತ್ನಿ ಸುಮಾ ಹೇಳಿರುವುದು ರೆಕಾರ್ಡ್ ಆಗಿದೆ.

ಈವರೆಗೆ ಅನಂತರಾಜು ಅವರು ಹನಿಟ್ರ್ಯಾಪ್​ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಇದು ಪತ್ನಿಯ ಕಿರುಕುಳ ತಡೆಯಲಾಗದೆ ಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada