Optical Illusion: ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ?
ಈ ಚಿತ್ರದಲ್ಲಿ ಪುಟಾಣಿ ಹುಡುಗಿಯೊಬ್ಬಳು ಅವಿತಿದ್ದಾಳೆ. ಅವಿತಿದ್ದಾಳೆ ಅಂದರೆ ಕದ್ದು ಕೂತಿದ್ದಾಳೆಂದು ತಿಳಿಯಬೇಡಿ; ಆಕೆ ಕೈ ಬೀಸುತ್ತಾ ನಿಂತಿದ್ದಾಳೆ. ಆದರೆ ವಿಶಾಲ ಚಿತ್ರದಲ್ಲಿ ಅದನ್ನು ಹುಡುಕುವುದೇ ನಿಮಗಿರುವ ಸವಾಲು.
ಆಪ್ಟಿಕಲ್ ಇಲ್ಯೂಶನ್ (Optical Illusion) ಫೋಟೋಗಳು ಅಥವಾ ಅಂತಹ ಕಲಾಕೃತಿಗಳು ಎಲ್ಲರಿಗೂ ಹೆಚ್ಚು ಕುತೂಹಲ ಮೂಡಿಸುತ್ತವೆ. ಅವುಗಳು ನಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡುವುದಷ್ಟೇ ಅಲ್ಲ, ಕಣ್ಣಿಗೆ ಕಾಣುವುದಕ್ಕಿಂತ ಮತ್ತೂ ಏನಾದರೂ ಚಿತ್ರದಲ್ಲಿ ಅಡಗಿದೆಯೇ ಎಂದು ಹುಡುಕಲು ಪ್ರಚೋದಿಸುತ್ತವೆ. ಇದೇ ಕಾರಣದಿಂದ ಜನರು ವಿನೋದಕ್ಕಾಗಿ, ಸಮಯ ಕಳೆಯಲೆಂದು ಆಪ್ಟಿಕಲ್ ಇಲ್ಯೂಶನ್ ಚಿತ್ರಗಳನ್ನು ಗಮನಿಸುತ್ತಾರೆ. ಅಂದಹಾಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಿಂದ ನಿಮ್ಮ ವ್ಯಕ್ತಿತ್ವವನ್ನೂ ತಿಳಿಯಬಹುದು. ಈ ಬಗ್ಗೆ ಹಲವು ತಜ್ಞರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮಗೆ ಕುತೂಹಲವಿದ್ದರೆ ಈ ಬರಹ ಓದಿ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ವೈರಲ್ ಆಗಿದೆ. ಕಲ್ಲು ಬಂಡೆಗಳಿಂದ ಕೂಡಿರುವ ಮನಮೋಹಕ ಪ್ರಾಕೃತಿಕ ಚಿತ್ರವದು. ಆದರೆ ಆ ಚಿತ್ರದಲ್ಲಿ ಪುಟಾಣಿ ಹುಡುಗಿಯೊಬ್ಬಳು ಅವಿತಿದ್ದಾಳೆ. ಅವಿತಿದ್ದಾಳೆ ಅಂದರೆ ಕದ್ದು ಕೂತಿದ್ದಾಳೆಂದು ತಿಳಿಯಬೇಡಿ; ಆಕೆ ಕೈ ಬೀಸುತ್ತಾ ನಿಂತಿದ್ದಾಳೆ. ಆದರೆ ವಿಶಾಲ ಚಿತ್ರದಲ್ಲಿ ಅದನ್ನು ಹುಡುಕುವುದೇ ನಿಮಗಿರುವ ಸವಾಲು. ಮೇಲೆ ನೀಡಲಾಗಿರುವ ಚಿತ್ರವನ್ನು ಸೂಕ್ಷ್ಮವಾಗಿ ಮತ್ತೊಮ್ಮೆ ಗಮನಿಸಿ. ಅದರಲ್ಲಿರುವ ಬಾಲಕಿಯನ್ನು ಪತ್ತೆಹಚ್ಚಿ.
ಮೇಲೆ ನೀಡಲಾಗಿರುವ ಚಿತ್ರದಲ್ಲಿರುವ ಬಾಲಕಿ ತನ್ನ ಎರಡೂ ಕೈಗಳನ್ನೆತ್ತಿ ಕ್ಯಾಮೆರಾದತ್ತ ಬೀಸುತ್ತಿದ್ದಾಳೆ. ಆದರೆ ಆಕೆಯ ಮುಖ ಹಾಗೂ ಉಡುಪಿನ ಬಣ್ಣ ಕಲ್ಲುಗಳ ವರ್ಣಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಹೀಗಾಗಿ ನಿಮ್ಮ ದೃಷ್ಟಿಗೆ ಅದನ್ನು ಕಂಡುಹಿಡಿಯಲು ಕಷ್ಟವಾಗುತ್ತಿರಬಹುದು. ಇಂತಹ ಚಿತ್ರಗಳನ್ನೇ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಎನ್ನುತ್ತಾರೆ. ಅವು ಕಣ್ಣುಗಳಿಗೆ ಒಂದು ರೀತಿಯ ಭ್ರಮೆ ಉಂಟುಮಾಡುತ್ತವೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ಯಾವುದು? ಇದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು!
ಅಂದಹಾಗೆ ಮೇಲೆ ನೀಡಿರುವ ಚಿತ್ರವನ್ನು ತೆಗೆದಿರುವುದು ಕ್ಯಾಲಿಫೋರ್ನಿಯಾದಲ್ಲಿರುವ ಜೋಶುವಾ ಟ್ರೀ ನ್ಯಾಷನಲ್ ಪಾರ್ಕ್ನಲ್ಲಿ. ನಂತರ ಈ ಚಿತ್ರವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲಿಂದ ಫೋಟೋವು ವೈರಲ್ ಆಗಿದೆ.
ನೀವು ಚಿತ್ರದಲ್ಲಿ ಬಾಲಕಿಯನ್ನು ಗುರುತಿಸಿದಿರಾ? ಕಣ್ಣಿಗೆ ಸವಾಲಾದರೂ ನೀವು ಪತ್ತೆಹಚ್ಚಿರಬಹುದು. ಹಾಗಿದ್ದಲ್ಲಿ ನಿಮಗೆ ಅಭಿನಂದನೆ. ಒಂದು ವೇಳೆ ಇನ್ನೂ ಉತ್ತರವನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ.
ಬಾಲಕಿ ಈ ಸ್ಥಳದಿಂದ ಕೈ ಬೀಸುತ್ತಿದ್ದಾಳೆ:
ಇತ್ತೀಚೆಗೆ ವೈರಲ್ ಆಗಿತ್ತು ಮತ್ತೊಂದು ಚಿತ್ರ:
ಇತ್ತೀಚೆಗೆ ಇಂಥದ್ದೇ ಮತ್ತೊಂದು ಚಿತ್ರ ವೈರಲ್ ಆಗಿತ್ತು. ಹಳೆಯ ಕಾಲದ ಪೇಂಟಿಂಗ್ ಆಗಿದ್ದ ಆ ಚಿತ್ರದಲ್ಲಿ ಕರಡಿಯೊಂದು ಅವಿತಿತ್ತು. ಹಿಮದ ನಡುವೆ ಬೇಟೆಗಾರ ಕರಡಿಯನ್ನು ಹುಡುಕುವ ಮಾದರಿಯಲ್ಲಿ ಚಿತ್ರವಿತ್ತು. ಅದೂ ಕೂಡ ನೆಟ್ಟಿಗರ ಗಮನ ಸೆಳೆದಿತ್ತು. ಆ ಚಿತ್ರ ಇಲ್ಲಿದೆ:
ಕರಡಿ ಈ ಕಲಾಕೃತಿಯಲ್ಲಿ ಎಲ್ಲಿ ಅಡಗಿದೆ ಎಂದು ಹುಡುಕುತ್ತಿದ್ದೀರಾ? ಉತ್ತರ ತಿಳಿಯದಿದ್ದರೆ ನೀವು ಇಲ್ಲಿ ಇಲ್ಲಿ ಓದಬಹುದು
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ