Optical Illusions: ಈ ಚಿತ್ರದಲ್ಲಿ ಸ್ತ್ರೀ ಆಕೃತಿಯನ್ನು ಗುರುತಿಸಬಲ್ಲಿರಾ? ಈ ಕಲಾಕೃತಿಯ ವಿಶೇಷತೆ ಇಲ್ಲಿದೆ

Viral News: ಈ ಕಲಾಕೃತಿಯಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಬರಿಮೈಯಲ್ಲಿ ನಿಂತಿರುವ ಸ್ತ್ರೀ ಆಕೃತಿಯನ್ನು ಗುರುತಿಸಬಹುದು. ಸಾಮಾನ್ಯವಾಗಿ ಮರ- ನದಿಗಳ ಪ್ರಕೃತಿ ಚಿತ್ರದಂತೆ ಕಾಣುವ ಈ ಕಲಾಕೃತಿಯಲ್ಲಿ ಸ್ತ್ರೀಯ ಆಕೃತಿಯನ್ನೂ ಅಡಕ ಮಾಡಲಾಗಿದೆ. ಇದನ್ನು ರಚಿಸಿದ ಕಲಾವಿದ ಯಾರು? ಚಿತ್ರದ ವಿಶೇಷವೇನು ಎಂಬ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ.

Optical Illusions: ಈ ಚಿತ್ರದಲ್ಲಿ ಸ್ತ್ರೀ ಆಕೃತಿಯನ್ನು ಗುರುತಿಸಬಲ್ಲಿರಾ? ಈ ಕಲಾಕೃತಿಯ ವಿಶೇಷತೆ ಇಲ್ಲಿದೆ
ಈ ಚಿತ್ರದಲ್ಲಿ ಸ್ತ್ರೀಯನ್ನು ಗುರುತಿಸಬಲ್ಲಿರಾ?
Follow us
TV9 Web
| Updated By: shivaprasad.hs

Updated on: May 06, 2022 | 8:22 AM

ಆಪ್ಟಿಕಲ್ ಇಲ್ಯೂಶನ್ (Optical Illusion) ಚಿತ್ರಗಳು ಹಾಗೂ ಕಲಾಕೃತಿಗಳು ಮೊದಲಿನಿಂದಲೂ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಬುದ್ಧಿಶಕ್ತಿಗೆ ಸವಾಲು ನೀಡಬಲ್ಲ, ಜನರನ್ನು ಚಿಂತನೆಗೆ ತಳ್ಳುವ ಈ ಚಿತ್ರಗಳು ಒಂದೇ ಚಿತ್ರದಲ್ಲಿ ಹಲವು ಚಿತ್ರಗಳನ್ನು ಅಡಕವಾಗಿರಿಸಿಕೊಂಡಿರುತ್ತದೆ. ಆದರೆ ಒಂದೇ ನೋಟಕ್ಕೆ ಅದು ಗೋಚರವಾಗುವ ಸಾಧ್ಯತೆ ಕಡಿಮೆ. ಅಮೂರ್ತವಾಗಿರುವ ಚಿತ್ರಗಳಂತೆ ಭಾಸವಾಗುವ ಅವುಗಳನ್ನು ಗಮನವಿಟ್ಟು ನೋಡಿದಾಗ ಮಾತ್ರ ತಿಳಿಯುತ್ತದೆ. ಕೆಲವು ಚಿತ್ರಗಳನ್ನಂತೂ ತುಸು ದೂರವಿಟ್ಟ ಅಥವಾ ತುಸು ಹತ್ತಿರವಿಟ್ಟ, ತಲೆಕೆಳಗಾಗಿಸಿ.. ಹೀಗೆ ಕಸರತ್ತು ಮಾಡುತ್ತಾ ವೀಕ್ಷಿಸಬೇಕಾಗುತ್ತದೆ. ಅಂದಹಾಗೇ ಇಂತಹ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಿಂದ ನಮ್ಮ ವ್ಯಕ್ತಿತ್ವ, ಮೆದುಳು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನೂ ಗುರುತಿಸಬಹುದು ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಯಾವುದಾದರೂ ಕಲಾಕೃತಿ ಅಥವಾ ಚಿತ್ರಗಳನ್ನು ಗಮನಿಸುವಾಗ ಇರಬೇಕಾದ ಒಂದೇ ದೃಷ್ಟಿಕೋನ ಎಂಬ ಕಲ್ಪನೆಯನ್ನು ಇವು ಮುರಿಯುತ್ತವೆ. ಚಿತ್ರದಲ್ಲಿ ಒಂದೇ ಬಾರಿ ಕಾಣುವುದಷ್ಟೇ ಇಲ್ಲ, ಮತ್ತೇನೋ ಇದೆ ಎನ್ನುವುದುನ್ನು ಇಂತಹ ಚಿತ್ರಗಳು ಹೇಳುತ್ತವೆ. ಇಲ್ಲಿ ಅಂಥದ್ದೇ ಒಂದು ಕುತೂಹಲಕರ ಕಲಾಕೃತಿಯನ್ನು ನೀಡಲಾಗಿದೆ. ನೀವು ಅದರಲ್ಲಿ ನಿಂತಿರುವ ಸ್ತ್ರೀಯನ್ನು ಗುರುತಿಸಬಲ್ಲಿರಾ?

ಈ ಕಲಾಕೃತಿಯಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಬರಿಮೈಯಲ್ಲಿ ನಿಂತಿರುವ ಸ್ತ್ರೀಯನ್ನು ಗುರುತಿಸಬಹುದು. ಸಾಮಾನ್ಯವಾಗಿ ಮರ- ನದಿಗಳ ಪ್ರಕೃತಿ ಚಿತ್ರದಂತೆ ಕಾಣುವ ಈ ಕಲಾಕೃತಿಯಲ್ಲಿ ಸ್ತ್ರೀಯ ಆಕೃತಿಯನ್ನೂ ಅಡಕ ಮಾಡಲಾಗಿದೆ. ಇದು ಕಲಾವಿದರ ನೈಪುಣ್ಯತೆಯನ್ನು ತೋರಿಸುತ್ತದೆ. ಇದನ್ನು ರಚಿಸಿದ ಕಲಾವಿದ ಯಾರು? ಚಿತ್ರದ ವಿಶೇಷವೇನು ಎಂಬ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ. ಅದಕ್ಕೂ ಮುನ್ನ ಈ ಚಿತ್ರದಲ್ಲಿ ನೀವು ಸ್ತ್ರೀಯ ಆಕೃತಿಯನ್ನು ಗುರುತಿಸಬಲ್ಲಿರೇ? ಚಿತ್ರ ಇಲ್ಲಿದೆ ನೋಡಿ.

Can you find woman in this optical illusion

ಈ ಚಿತ್ರದಲ್ಲಿ ಸ್ತ್ರೀಯನ್ನು ಗುರುತಿಸಬಲ್ಲಿರಾ?

ಈ ಕಲಾಕೃತಿ ರಚಿಸಿದವರು ಯಾರು?

ಇದನ್ನೂ ಓದಿ
Image
Viral Optical Illusion: ಬುದ್ಧಿಗೆ ಗುದ್ದು ನೀಡುವ ಈ ಚಿತ್ರದಲ್ಲಿ ಕರಡಿಯೊಂದು ಅಡಗಿದೆ; ನೀವು ಕಂಡುಹಿಡಿಯಬಲ್ಲಿರಾ? 
Image
Optical Illusion: ಈ ಚಿತ್ರದಲ್ಲಿ ಒಟ್ಟು 9 ಮುಖಗಳಿವೆ; ನೀವು ಗುರುತಿಸಬಲ್ಲಿರಾ?
Image
ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
Image
ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

ಓಲೆಗ್ ಶುಪ್ಲ್ಯಾಕ್‌ ಎಂಬ ಕಲಾಕಾರನ 1991 ರ ತೈಲವರ್ಣ ಚಿತ್ರವಿದು. ನದಿ, ಅದರ ಎರಡೂ ದಡಗಳಲ್ಲಿ ಬೆಳೆದಿರುವ ಮರಗಳನ್ನು ಚಿತ್ರವು ಕಟ್ಟಿಕೊಡುತ್ತದೆ. ಆದರೆ ಚಿತ್ರದಲ್ಲಿ ಅದಕ್ಕಿಂತಲೂ ಹೆಚ್ಚಿನ ಆಯಾಮಗಳಿವೆ. ಮರಗಳನ್ನೇ ಬಳಸಿಕೊಂಡು ಕಲಾಕಾರ ಮಹಿಳೆಯ ಆಕೃತಿಯನ್ನು ರಚಿಸಿದ್ದಾನೆ. ಸಣ್ಣ ಪುಟ್ಟ ಕಾಂಡಗಳು, ಎಲೆಗಳನ್ನು ರಚಿಸಿ ಮಹಿಳೆಯ ಕಾಲುಗಳನ್ನು ಸೃಷ್ಟಿ ಮಾಡಲಾಗಿದೆ. ಮರದ ಎಲೆಗಳನ್ನೇ ಬಳಸಿ ಮುಖ ರಚಿಸಲಾಗಿದೆ.

ಈ ಕಲಾಕೃತಿಯಲ್ಲಿರುವ ಮಹಿಳೆ ಯಾರು?

ಈ ಕಲಾಕೃತಿಯಲ್ಲಿ ಚಿತ್ರಿಸಲಾದ ಸ್ತ್ರೀ ಆಕೃತಿಯು ಪ್ರಾಚೀನ ಸ್ಲಾವಿಕ್ ಧರ್ಮದಲ್ಲಿ ಪೂಜಿಸಲ್ಪಟ್ಟ ಬೆರೆಹಿನಿಯಾ ಎಂಬ ಮತ್ಸ್ಯಕನ್ಯೆಯ ಚಿತ್ರಣವಾಗಿದೆ ಎಂದು ಹೇಳಲಾಗಿದೆ. ಪೂರ್ವ ಸ್ಲಾವಿಕ್ ಪುರಾಣದಲ್ಲಿ ಬೆರೆಹಿನಿಯಾರನ್ನು ಶುದ್ಧ ಆತ್ಮ, ವರಗಳನ್ನು ನೀಡುವ ತಾಯಿ ಮತ್ತು ನದಿಗಳು ಮತ್ತು ಸರೋವರಗಳು ಸೇರಿದಂತೆ ಜಲಮೂಲಗಳ ರಕ್ಷಕ ಎಂದು ಪರಿಗಣಿಸಲಾಗಿದೆ.

ಸ್ತ್ರೀ ಆಕೃತಿಯನ್ನು ನೀವು ಗುರುತಿಸಿದರೆ ನಿಮ್ಮ ವ್ಯಕ್ತಿತ್ವ ಹೀಗಂತೆ..

ಆಪ್ಟಿಕಲ್ ಇಲ್ಯೂಶನ್ ಹೊರತಾಗಿಯೂ ನೀವು ಸ್ತ್ರೀ ಆಕೃತಿಯನ್ನು ಗುರುತಿಸಬಹುದಾದರೆ ನೀವು ಪರರ ಬಗ್ಗೆ ಅನುಕಂಪ ಹೊಂದಿದ ವ್ಯಕ್ತಿಯಾಗಿರುತ್ತೀರಿ ಎನ್ನುತ್ತದೆ ‘ಮೈಂಡ್ಸ್ ಜರ್ನಲ್ಸ್’. ಅದರ ಪ್ರಕಾರ, ನೀವು ಶುದ್ಧ ಆತ್ಮ, ಒಳ್ಳೆಯ ಮನಸ್ಸನ್ನು ಹೊಂದಿದ್ದು, ದೇವರಿಂದ ರಕ್ಷಿಸಲ್ಪಟ್ಟಿದ್ದೀರಿ. ಇತರರಿಗೂ ರಕ್ಷಕ ಚೇತನವಾಗಬಲ್ಲ ವ್ಯಕ್ತಿಗಳಲ್ಲಿ ನೀವೂ ಸೇರಿದ್ದೀರಿ!

ಇನ್ನೂ ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ