AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World’s tallest Dog: ಪ್ರಪಂಚದ ಅತ್ಯಂತ ಎತ್ತರದ ಶ್ವಾನ ಎಂಬ ದಾಖಲೆ ಬರೆದ ‘ಜೀಯಸ್’; ಇಲ್ಲಿದೆ ಕುತೂಹಲಕರ ವಿಚಾರ

Zeus | Guinness World Record: ಗಿನ್ನೆಸ್ ವರ್ಲ್ಡ್​ ರೆಕಾರ್ಡ್ ಬುಧವಾರದಂದು ಜಗತ್ತಿನ ಅತ್ಯಂತ ಎತ್ತರದ ಶ್ವಾನವನ್ನು ಘೋಷಿಸಿದ್ದು, ಎರಡು ವರ್ಷದ ಅಮೇರಿಕನ್ ಗ್ರೇಟ್ ಡೇನ್ ತಳಿಯ ‘ಜೀಯಸ್​’ ಈ ಹಿರಿಮೆಗೆ ಪಾತ್ರವಾಗಿದೆ.

World's tallest Dog: ಪ್ರಪಂಚದ ಅತ್ಯಂತ ಎತ್ತರದ ಶ್ವಾನ ಎಂಬ ದಾಖಲೆ ಬರೆದ ‘ಜೀಯಸ್’; ಇಲ್ಲಿದೆ ಕುತೂಹಲಕರ ವಿಚಾರ
ವಿಶ್ವದ ಅತ್ಯಂತ ಎತ್ತರದ ಶ್ವಾನ ಜೀಯಸ್
TV9 Web
| Edited By: |

Updated on:May 06, 2022 | 2:09 PM

Share

ವಿಶ್ವದ ಅತ್ಯಂತ ಎತ್ತರದ ಶ್ವಾನ ಯಾವುದು ಎಂಬ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ. ಗಿನ್ನೆಸ್ ವರ್ಲ್ಡ್​ ರೆಕಾರ್ಡ್ (Guinness World Record) ಬುಧವಾರದಂದು ಜಗತ್ತಿನ ಅತ್ಯಂತ ಎತ್ತರದ ಶ್ವಾನವನ್ನು ಘೋಷಿಸಿದ್ದು, ಎರಡು ವರ್ಷದ ಅಮೇರಿಕನ್ ಗ್ರೇಟ್ ಡೇನ್ ತಳಿಯ ‘ಜೀಯಸ್​’ (Zeus) ಈ ಹಿರಿಮೆಗೆ ಪಾತ್ರವಾಗಿದೆ. ಇದು ಸದ್ಯ ಜೀವಂತವಿರುವ ಅತ್ಯಂತ ಎತ್ತರದ ಗಂಡು ಶ್ವಾನವಾಗಿದೆ. ಬರೋಬ್ಬರಿ 3 ಅಡಿ 5.18 ಇಂಚು ಅರ್ಥಾತ್ 1.046 ಮೀಟರ್ ಎತ್ತರವಾಗಿದೆ ‘ಜೀಯಸ್’. ಅಮೇರಿಕಾದ ಟೆಕ್ಸಾಸ್​ನ ಬೆಡ್​​ಫೋರ್ಡ್​ನಲ್ಲಿರುವ ಡೇವಿಸ್ ಕುಟುಂಬದ ಜತೆ ವಾಸ ಮಾಡುತ್ತಿದ್ದಾನೆ ‘ಜೀಯಸ್’. ಅವನನ್ನು 8 ವಾರಗಳ ಮರಿಯಾಗಿದ್ದಾಗ ಬ್ರಿಟನಿ ಡೇವಿಸ್ ದತ್ತು ಸ್ವೀಕರಿಸಿದ್ದರಂತೆ. ಮರಿಯಾಗಿದ್ದಾಗಲೇ ಆತನ ಕಾಲುಗಳೆಲ್ಲವೂ ದೊಡ್ಡದಾಗಿತ್ತು ಎಂದಿದ್ದಾರೆ ಕುಟುಂಬದವರು. ‘ಜೀಯಸ್’ ಬಗ್ಗೆ ಮತ್ತಷ್ಟು ಕುತೂಹಲಕರ ವಿಚಾರಗಳು ಇಲ್ಲಿವೆ.

ಗಿನ್ನೆಸ್ ವರ್ಲ್ಡ್​​ ರೆಕಾರ್ಡ್​ನ ಟ್ವಿಟರ್ ಖಾತೆಯಲ್ಲಿ ‘ಜೀಯಸ್’ನ ಸಣ್ಣ ಸಾಕ್ಷ್ಯಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಜೀಯಸ್ ಒಡೆಯರಾದ ಡೇವಿಸ್ ಕುಟುಂಬಸ್ಥರು ಮಾತನಾಡಿದ್ದಾರೆ. ‘‘ಈ ಮೊದಲೆಲ್ಲಾ ಈ ಶ್ವಾನವನ್ನು ನೋಡಿದವರು ಜಗತ್ತಿನ ಅತ್ಯಂತ ಎತ್ತರದ ನಾಯಿಯಿದು ಎನ್ನುತ್ತಿದ್ದರು. ಆದರೆ ಅದೀಗ ನಿಜವಾಗಿದೆ. ನಾವೂ ಕೂಡ ಎಲ್ಲರಿಗೂ ಹೌದು, ಇದು ಜಗತ್ತಿನ ಅತ್ಯಂತ ಎತ್ತರದ ನಾಯಿ ‘ಜೀಯಸ್’ ಎನ್ನಬಹುದು’’ ಎಂದಿದ್ದಾರೆ.

ಇದನ್ನೂ ಓದಿ
Image
‘2023ರಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ಉಡುಗೊರೆ’; ವಿವಾಹ ಆಹ್ವಾನ ಪತ್ರಿಕೆಯ ಫೋಟೋ ವೈರಲ್
Image
Knowledge: ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷವೇಕೆ? ಇಲ್ಲಿದೆ ಕಾರಣ
Image
Optical Illusions: ಈ ಚಿತ್ರದಲ್ಲಿ ಸ್ತ್ರೀ ಆಕೃತಿಯನ್ನು ಗುರುತಿಸಬಲ್ಲಿರಾ? ಈ ಕಲಾಕೃತಿಯ ವಿಶೇಷತೆ ಇಲ್ಲಿದೆ

ಇದಲ್ಲದೇ ಈ ಶ್ವಾನವನ್ನು ನೋಡಿದ ತಕ್ಷಣ ಜನರು ಹೇಗೆಲ್ಲಾ ಪ್ರತಿಕ್ರಿಯಿಸುತ್ತಾರೆ ಎನ್ನುವುದುನ್ನು ಅವರು ನೆನಪಿಸಿಕೊಂಡಿದ್ದಾರೆ. ‘‘ಇದು ಕುದುರೆಯಂತಿದೆ..’’, ‘‘ನಾವು ಇದರ ಮೇಲೆ ಸವಾರಿ ಮಾಡಬಹುದೇ?’’, ಹೀಗೆಲ್ಲಾ ಜನರು ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರಂತೆ. ‘‘ಎಲ್ಲಾ ಪ್ರಶ್ನೆಗೂ ಇಲ್ಲ ಇಲ್ಲ.. ಎಂದು ಸಾಕಾಗಿದೆ’’ ಎಂದಿದ್ದಾರೆ ಡೇವಿಸ್.

ಇಷ್ಟೆಲ್ಲಾ ದೈತ್ಯಾಕಾರ ಹೊಂದಿದ್ದರೂ ‘ಜೀಯಸ್’ ಸ್ನೇಹಜೀವಿಯಂತೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತ ಫೇಮಸ್ ಎಂದಿರುವ ಶ್ವಾನದ ಒಡತಿ, ದಲ್ಲಾಸ್ ಸುತ್ತಮುತ್ತ ಅವನಿಗೆ ಅಭಿಮಾನಿಗಳಿದ್ದಾರೆ ಎಂದಿದ್ದಾರೆ. ಜೀಯಸ್​ ಮನೆಯಲ್ಲೂ ಇತರ ಸಾಕುಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿರುತ್ತಾನಂತೆ.

‘ಜೀಯಸ್’ ಬಗ್ಗೆ ಕುತೂಹಲಕರ ವಿಚಾರ ಹೊಂದಿರುವ ಈ ವಿಡಿಯೋ ನೋಡಿ:

ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Fri, 6 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ