ಒಂದೇ ಕಂಪೆನಿಯಲ್ಲಿ ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ವರ್ಷ ಕೆಲಸ ಮಾಡಬಹುದು. 25, 30, 40… ನೀವು ಊಹಿಸುವುದು ಕಷ್ಟ ಆಗುತ್ತದೆ. ಏಕೆಂದರೆ, ಬ್ರೆಜಿಲ್ನ ಈ ವ್ಯಕ್ತಿ 84 ವರ್ಷಗಳ ಕಾಲ ಒಂದೇ ಕಂಪೆನಿಯಲ್ಲಿದ್ದು, ಗಿನ್ನಿಸ್ ದಾಖಲೆ (Guinness Record) ಬರೆದಿದ್ದಾರೆ. ವಾಲ್ಟರ್ ಅರ್ಥ್ಮನ್ 84 ವರ್ಷಗಳಿಂದ ಟೆಕ್ಸ್ಟೈಲ್ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಅರ್ಥ್ಮನ್ ಜನಿಸಿದ್ದು ಬ್ರಸ್ಕ್ನಲ್ಲಿ. ಜರ್ಮನ್ನರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಟ್ಟಣ ಅದು. ತಮ್ಮ ಹದಿಹರೆಯದ ದಿನಗಳಲ್ಲೇ ಅವರು ಇಂಡಸ್ಟ್ರಿಯಸ್ ರೆನಾಕ್ಸ್ ಎಸ್ಎನಲ್ಲಿ, ಅದೀಗ ರೆನಾಕ್ಸ್ವ್ಯೂ ಎನಿಸಿಕೊಂಡಿದ್ದು, ಅಲ್ಲಿ ಉದ್ಯೋಗ ಆರಂಭಿಸಿದರು. 1938ರ ಸಮಯದಲ್ಲಿ ಮನೆಯಲ್ಲಿ ಮಕ್ಕಳು ಕುಟುಂಬಕ್ಕೆ ನೆರವಾಗಬೇಕು ಎಂಬ ನಿರೀಕ್ಷೆ ಇರುತ್ತಿತ್ತು ಎಂದಿದ್ದಾರೆ ಅರ್ಥ್ಮನ್. ಐದು ಮಕ್ಕಳ ಕುಟುಂಬದಲ್ಲಿ ನಾನೇ ಹಿರಿಯ. 14ನೇ ವಯಸ್ಸಿನಲ್ಲಿದ್ದಾಗ ನನ್ನನ್ನು ತಾಯಿ ಕೆಲಸ ಹುಡುಕಲು ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ. ಇವರು ವೃತ್ತಿ ಜೀವನ ಆರಂಭಿಸಿದ್ದು ಶಿಪ್ಪಿಂಗ್ ಸಹಾಯಕರಾಗಿ. ಆ ನಂತರ ಮಾರಾಟ ವಿಭಾಗಕ್ಕೆ ಬಡ್ತಿ ಸಿಕ್ಕಿದೆ. ಕ್ರಮೇಣ ಸೇಲ್ಸ್ ಮ್ಯಾನೇಜರ್ ಆಗಿದ್ದಾರೆ.
ತಮ್ಮ 50ರ ಹರೆಯದಲ್ಲಿ ಅರ್ಥ್ಮನ್ ದೇಶದಾದ್ಯಂತ ಸಂಚರಿಸುವುದಕ್ಕೆ ಶುರು ಮಾಡಿದ್ದಾರೆ. ಆ ವೇಳೆ ಹೊಸ ಸ್ಥಳಗಳು, ವೃತ್ತಿಪರ ಸಂಬಂಧಗಳು ಕಂಡುಕೊಳ್ಳುತ್ತಾ ಸ್ನೇಹ ವರ್ಗವನ್ನು ಗಳಿಸಿಕೊಟ್ಟಿದೆ. ತಮ್ಮ ವೃತ್ತಿ ಬದುಕಿನಲ್ಲಿ ಅರ್ಥ್ಮನ್ ಹಲವಾರು ಬದಲಾವಣೆಗಳಿ ಸಾಕ್ಷಿ ಆಗಿದ್ದಾರೆ. ತಾಯ್ನೆಲದಲ್ಲಿ- ವಿದೇಶದಲ್ಲಿ ಹೀಗೆ. ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂಬುದು ನಾನು ಕಲಿತ ಮುಖ್ಯ ಪಾಠ ಎನ್ನುತ್ತಾರೆ ಅವರು. ಈ ವರ್ಷದ ಏಪ್ರಿಲ್ 19ನೇ ತಾರೀಕಿಗೆ ಅರ್ಥ್ಮನ್ಗೆ 100 ವರ್ಷ ಆಯಿತು. ಸಹೋದ್ಯೋಗಿಗಳು, ಕುಟುಂಬದಿಂದ ಅವರಿಗೆ ಬಹಳ ದೊಡ್ಡ ಪಾರ್ಟಿ ನೀಡಲಾಯಿತು.
ಇಷ್ಟು ದೀರ್ಘ ಕಾಲ ಒಂದೇ ಕಡೆ ಕೆಲಸ ಮಾಡುವುದರ ಬಗ್ಗೆ ಮಾತನಾಡಿರುವ ಅವರು, ತಾವು ಎಂಜಾಯ್ ಮಾಡುವಂಥದ್ದನ್ನು ಜನರು ಮಾಡಿದಾಗ ಹೋಗುವ ಸಮಯ ಅಂತ ನೋಡುವುದೇ ಇಲ್ಲ ಎನ್ನುತ್ತಾರೆ. ಎಲ್ಲಿ ವೈಯಕ್ತಿಕವಾಗಿ ಕೆಲಸ ಮಾಡುವುದಕ್ಕೆ ಪ್ರೋತ್ಸಾಹ ಸಿಗುತ್ತದೋ ಅಂಥಲ್ಲಿ ಉತ್ತಮ ಸಂಸ್ಥೆಗಳಿಗೆ ಕೆಲಸ ಮಾಡುವಂತೆ ಯುವ ವೃತ್ತಿಪರರಿಗೆ ಅರ್ಥ್ಮನ್ ಸಲಹೆ ಮಾಡುತ್ತಾರೆ. “ನನ್ನ ಎಲ್ಲ ಗಮನ ಇಂದಿನ ಬಗ್ಗೆ ಅಷ್ಟೆ. ನಾಳೆ ಅಂದರೆ ಅದು ಮತ್ತೊಂದು ದಿನ ಮಾತ್ರ. ಬೆಳಗ್ಗೆ ಎದ್ದು, ವ್ಯಾಯಾಮ ಮಾಡಿ ಹಾಗೂ ಕೆಲಸ ಹೋಗುತ್ತೇನೆ; ವರ್ತಮಾನದೊಂದಿಗೆ ನೀವು ಬಿಡುವಿಲ್ಲದಂತೆ ಇರಬೇಕು. ಭೂತಕಾಲದಲ್ಲೋ ಅಥವಾ ಭವಿಷ್ಯದಲ್ಲೋ ಅಲ್ಲ,” ಎಂದು ಗಿನ್ನಿಸ್ಗೆ ಹೇಳಿದ್ದಾರೆ. “ಇಲ್ಲಿ ಮತ್ತು ಈಗ ಏನು ಲೆಕ್ಕ ಆಗುತ್ತದೆ. ಆದ್ದರಿಂದ, ನಾವು ಕೆಲಸಕ್ಕೆ ಹೋಗೋಣ!” ಎನ್ನುತ್ತಾರೆ.
ವಿದೇಶ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, 60ರ ಇಳಿ ವಯಸ್ಸಿನಲ್ಲೂ ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ