ವಾಸ್ತವವಾಗಿ ಸ್ನೇಹಜೀವಿಯಾದ ನಾಯಿಗಳು ಬೆಕ್ಕನ್ನು ಮೊದಲು ನೋಡಿದಾಗ ಸ್ನೇಹಿತರಂತೆ ಅವುಗಳನ್ನು ಮಾತನಾಡಿಸಲು ಪ್ರಯತ್ನಿಸುತ್ತವೆ. ಬೆಕ್ಕಿನ ಬಳಿ ಬಂದು ಬಾಲ ಅಲ್ಲಾಡಿಸುತ್ತಾ ದೇಹದ ವಾಸನೆಯನ್ನು ಪಡೆಯುತ್ತವೆ. ಆದರೆ ಬೆಕ್ಕಿಗೆ ಈ ವರ್ತನೆ ಇಷ್ಟವಾಗುವುದಿಲ್ಲ. ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ ನಿಜ. ಆದರೆ ಬೆಕ್ಕುಗಳಿಗೆ ಬಾಲ ಅಲ್ಲಾಡಿಸಿದಾದ ಸ್ವಭಾವ ಸಹಜವಾದ ಕೋಪ, ಕಿರಿಕಿರಿ ಆಗುತ್ತದೆ.