Knowledge: ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷವೇಕೆ? ಇಲ್ಲಿದೆ ಕಾರಣ
Cat and Dog Dislike: ನಾಯಿ ಮತ್ತು ಬೆಕ್ಕು ಎರಡೂ ಸಾಕುಪ್ರಾಣಿಗಳು. ಆದರೆ ಅವುಗಳ ನಡುವೆ ದ್ವೇಷವೇಕೆ? ತಜ್ಞರ ಪ್ರಕಾರ ಇದಕ್ಕೆ ಕಾರಣ, ನಾಯಿ ಗುಂಪಿನಲ್ಲಿರಲು ಇಷ್ಟಪಟ್ಟರೆ ಬೆಕ್ಕು ಒಂಟಿಯಾಗಿರಲು ಇಷ್ಟಪಡುತ್ತದೆ. ಮೊದಲ ಬಾರಿಗೆ ನಾಯಿಗಳು ಬೆಕ್ಕನ್ನು ನೋಡಿದಾಗ ಸ್ನೇಹದಿಂದ ಬಾಲವಾಡಿಸುತ್ತಾ ಬಂದು ಬೆಕ್ಕಿನ ದೇಹದ ವಾಸನೆ ಪಡೆಯಲು ಯತ್ನಿಸುತ್ತದೆ. ಆದರೆ ಬೆಕ್ಕುಗಳೇ ನಾಯಿಯಿಂದ ಅಂತರ ಕಾಯ್ದುಕೊಳ್ಳುತ್ತವೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ.
Updated on: May 06, 2022 | 8:46 AM
Share



ವಾಸ್ತವವಾಗಿ ಸ್ನೇಹಜೀವಿಯಾದ ನಾಯಿಗಳು ಬೆಕ್ಕನ್ನು ಮೊದಲು ನೋಡಿದಾಗ ಸ್ನೇಹಿತರಂತೆ ಅವುಗಳನ್ನು ಮಾತನಾಡಿಸಲು ಪ್ರಯತ್ನಿಸುತ್ತವೆ. ಬೆಕ್ಕಿನ ಬಳಿ ಬಂದು ಬಾಲ ಅಲ್ಲಾಡಿಸುತ್ತಾ ದೇಹದ ವಾಸನೆಯನ್ನು ಪಡೆಯುತ್ತವೆ. ಆದರೆ ಬೆಕ್ಕಿಗೆ ಈ ವರ್ತನೆ ಇಷ್ಟವಾಗುವುದಿಲ್ಲ. ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ ನಿಜ. ಆದರೆ ಬೆಕ್ಕುಗಳಿಗೆ ಬಾಲ ಅಲ್ಲಾಡಿಸಿದಾದ ಸ್ವಭಾವ ಸಹಜವಾದ ಕೋಪ, ಕಿರಿಕಿರಿ ಆಗುತ್ತದೆ.

ಇವೆರಡರ ಈ ವಿರುದ್ಧ ಸ್ವಭಾವದಿಂದಾಗಿ ಒಬ್ಬರಿಗೊಬ್ಬರು ಸ್ನೇಹದಿಂದ ವರ್ತಿಸಲು ಸಾದ್ಯವಾಗುವುದಿಲ್ಲ. ಸ್ನೇಹಕ್ಕಾಗಿ ನಾಯಿ ಬೆಕ್ಕಿನ ಬಳಿಗೆ ಬಂದರೂ ಬೆಕ್ಕು ಅದರಿಂದ ದೂರವಿರಲು ಪ್ರಯತ್ನಿಸುತ್ತದೆ.

ಆದರೆ ನಾಯಿ ಬೆಕ್ಕುಗಳು ಸಣ್ಣ ಮರಿಯಿದ್ದಾಗಿನಿಂದ ಒಟ್ಟಿಗೇ ಬೆಳೆದು, ಸ್ನೇಹದಿಂದ ಇರುವ ನಿದರ್ಶನಗಳನ್ನು ನಾವು ಕಣ್ಣಾರೆ ನೋಡುತ್ತೇವೆ., ಅದಾಗ್ಯೂ ಸ್ವಭಾವತಃ ಅವುಗಳು ಏಕೆ ವಿರುದ್ಧ ಎನ್ನುವುದನ್ನು ಮೇಲೆ ವಿವರಿಸಲಾಗಿದೆ.
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
