Optical Illusion: ಈ ಚಿತ್ರದಲ್ಲಿ ಒಟ್ಟು 9 ಮುಖಗಳಿವೆ; ನೀವು ಗುರುತಿಸಬಲ್ಲಿರಾ?
Optical Illusion Photos: ಬಹಳ ಪ್ರಸಿದ್ಧವಾದ ಈ ಚಿತ್ರದಲ್ಲಿ 9 ಮುಖಗಳಿವೆ. ಆಪ್ಟಿಕಲ್ ಇಲ್ಯೂಶನ್ ವಿಶೇಷತೆಯೆಂದರೆ ನೀವು ಒಂದೇ ದೃಷ್ಟಿಯಲ್ಲಿ ಎಲ್ಲವನ್ನೂ ಗುರುತಿಸಲು ಸಾಧ್ಯವಿಲ್ಲ. ಕೆಲವನ್ನು ಗುರುತಿಸಲು ನೀವು ಫೋಟೋವನ್ನು ದೂರ ಇಟ್ಟುಕೊಳ್ಳಬೇಕು, ಕೆಲವೊಂದನ್ನು ಗುರುತಿಸಲು ಹತ್ತಿರದಿಂದ ಗಮನಿಸಬೇಕು.. ನೀವೆಷ್ಟು ಮುಖಗಳನ್ನು ಗುರುತಿಸಬಲ್ಲಿರಿ?
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಶನ್ (Optical Illusion) ಫೋಟೋಗಳು/ ಕಲಾಕೃತಿಗಳು ಎಲ್ಲರ ಗಮನಸೆಳೆಯುತ್ತಿವೆ. ಇವುಗಳು ಬುದ್ಧಿಗೆ ಗುದ್ದು ನೀಡಿ, ಚಿಂತನೆಗೆ ಹಚ್ಚುತ್ತವೆ. ಮತ್ತಷ್ಟು ಫೋಟೋಗಳು ನಮ್ಮ ವ್ಯಕ್ತಿತ್ವವನ್ನೂ ತಿಳಿಸುತ್ತವೆ ಎನ್ನುತ್ತವೆ ವರದಿಗಳು. ಇದೀಗ ಎಲ್ಲೆಡೆ ಈ ಫೋಟೋ ಸದ್ದು ಮಾಡುತ್ತಿದೆ. ಬಹಳ ಪ್ರಸಿದ್ಧವಾದ ಈ ಚಿತ್ರದಲ್ಲಿ 9 ಮುಖಗಳಿವೆ. ಆಪ್ಟಿಕಲ್ ಇಲ್ಯೂಶನ್ ವಿಶೇಷತೆಯೆಂದರೆ ನೀವು ಒಂದೇ ದೃಷ್ಟಿಯಲ್ಲಿ ಎಲ್ಲವನ್ನೂ ಗುರುತಿಸಲು ಸಾಧ್ಯವಿಲ್ಲ. ಕೆಲವನ್ನು ಗುರುತಿಸಲು ನೀವು ಫೋಟೋವನ್ನು ದೂರ ಇಟ್ಟುಕೊಳ್ಳಬೇಕು, ಕೆಲವೊಂದನ್ನು ಗುರುತಿಸಲು ಹತ್ತಿರದಿಂದ ಗಮನಿಸಬೇಕು.. ಹೀಗೆ. ಪ್ರಸ್ತುತ ಕಾಣುತ್ತಿರುವ ಚಿತ್ರದಲ್ಲಿ 9 ಮುಖಗಳಿದೆ. ಸಾಮಾನ್ಯವಾಗಿ ಒಂದೇ ಬಾರಿಗೆ ಎಲ್ಲವನ್ನೂ ಗುರುತಿಸುವುದು ಕಷ್ಟ. ನೀವು ಪ್ರಯತ್ನಿಸಿ. ಎಷ್ಟು ಮುಖಗಳನ್ನು ಗುರುತಿಸುತ್ತೀರಿ ಎಂದು ಪರೀಕ್ಷಿಸಿಕೊಳ್ಳಿ.
ಈ ಚಿತ್ರವನ್ನು ರಚಿಸಿದವರು ಮೆಕ್ಸಿಕನ್ ಕಲಾವಿದ ಆಕ್ಟೇವಿಯೊ ಒಕಾಂಪೊ (Octavio Ocampo). ಅತ್ಯಂತ ಪ್ರಸಿದ್ಧವಾದ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಲ್ಲಿ ಇದೂ ಒಂದು. ಈ ಒಂದೇ ಚಿತ್ರದಲ್ಲಿ ಒಂಬತ್ತು ಮುಖಗಳನ್ನು ಮರೆಮಾಡಿರುವುದು ಕಲಾವಿದರ ಕುಸುರಿಗೆ ಸಾಕ್ಷಿ. ನೀವು ಕೆಲವು ಮುಖಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ಒಂಬತ್ತೂ ಚಿತ್ರಗಳನ್ನು ಗುರುತಿಸಲು ನೀವು ತಲೆಗೆ ಸ್ವಲ್ಪ ಕೆಲಸ ಕೊಡಲೇಬೇಕು.
ಮತ್ತೊಮ್ಮೆ ಚಿತ್ರವನ್ನು ಗಮನವಿಟ್ಟು ನೋಡಿ:
ನೀವು ಒಟ್ಟು ಎಷ್ಟು ಮುಖಗಳನ್ನು ಮೇಲಿನ ಚಿತ್ರದಲ್ಲಿ ಗುರುತಿಸಿದ್ದೀರಿ? ನಿಮ್ಮ ವೀಕ್ಷಣಾ ಕೌಶಲ್ಯದ ಬಗ್ಗೆ ‘ದಿ ಮೈಂಡ್ಸ್ ಜರ್ನಲ್’ ಹೀಗೆ ಹೇಳುತ್ತದೆ: ನೀವು 6 ಚಿತ್ರಗಳನ್ನು ಗುರುತಿಸಿದರೆ ನಿಮಗೆ ಸಾಮಾನ್ಯವಾದ ವೀಕ್ಷಣಾ ಕೌಶಲ್ಯವಿದೆ. ನೀವು 7 ಮುಖಗಳನ್ನು ಗುರುತಿಸಿದರೆ ಸಾಮಾನ್ಯ ಕೌಶಲ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದೀರಿ ಎಂದರ್ಥ.
ನೀವು 8 ಮುಖಗಳನ್ನು ಗುರುತಿಸಿದರೆ ‘ನಿಮ್ಮ ಬಗ್ಗೆ ನೀವು ಹೆಮ್ಮೆಪಡುವಷ್ಟು ಸಾಮರ್ಥ್ಯ ಹೊಂದಿದ್ದೀರಿ. ಒಂದುವೇಳೆ ನೀವು 9 ಮುಖಗಳನ್ನೂ ಗುರುತಿಸಿದರೆ ನೀವು ಅಸಾಮಾನ್ಯ ವೀಕ್ಷಣಾ ಕೌಶಲ್ಯ ಹೊಂದಿದ್ದೀರಿ. ನೀವು ಬಹಳಷ್ಟು ಕ್ರಿಯೇಟಿವ್ ವ್ಯಕ್ತಿಯೂ ಆಗಿದ್ದೀರಿ ಎಂದರ್ಥ.
ನಿಮಗೆ ಮುಖಗಳು ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಇನ್ನೂ ಅನುಮಾನಗಳಿದ್ದರೆ ಉತ್ತರ ಇಲ್ಲಿದೆ:
ಇದನ್ನೂ ಓದಿ: ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
Published On - 3:10 pm, Fri, 29 April 22