Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಹೇಳಬಹುದು

Viral | Trending: ಮೆದುಳಿನಲ್ಲಿ ಎಡ ಮತ್ತು ಬಲ ಬದಿಗಳಿವೆ. ನಮ್ಮ ಯೋಚನೆಯ ವಿಧಾನವು ಮೆದುಳಿನ ಯಾವ ಗೋಳಾರ್ಧವು ಪ್ರಬಲವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಹೊಸ ಆಪ್ಟಿಕಲ್ ಇಲ್ಯೂಶನ್ ಚಿತ್ರವು ಮೆದುಳಿನ ಯಾವ ಭಾಗವು ಪ್ರಬಲವಾಗಿದೆ ಎಂಬುದನ್ನು ಬಹಿರಂಗಪಡಿಸಲು ಮತ್ತು ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

Optical Illusion: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಹೇಳಬಹುದು
ಇದರಲ್ಲಿ ನೀವು ಮೊದಲು ಗುರುತಿಸುವುದೇನು?
Follow us
TV9 Web
| Updated By: shivaprasad.hs

Updated on:Apr 28, 2022 | 2:30 PM

ಆಪ್ಟಿಕಲ್ ಇಲ್ಯೂಶನ್ (Optical Illusion) ಚಿತ್ರಗಳು ಸದ್ಯ ಲ್ಲರ ಗಮನಸೆಳೆಯುತ್ತಿವೆ. ಇವು ಕೇವಲ ಜನರ ಮನಗೆಲ್ಲುತ್ತಿರುವುದಲ್ಲದೇ ಚಿಂತನೆಗೂ ಹಚ್ಚುತ್ತವೆ. ಅವುಗಳಿಂದ ನಮ್ಮ ವ್ಯಕ್ತಿತ್ವವನ್ನೂ ಕಂಡುಹಿಡಿಯಬಹುದು. ಇತ್ತೀಚೆಗೆ ಮತ್ತೊಂದು ಆಪ್ಟಿಕಲ್ ಚಿತ್ರವೊಂದು ವೈರಲ್ ಆಗಿದೆ. ಇದರ ವಿಶೇಷವೆಂದರೆ ನಮ್ಮ ಮೆದುಳಿನಲ್ಲಿ ಯಾವ ಭಾಗ ಪ್ರಬಲವಾಗಿದೆ ಎಂದು ಗುರುತಿಸಬಹುದು. ಇದರಿಂದ ನಮ್ಮ ಯೋಚನೆ ಹೇಗಿದೆ ಎಂದು ತಿಳಿಯಬಹುದು. ಮೆದುಳಿನಲ್ಲಿ ಎಡ ಮತ್ತು ಬಲ ಬದಿಗಳಿವೆ. ನಮ್ಮ ಯೋಚನೆಯ ವಿಧಾನವು ಮೆದುಳಿನ ಯಾವ ಗೋಳಾರ್ಧವು ಪ್ರಬಲವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಹೊಸ ಆಪ್ಟಿಕಲ್ ಇಲ್ಯೂಶನ್ ಚಿತ್ರವು ಮೆದುಳಿನ ಯಾವ ಭಾಗವು ಪ್ರಬಲವಾಗಿದೆ ಎಂಬುದನ್ನು ಬಹಿರಂಗಪಡಿಸಲು ಮತ್ತು ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ಈ ಚಿತ್ರವನ್ನು ನೋಡಿದಾಗ ನಿಮಗೆ ಮೊದಲು ಕಾಣಿಸುವುದೇನು? ಕೋತಿ ಅಥವಾ ಹುಲಿ- ಎರಡರಲ್ಲಿ ಯಾವುದನ್ನು ಮೊದಲು ನೀವು ಗುರುತಿಸುತ್ತೀರಿ?

ನೀವು ಮೊದಲು ಹುಲಿಯನ್ನು ಗುರುತಿಸಿದರೆ:

The animal you see first reveals which side of your brain is dominant

ನೀವು ಮೊದಲು ಹುಲಿಯ ತಲೆಯನ್ನು ಗುರುತಿಸಿದರೆ, ಮೆದುಳಿನ ಎಡ ಗೋಳಾರ್ಧವು ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ‘ಬ್ರೈಟ್​ಸೈಡ್’ ತನ್ನ ವರದಿಯಲ್ಲಿ ತಿಳಿಸಿದೆ. ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ? ಇಲ್ಲಿದೆ ನೋಡಿ.

‘ನೀವು ವಿಶ್ಲೇಷಣಾತ್ಮಕ ವ್ಯಕ್ತಿ, ಗುರಿಯನ್ನು ಆಧರಿಸಿ ಕೆಲಸ ಮಾಡುತ್ತೀರಿ. ಸಮಸ್ಯೆಯನ್ನು ಎದುರಿಸಿದಾಗ ನೀವು ತಾರ್ಕಿಕ, ಲೆಕ್ಕಾಚಾರ ಮತ್ತು ವಸ್ತುನಿಷ್ಠವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳುತ್ತೀರಿ’. ನೀವು ಸಾಕಷ್ಟು ಯೋಚಿಸಿದ ನಂತರ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ನಿಮಗೆ ಅನ್ನಿಸಿರುತ್ತದೆ. ಅದಾಗ್ಯೂ ನೀವು ಇತರರ ಸಲಹೆಗಳನ್ನು ಗೌರವಿಸಿ, ಪರಿಗಣಿಸಬೇಕು ಎಂದಿದೆ ವರದಿ.

ನಿಮ್ಮ ವ್ಯಕ್ತಿತ್ವದ ಲಕ್ಷಣಗಳು:

  • ಮಾಡಬೇಕಾದ ಪಟ್ಟಿಯಲ್ಲಿರುವಂತೆ ನೀವು ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತೀರಿ.
  • ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ಭಾವನೆಗಳು ನಿಮಗೆ ಅಡ್ಡಿಯಾಗುವುದಿಲ್ಲ.
  • ನೀವು ಗಣಿತ, ವಿಜ್ಞಾನ ಮೊದಲಾದ ಕ್ಷೇತ್ರದಲ್ಲಿ ಪರಿಣತಿ ಹೊಂದಿರುತ್ತೀರಿ.
  • ನಿಮ್ಮ ಗುರಿಗಳು ವಾಸ್ತವಿಕವಾಗಿರುತ್ತವೆ ಮತ್ತು ಸಾಧಿಸಬಹುದಾದವು ಎಂದು ನಿಮಗೆ ತಿಳಿದಿರುತ್ತದೆ.
  • ನೀವು ಸ್ಪಷ್ಟ ಗುರಿಗಳನ್ನು ಹೊಂದಿರುತ್ತೀರಿ. ಅವುಗಳನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಮಾರ್ಗದ ಬಗ್ಗೆಯೂ ನಿಮಗೆ ಸ್ಪಷ್ಟ ಅರಿವಿರುತ್ತದೆ.

ನೀವು ಮೊದಲು ನೇತಾಡುವ ಮಂಗವನ್ನು ನೋಡಿದರೆ:

The animal you see first reveals which side of your brain is dominant (1)

ನೀವು ನೇತಾಡುತ್ತಿರುವ ನಿಮ್ಮ ಮೆದುಳಿನ ಬಲ ಗೋಳಾರ್ಧವು ಹೆಚ್ಚು ಸಕ್ರಿಯವಾಗಿರುತ್ತದೆ ಎಂದಿದೆ ‘ಬರೈಟ್​ಸೈಡ್ ವರದಿ’. ನೀವು ಹೊಸ ಆಲೋಚನೆಗಳನ್ನು ಹೊಂದಿರುವ ಸೃಜನಶೀಲ ವ್ಯಕ್ತಿ. ಸಮಸ್ಯೆಯನ್ನು ಎದುರಿಸಿದಾಗ ನೀವು ವಿಮರ್ಶಾತ್ಮಕವಾಗಿ ಯೋಚಿಸುವುದಕ್ಕಿಂತ ನಿಮ್ಮ ಮನಸ್ಸಿನ ಮಾತುಗಳನ್ನು ಕೇಳುತ್ತೀರಿ. ಇದು ಬಹಳಷ್ಟು ಬಾರಿ ಸರಿಯಾಗಿರದೆಯೂ ಇರಬಹುದು. ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ನಿಮಗೆ ಅನುಭವದ ಪಾಠ. ನೀವು ಏನನ್ನು ಕಳೆದುಕೊಂಡರೂ ಅದು ಗುರಿಯೆಡೆಗೆ ಸಾಗುವ ಒಂದು ಹೆಜ್ಜೆ ಎಂದು ನೀವು ಪರಿಗಣಿಸುತ್ತೀರಿ. ನೀವು ಹೆಚ್ಚಾಗಿ ನಿಮ್ಮದೇ ಕನಸುಗಳಲ್ಲಿ ಕಳೆದುಹೋಗುತ್ತೀರಿ. ಹೀಗಾಗಿ ವಾಸ್ತವ ಪ್ರಪಂಚದ ಬಗ್ಗೆಯೂ ಸ್ವಲ್ಪ ಗಮನದಿಂದಿರಿ.

ನಿಮ್ಮ ವ್ಯಕ್ತಿತ್ವದ ಲಕ್ಷಣಗಳು:

  • ನೀವು ಸ್ವಯಂಪ್ರೇರಿತರಾಗಿ ಕೆಲಸಗಳನ್ನು ಮಾಡುತ್ತೀರಿ. ‘ಔಟ್ ಆಫ್ ದಿ ಬಾಕ್ಸ್’ ಯೋಚನೆಗಳನ್ನು ಚಿಂತಿಸುವ, ಅನುಷ್ಠಾನಗೊಳಿಸುವ ಪ್ರವೃತ್ತಿ ನಿಮ್ಮದು.
  • ನೀವು ಅನೇಕ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ನೀವು ಆಲೋಚಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ ಮತ್ತು ಭಾವನೆಗಳ ಆಧಾರದ ಮೇಲೆ ನಿರ್ಣಯ ಕೈಗೊಳ್ಳುತ್ತೀರಿ.
  • ನೀವು ಸಂಗೀತ, ಕಲೆಗಳು ಮತ್ತು ಇತರ ಸೃಜನಾತ್ಮಕ ವಿಭಾಗಗಳಲ್ಲಿ ಪರಿಣತಿ ಹೊಂದಿದ್ದೀರಿ.
  • ನೀವು ಗುರಿಗಳಿಗಿಂತ ಹೆಚ್ಚಾಗಿ ಜೀವನಕ್ಕಾಗಿ ಕನಸುಗಳನ್ನು ಹೊಂದಿದ್ದೀರಿ. ಆ ಕನಸುಗಳನ್ನು ಸಾಧಿಸಲು ನೀವು ಪ್ರಯತ್ನಿಸುತ್ತೀರಿ.
  • ಮೆದುಳು ಒಂದೇ ಭಾಗದ ಆಧಾರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ನಿಮಗೆ ಒಂದು ಭಾಗದ ಲಕ್ಷಣಗಳು ಹೆಚ್ಚಾಗಿ ಹೊಂದಿಕೆಯಾಗಬಹುದು. ಆದರೆ ಮತ್ತೊಂದರ ಲಕ್ಷಣಗಳನ್ನೂ ಹೊಂದಿರುತ್ತೀರಿ. ಇದಕ್ಕೆ ಕಾರಣ, ಮೆದುಳಿನ ಎರಡೂ ಭಾಗಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವುದು. ನೀವು ಮೊದಲು ಗುರುತಿಸಿದ ಚಿತ್ರ ಯಾವುದು? ನಿಮಗೆ ಈ ಲಕ್ಷಣಗಳು ಹೊಂದಿಯಾಯಿತೇ?

ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ

Published On - 12:55 pm, Thu, 28 April 22

ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ