ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ

ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ
ಪ್ರಶಸ್ತಿ ಗೆದ್ದ ಫೋಟೋ

ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು.

TV9kannada Web Team

| Edited By: Lakshmi Hegde

Apr 28, 2022 | 5:11 PM

ಈ ಬಾರಿಯ (2022ನೇ ಸಾಲಿನ) ಪ್ರತಿಷ್ಠಿತ ಪಿಂಕ್ ಲೇಡಿ ಇಂಟರ್​ನ್ಯಾಶನಲ್​ ಫುಡ್​ ಫೋಟೋ ಸ್ಪರ್ಧೆಯಲ್ಲಿ ಭಾರತದ ಛಾಯಾಗ್ರಾಹಕಿ ದೇಬ್​ದತ್ತಾ ಚಕ್ರವರ್ತಿ ಗೆದ್ದಿದ್ದಾರೆ. ದೇಬದತ್ತಾ ಅವರು ಕಾಶ್ಮೀರದಲ್ಲಿ ತೆಗೆದ ಕಬಾಬ್​ ತಯಾರಕನ ಫೋಟೋಕ್ಕೆ ಈ ಬಾರಿ ಪ್ರಶಸ್ತಿ ಬಂದಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಖಯ್ಯಮ್​ ಚೌಕ್​​ನಲ್ಲಿ, ರಸ್ತೆಬದಿಯ ಕಬಾಬ್​ ವ್ಯಾಪಾರಿಯೊಬ್ಬನ ಫೋಟೋ ಇದು. ವ್ಯಾಪಾರಿ ಕಬಾಬ್​ ತಯಾರಿಸುತ್ತಿದ್ದರೆ, ದಟ್ಟವಾದ ಹೊಗೆ ಆತನ ಸುತ್ತಲೂ ಹರಡಿದೆ. ವ್ಯಾಪಾರಿಯ ಮುಖ- ಕಬಾಬ್​ ಕಾಣಿಸುತ್ತಿದೆ. ಅದೊಂತರ ಮೋಡಗಳ ಮಧ್ಯೆ ಕುಳಿತು ಕಬಾಬ್​ ತಯಾರಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಫೋಟೋಕ್ಕೆ ಕೆಬಾಬಿಯಾನಾ ಎಂದು ಹೆಸರು ದೇಬದತ್ತಾ ಹೆಸರು ಕೊಟ್ಟಿದ್ದಾರೆ.  

ಪಿಂಕಿ ಲೇಡಿ ಫುಡ್​ ಫೋಟೋಗ್ರಾಫರ್​ ಆಫ್​ ದಿ ಇಯರ್​​ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾರ ಕ್ಯಾರೋಲಿನ್ ಕೆನ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿ ಗೆದ್ದ ಫೋಟೋ ಅತ್ಯಂತ ಸುಂದರವಾಗಿ ಸೆರೆ ಹಿಡಿಯಲ್ಪಟ್ಟಿದೆ. ಕಬಾಬ್​ ತಯಾರಕನ ಮುಖದಲ್ಲಿ ತಾನು ತಯಾರಿಸುತ್ತಿರುವ ಆಹಾರವನ್ನು ಹಂಚಿಕೊಳ್ಳುವ ಭಾವವಿದೆ. ಆತನನ್ನು ಹೊಗೆ ಆಲಿಂಗಿಸಿದೆ ಮತ್ತು ಸಿದ್ಧವಾದ ಆಹಾರದಿಂದ ಬಂಗಾರದ ಬಣ್ಣದ ಬೆಳಕು ಬರುತ್ತಿದೆ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲ, ಕಬಾಬ್​​ ಹುರಿಯುವಾಗ ಅದರ ಕಿಡಿಗಳು ಹಾರುತ್ತಿವೆ. ಆ ಕಿಡಿಗಳ ಮೂಲಕವೇ ನಾವದರ ಸುವಾಸನೆಯನ್ನು ಆಘ್ರಾಣಿಸಬಹುದು ಎನ್ನಿಸುತ್ತದೆ. ಈ ಫೋಟೋ ತುಂಬ ಸೌಮ್ಯ ಸ್ವರೂಪವನ್ನು ಹೊಂದಿದ್ದರೂ, ನಮ್ಮ ಆತ್ಮಕ್ಕೆ ಅತ್ಯಂತ ಆಳವಾಗಿ ತಲುಪುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೇ, ಈ ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು. ಈ ಬಾರಿಯೂ ಸಹ ಸುಮಾರು 60 ದೇಶಗಳಿಂದ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಈ ಸ್ಪರ್ಧೆಗೆ ಕಳಿಸಲಾಗಿತ್ತು. ವಿವಿಧ ವಿಭಾಗಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಈ ಕಾರ್ಯಕ್ರಮವನ್ನು ಪಿಂಕ್​ ಲೇಡಿ ಫೋಟೋಗ್ರಾಫರ್​ ಯೂಟ್ಯೂಬ್​​ನಲ್ಲಿ ಲೈವ್​ ಆಗಿ ಪ್ರಸಾರ ಮಾಡಲಾಗಿದೆ. ಜಡ್ಜ್​ ಆಗಿ ಭಾಗವಹಿಸಿದ್ದ ರೆಸ್ಟೋರೆಂಟ್​​ವೊಂದರ ಮಾಲೀಕರಾದ ಮೋನಿಕಾ ಗ್ಯಾಲೆಟ್ಟಿ ಪ್ರಶಸ್ತಿ ಗೆದ್ದವರ ಹೆಸರನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಅಜಯ್​ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?

Follow us on

Most Read Stories

Click on your DTH Provider to Add TV9 Kannada