AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಡಿಶಾದ ಉರಿ ಬಿಸಿಲಿಂದ ಕಾರಿನ ಬಾನೆಟ್ ಮೇಲೇ ಚಪಾತಿ ಬೇಯಿಸಬಹುದು!; ವಿಡಿಯೋ ವೈರಲ್

Odisha Heatwave: ಒಡಿಶಾ ಕೂಡ ಉರಿ ಬಿಸಿಲಿನಿಂದ ತತ್ತರಿಸಿದೆ. ಇಲ್ಲಿನ ಬಿಸಿ ಎಷ್ಟರಮಟ್ಟಿಗೆ ಇದೆ ಎಂದರೆ ಒಲೆ ಇಲ್ಲದೆಯೂ ಅಡುಗೆ ಮಾಡಬಹುದು!

Viral Video: ಒಡಿಶಾದ ಉರಿ ಬಿಸಿಲಿಂದ ಕಾರಿನ ಬಾನೆಟ್ ಮೇಲೇ ಚಪಾತಿ ಬೇಯಿಸಬಹುದು!; ವಿಡಿಯೋ ವೈರಲ್
ಕಾರಿನ ಬಾನೆಟ್ ಮೇಲೆ ಚಪಾತಿ ಮಾಡಿದ ಮಹಿಳೆ
TV9 Web
| Edited By: |

Updated on:Apr 27, 2022 | 6:14 PM

Share

ಒಡಿಶಾ: ಭಾರತದ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ (Heatwave) ಹೆಚ್ಚಾಗಿದೆ. ಅದಕ್ಕೆ ಒಡಿಶಾ ಕೂಡ ಹೊರತಾಗಿಲ್ಲ. ಭಾರತವು ತೀವ್ರ ಶಾಖದ ಅಲೆಯಲ್ಲಿ ತತ್ತರಿಸುತ್ತಿದ್ದು, ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಒಡಿಶಾ (Odisha) ಕೂಡ ಉರಿ ಬಿಸಿಲಿನಿಂದ ತತ್ತರಿಸಿದೆ. ಇಲ್ಲಿನ ಬಿಸಿ ಎಷ್ಟರಮಟ್ಟಿಗೆ ಇದೆ ಎಂದರೆ ಒಲೆ ಇಲ್ಲದೆಯೂ ಅಡುಗೆ ಮಾಡಬಹುದು! ಇದೇ ವಿಷಯವನ್ನು ಹೈಲೈಟ್ ಮಾಡಲು ಒಡಿಶಾದ ಸೋನೆಪುರ್‌ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್‌ನಲ್ಲಿ ಚಪಾತಿ ಬೇಯಿಸುತ್ತಿರುವ ವಿಡಿಯೋ ಭಾರೀ ವೈರಲ್ (Viral Video) ಆಗಿದೆ. ಮಹಿಳೆಯೊಬ್ಬರು ಒಡಿಶಾದಲ್ಲಿ 40 ಡಿಗ್ರಿ ತಾಪಮಾನದಲ್ಲಿ ಕಾರಿನ ಬಾನೆಟ್ ಮೇಲೆ ಚಪಾತಿ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ನಮ್ಮೂರಾದ ಸೋನೆಪುರದ ದೃಶ್ಯಗಳು. ಇಲ್ಲಿ ಹೀಟ್ ವೇವ್ ಜಾಸ್ತಿಯಾಗಿದ್ದು, ವಾತಾವರಣ ತುಂಬಾ ಬಿಸಿಯಾಗಿರುತ್ತದೆ. ಇಲ್ಲಿನ ಬಿಸಿಲಿಗೆ ಕಾರ್ ಬಾನೆಟ್‌ನಲ್ಲಿ ರೊಟ್ಟಿ ಮಾಡಬಹುದು ಎಣದು ಅವರು ಬರೆದಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮಣಿಪುರದ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್, “ಭಾರತಕ್ಕೆ ಅಭಿನಂದನೆಗಳು! ಕೊನೆಗೂ ನಾವು ಕಾರ್ ಬಾನೆಟ್ ಮೇಲೆ ರೊಟ್ಟಿ ಮಾಡುವಂತಾಯಿತು” ಎಂದು ಟ್ವೀಟ್ ಮಾಡಿದ್ದಾರೆ.

ಒಡಿಶಾ ರಾಜ್ಯದಲ್ಲಿ ತೀವ್ರ ಬಿಸಿಗಾಳಿ ಉಂಟಾಗಿದ್ದು, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಮುಂದಿನ 4 ದಿನಗಳ ಕಾಲ ಒಡಿಶಾದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ವಾಯುವ್ಯ-ಪಶ್ಚಿಮ ಒಣ ಗಾಳಿಯಿಂದಾಗಿ ಮುಂದಿನ ಮೂರು ದಿನಗಳಲ್ಲಿ ಒಡಿಶಾದ ಹಲವು ಸ್ಥಳಗಳಲ್ಲಿ ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಾದ್ಯಂತ ಚಾಲ್ತಿಯಲ್ಲಿರುವ ಶಾಖದ ಅಲೆಗಳ ಹಿನ್ನೆಲೆಯಲ್ಲಿ ಒಡಿಶಾದ ಎಲ್ಲಾ ಶಾಲೆಗಳು ಏಪ್ರಿಲ್ 30ರವರೆಗೆ ಬಂದ್ ಆಗಲಿವೆ. ಆದರೆ, ಒಡಿಶಾ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮತ್ತು ಕೌನ್ಸಿಲ್ ಆಫ್ ಹೈಯರ್ ಎಜುಕೇಶನ್ ಈಗಾಗಲೇ ನಿಗದಿಪಡಿಸಿದ ಪರೀಕ್ಷೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಇದನ್ನೂ ಓದಿ: Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!

Viral Video: ಆ್ಯಂಬುಲೆನ್ಸ್​ ಶುಲ್ಕ ಭರಿಸಲಾಗದೆ 90 ಕಿ.ಮೀ ಬೈಕ್​ನಲ್ಲೇ ಮಗನ ಶವವನ್ನು ಹೊತ್ತೊಯ್ದ ತಂದೆ!

Published On - 5:55 pm, Wed, 27 April 22