Optical Illusion: ಈ ಚಿತ್ರ ನೋಡಿದಾಗ ಮೊದಲು ಕಂಡಿದ್ದೇನು?-ನಿಮ್ಮ ಲವ್​ ಲೈಫ್​ ಬಗ್ಗೆ ಹೇಳುವ ಫೋಟೋ ಇದು !

ಇಂದು ನಾವಿಲ್ಲಿ ಕೊಟ್ಟಿರುವ ಆಪ್ಟಿಕಲ್​ ಇಲ್ಯೂಷನ್​ ಫೋಟೋ ನಿಮ್ಮ  ಜೀವನದಲ್ಲಿ ಪ್ರೀತಿ-ಪ್ರೇಮ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ನೀವು ಈ ಫೋಟೋವನೊಮ್ಮೆ ನೋಡಿ, ಮೊದಲೇನು ಕಾಣುತ್ತದೆ? ಹಾಗೆ ನಿಮಗೆ ಮೊದಲು ಕಾಣಿಸಿದ ಚಿತ್ರದ ಅರ್ಥವೇನು ಎಂಬುದನ್ನು ತಿಳಿಯಲು ಈ ವಿವರಣೆ ಓದಿ..

Optical Illusion: ಈ ಚಿತ್ರ ನೋಡಿದಾಗ ಮೊದಲು ಕಂಡಿದ್ದೇನು?-ನಿಮ್ಮ ಲವ್​ ಲೈಫ್​ ಬಗ್ಗೆ ಹೇಳುವ ಫೋಟೋ ಇದು !
ದೃಷ್ಟಿ ಭ್ರಮೆಯ ಫೋಟೋ
Follow us
TV9 Web
| Updated By: Lakshmi Hegde

Updated on:Apr 26, 2022 | 11:47 AM

ಆಪ್ಟಿಕಲ್​ ಇಲ್ಯೂಷನ್ (Optical Illusion)​ ಅಥವಾ ದೃಷ್ಟಿ ಭ್ರಮೆ ಉಂಟು ಮಾಡುವ ಅದೆಷ್ಟೋ ಚಿತ್ರಗಳು ಆಗಾಗ  ಸಿಗುತ್ತವೆ. ಇಂಥ ಫೋಟೋಗಳು ನಮ್ಮ ಕಣ್ಣುಗಳಿಗೆ ಸವಾಲು. ಈ ಫೋಟೋಗಳಲ್ಲಿ ನೀವು ನೋಡಿದ್ದಷ್ಟೇ ಇರುವುದಿಲ್ಲ, ಅದರಾಚೆಗೂ ಅನೇಕ ಸಂಗತಿಗಳು ಇರುತ್ತವೆ. ನೋಡಿದ ತಕ್ಷಣ ನೀವು ಏನೋ ಗುರುತಿಸುತ್ತೀರಿ, ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಇನ್ನೂ ಒಂದಷ್ಟು ಚಿತ್ರಗಳು ಇರುವುದು ಗೊತ್ತಾಗುತ್ತದೆ. ಈ ದೃಷ್ಟಿ ಭ್ರಮೆ ಚಿತ್ರಗಳು ಈಗಿನಿದಲ್ಲ. ಶತಮಾನಗಳಷ್ಟು ಹಳೆಯದು. ಇದೊಂಥರ ಪಝಲ್​ ಇದ್ದ ಹಾಗೆ. ಇನ್ನೊಂದು ವಿಷಯವೆಂದರೆ ಇಂಥ ದೃಷ್ಟಿ ಭ್ರಮೆ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ ಎಂಬ ನಂಬಿಕೆಯಿದೆ. ಅಂದರೆ ಒಂದು ಆಪ್ಟಿಕಲ್​ ಇಲ್ಯೂಷನ್​ ಫೋಟೋವನ್ನು ನೀವು ನೋಡಿದಾಗ, ಅಲ್ಲಿ ಮೊದಲೇನು ಗೋಚರಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ಮನಸ್ಥಿತಿ ಎಂಥದ್ದು ಎಂಬುದನ್ನು ಹೇಳಬಹುದಂತೆ !. ಹಾಗೇ ಇಂದು ನಾವಿಲ್ಲಿ ಕೊಟ್ಟಿರುವ ಆಪ್ಟಿಕಲ್​ ಇಲ್ಯೂಷನ್​ ಫೋಟೋ ನಿಮ್ಮ  ಜೀವನದಲ್ಲಿ ಪ್ರೀತಿ-ಪ್ರೇಮ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ನೀವು ಈ ಫೋಟೋವನೊಮ್ಮೆ ನೋಡಿ, ಮೊದಲೇನು ಕಾಣುತ್ತದೆ? ಹಾಗೆ ನಿಮಗೆ ಮೊದಲು ಕಾಣಿಸಿದ ಚಿತ್ರದ ಅರ್ಥವೇನು ಎಂಬುದನ್ನು ತಿಳಿಯಲು ಈ ವಿವರಣೆ ಓದಿ.. ಅಂದಹಾಗೇ ನೀವು ಮಹಿಳೆಯೋ? ಪುರುಷನೋ ಎಂಬುದರ ಆಧಾರದ ಮೇಲೆ ಈ ಚಿತ್ರದ ವಿವರವನ್ನು ಅರ್ಥೈಸಿಕೊಳ್ಳಿ.

1. ಪುರುಷನನ್ನು ನೋಡಿದರೆ

ನೀವು ಮಹಿಳೆಯಾಗಿದ್ದು, ಚಿತ್ರದಲ್ಲಿ ಮೊದಲು ಪುರುಷನನ್ನು ನೊಡಿದರೆ, ನೀವು ಒಬ್ಬ ರೊಮ್ಯಾಂಟಿಕ್​ ಸಂಗಾತಿಗಾಗಿ ಹುಡುಕುತ್ತಿದ್ದೀರಿ ಎಂದರ್ಥವಂತೆ. ಅಷ್ಟೇ ಅಲ್ಲ, ನಿಮ್ಮಲ್ಲಿ ಲೈಂಗಿಕ ಕಾಮನೆ ಅಧಿಕವಾಗಿದೆ ಎಂಬುದನ್ನು ಸೂಚಿಸುತ್ತದೆ. ಒಂದೊಮ್ಮೆ ನೀವು ಈಗಾಗಲೇ ಯಾರೊಂದಿಗಾದರೂ ಡೇಟಿಂಗ್​ ನಡೆಸುತ್ತಿದ್ದರೆ, ಸಂಗಾತಿಯನ್ನು ಹೊಂದಿದವರೇ ಆಗಿದ್ದರೆ, ನಿಮ್ಮಿಬ್ಬರ ಸಂಬಂಧ ಉತ್ಕಟವಾಗಿದೆ. ಆಳವಾಗಿ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದೀರಿ ಮತ್ತು ನಿಮ್ಮ ರಿಲೇಶನ್​ಶಿಪ್​ನಲ್ಲಿ ಎಲ್ಲವೂ ಸರಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ನೆನಪಿಡಿ, ಇದು ಈ ಆಪ್ಟಿಕಲ್​ ಇಲ್ಯೂಷನ್​ ಚಿತ್ರವನ್ನು ನೋಡಿದವರು ಮಹಿಳೆಯಾಗಿದ್ದು, ಚಿತ್ರದಲ್ಲಿ ಮೊದಲು ಪುರುಷನನ್ನ ನೋಡಿದವರಿಗೆ ಮಾತ್ರ ಅನ್ವಯ.

2. ಮಹಿಳೆಯನ್ನು ನೋಡಿದರೆ

ಇದು ಪುರುಷರಿಗೆ ಅನ್ವಯ. ಒಬ್ಬ ಪುರುಷ ಈ ಚಿತ್ರವನ್ನು ನೋಡಿ ಮೊದಲು ಮಹಿಳೆಯನ್ನು ಗಮನಿಸಿದರೆ, ಆತ ಒಬ್ಬ ಅತ್ಯುತ್ತಮ ಸಂಗಾತಿಯನ್ನು ಬಯಸುತ್ತಿದ್ದಾರೆ ಎಂದರ್ಥ. ಈಗಾಗಲೇ ಸಂಗಾತಿ, ಪ್ರಿಯತಮೆಯನ್ನು ಹೊಂದಿರುವವರಾಗಿದ್ದರೆ ಅವರ ಸಂಬಂಧ ಗಟ್ಟಿಯಾಗಿದೆ ಎಂದು ಅರ್ಥೈಸಿಕೊಳ್ಳಬೇಕು.

3. ಪುರುಷನಾಗಿದ್ದು ಪುರುಷನನ್ನು ನೋಡಿದರೆ

ನೀವು ಪುರುಷನಾಗಿದ್ದು, ಈ ಫೋಟೊವನ್ನು ನೋಡಿದ ತಕ್ಷಣ ಅದರಲ್ಲಿರುವ ಪುರುಷನನ್ನೇ ಮೊದಲು ಗಮನಿಸಿದರೆ, ನೀವು ನಿಮ್ಮ ಇತರ ಸ್ನೇಹಿತರ ಜತೆಗಿನ ಸಂಬಂಧದ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವ ಅಗತ್ಯವಿದೆ ಎಂದು ಅರ್ಥೈಸಿಕೊಳ್ಳಬೇಕು.

4. ಮಹಿಳೆಯಾಗಿದ್ದು, ಮಹಿಳೆಯನ್ನೇ ನೋಡಿದರೆ

ಹಾಗೇ ಮಹಿಳೆಯರು ಈ ಆಪ್ಟಿಕಲ್​ ಇಲ್ಯೂಷನ್​ ಚಿತ್ರ ನೋಡಿ, ಅದರಲ್ಲಿರುವ ಮಹಿಳೆಯನ್ನೇ ಮೊದಲು ಗುರುತಿಸಿದರೂ ಅದಕ್ಕೊಂದು ಅರ್ಥವಿದೆ.  ನಿಮಗೆ ನಿಮ್ಮ ತ್ವಚೆ, ಸೌಂದರ್ಯದ ಬಗ್ಗೆ ಆತ್ಮವಿಶ್ವಾಸವಿದೆ. ಇತರರನ್ನು ಆಕರ್ಷಿಸುವ ಧನಾತ್ಮಕ ಶಕ್ತಿಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Viral Optical illusion: ನೀವು ಸಂತೋಷವಾಗಿದ್ದೀರಾ ಅಥವಾ ದುಃಖದಲ್ಲಿದ್ದೀರಾ ಎಂಬುದನ್ನು ತಿಳಿಸುತ್ತಂತೆ ಈ ಆಪ್ಟಿಕಲ್ ಚಿತ್ರ

Published On - 11:47 am, Tue, 26 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ