Video: ನೀವು ಹಳದಿ ಆಮೆಯನ್ನು ನೋಡಿದ್ದೀರಾ? ಒಡಿಶಾದಲ್ಲಿ ಪತ್ತೆಯಾದ ಈ ಅಪರೂಪದ ಆಮೆ ಸಖತ್ ಕ್ಯೂಟ್ !
ಅಂದಹಾಗೇ, ಓಡಿಶಾದ ಬಾಲಾಸೋರ್ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು.
ಆಮೆ ಎಂದ ತಕ್ಷಣ ಅದು ನಿಧಾನವಾಗಿ ನಡೆಯುತ್ತದೆ ಎಂಬುದೇ ಮನಸಿಗೆ ಬರುತ್ತದೆ. ಸಾಮನ್ಯವಾಗಿ ಇವು ಮಣ್ಣಿನ ಬಣ್ಣ ಅಥವಾ ಪಾಚಿ ಬಣ್ಣದಲ್ಲಿ ಇರುತ್ತವೆ. ಅದರಲ್ಲೇ ಪುಟ್ಟ ಆಮೆಗಳಿಂದ, ದೊಡ್ಡ ಗಾತ್ರದ ಆಮೆಗಳವರೆಗೆ ಪ್ರಬೇಧಗಳು ಇವೆ. ಆದರೆ ಓಡಿಶಾದ ಸಿಮುಲಿಯಾ ಎಂಬ ಹಳ್ಳಿಯಲ್ಲಿ ಅತಿ ಅಪರೂಪವಾದ ಹಳದಿ ಬಣ್ಣದ ಆಮೆ ಪತ್ತೆಯಾಗಿದ್ದು, ಅದನ್ನೀಗ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಅಂದಹಾಗೆ, ಈ ಹಳದಿ ಬಣ್ಣದ ಆಮೆಗಳು ನೋಡಲು ಕ್ಯೂಟ್ ಆಗಿದ್ದು, ಪೂರ್ತಿ ಮೈ ಹಳದಿಯಾಗಿಯೇ ಇರುತ್ತದೆ. ಮತ್ತು ಅಪರೂಪದಲ್ಲೇ, ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ.
ಸಿಮುಲಿಯಾ ಹಳ್ಳಿಯಲ್ಲಿ ಪತ್ತೆಯಾದ ಆಮೆಯ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಸ್ಥಳೀಯರು ಒಂದು ಟಬ್ನಲ್ಲಿ ನೀರು ಹಾಕಿ ಅದರಲ್ಲಿಟ್ಟು ರಕ್ಷಿಸಿದ್ದರು. ಹಳದಿ ಆಮೆ ಪತ್ತೆಯಾಗಿದ್ದೇ ಆಗಿದ್ದು, ಅದನ್ನು ನೋಡಲು ನೂರಾರು ಜನರು ಮುಗಿಬಿದ್ದಿದ್ದರು. ಒಡಿಶಾದ ಬಾಲಾಸೋರ್ನಲ್ಲಿರುವ ಸೋರೋ ಎಂಬ ಪ್ರದೇಶದಲ್ಲಿ ಕೊಳವೊಂದು ಇದೆ. ಆ ಕೊಳದಲ್ಲಿ ಮೊದಲು ಈ ಆಮೆ ಕಾಣಿಸಿಕೊಂಡಿತ್ತು. ಆದರೆ ಅಲ್ಲಿ ಹಾಗೇ ಇದ್ದರೆ ಅದಕ್ಕೆ ಅಪಾಯವಾಗಹಬಹುದು ಎಂದು, ಸ್ಥಳೀಯರು ಹಿಡಿದು ಟಬ್ನಲ್ಲಿ ಇಟ್ಟುಕೊಂಡು, ಅರಣ್ಯ ಇಲಾಖೆ ಅಧಿಕಾರಿಗಳು ಬರುವವರೆಗೂ ಕಾದಿದ್ದಾರೆ.
Unique Yellow Turtle rescued from a pond in Soro area of Balasore District in Odisha
#NatureBeauty #Yellow #turtle @aajtak @IndiaToday pic.twitter.com/uRTOTPuCSx
— Mohammad Suffian (@iamsuffian) April 26, 2022
ಅಂದಹಾಗೇ, ಓಡಿಶಾದ ಬಾಲಾಸೋರ್ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು. ಬಸುದೇವ್ ಮಹಾಪಾತ್ರಾ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಳದಿ ಆಮೆಯನ್ನು ನೋಡಿ ಅಚ್ಚರಿಗೊಂಡು ಅದನ್ನು ಮನೆಗೆ ತಂದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಟ್ಟಿದ್ದರು. ಅದಾದ ಮೇಲೆ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದಾಗಿ ಐಎಫ್ಎಸ್ ಅಧಿಕಾರಿ ದೇಬಾಶಿಶ್ ಶರ್ಮಾ ಫೋಟೋ ಹಂಚಿಕೊಂಡಿದ್ದರು. ಅಂದಹಾಗೇ, ಈ ಹಳದಿ ಆಮೆಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಭಾರತ, ನೇಪಾಳ ಮತ್ತು ಮಯನ್ಮಾರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಆಮೆಗಳಲ್ಲಿ ಟೈರೋಸಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ಉಂಟಾಗುವ ಬಣ್ಣ ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವ ಬಾಲಕಿ; ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಫುಲ್ ಫಿದಾ
Published On - 4:48 pm, Tue, 26 April 22