ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ

ಈ ಇಗೋ ಇಂದ ನಾವು ನಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಜೀವನದಲ್ಲಿ ಯಾರೇ ತಪ್ಪು ಮಾಡಿದರೆ ಅವರನ್ನು ನಾವು ಕ್ಷಮಿಸಿದರೆ ನಾವು ಏನನ್ನು ಕಳೆದುಕೊಳ್ಳುವುದಿಲ್ಲ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 31, 2022 | 7:42 AM

ನಾವು ಒಬ್ಬರನ್ನ ಕ್ಷಮಿಸುವುದಿಂದ ಅಥವಾ ಸಾರಿ (Sorry) ಕೇಳುವುದರಿಂದ ದೊಡ್ಡ ವ್ಯಕ್ತಿಗಳಾಗುತ್ತವೆ. ಮನುಷ್ಯ ಎಂದ ಮೇಲೆ ಆತ ಸಾಕಷ್ಟು ತಪ್ಪುಗಳನ್ನು ಮಾಡುತ್ತಾನೆ. ಆದರೆ ಆ ಮಾಡಿದ ತಪ್ಪಿಗೆ ನಾವು ಎಷ್ಟು ಜನ ಸಾರಿ ಕೇಳುತ್ತಿವೆ? ಕೆಲವು ಸಲ ನಮಗೆ ಇಗೋ ಹರ್ಟ್ ಆಗುತ್ತೆ. ಇಂದಿನ ಜೀವನ ಶೈಲಿಯಲ್ಲಿ ಎಷ್ಟೊಂದು ಸಂಬಂಧಗಳು ಕೊನೆಗೊಳುತ್ತಿದ್ದಾವೆ ಅಂದರೆ ಅದಕ್ಕೆ ಇಗೋ ಕಾರಣ. ಈ ಇಗೋ ಇಂದ ನಾವು ನಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಜೀವನದಲ್ಲಿ ಯಾರೇ ತಪ್ಪು ಮಾಡಿದರೆ ಅವರನ್ನು ನಾವು ಕ್ಷಮಿಸಿದರೆ ನಾವು ಏನನ್ನು ಕಳೆದುಕೊಳ್ಳುವುದಿಲ್ಲ. ಕ್ಷಮೆ ಯಾವಾಗಲ್ಲೂ ನಮ್ಮ ಒಳ್ಳೆದಕ್ಕೆ ಹೊರೆತು ಅವರಿಗಲ್ಲ ಎನ್ನುವ ವಿಷಯ ನೆನಪಿಡಿ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ;

ಇನ್ಫ್ರಾ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸೋದು ಹೇಗೆ..! ಇಲ್ಲಿದೆ ಮಾಹಿತಿ

Horoscope Today- ದಿನ ಭವಿಷ್ಯ; ವೃಷಭ ರಾಶಿಯವರು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿಗಲಿದೆ

Follow us on

Click on your DTH Provider to Add TV9 Kannada