Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬಾಲಿವುಡ್ ಹೀರೋ, ನಾನು ಎಂದಿಗೂ ರೀಜನಲ್​ ಸಿನಿಮಾ ಮಾಡಲ್ಲ ಎಂದ ಜಾನ್​ ಅಬ್ರಾಹಂ

ಜಾನ್​ ಅಬ್ರಾಹಂ ನಟನೆಯ ‘ಅಟ್ಯಾಕ್​’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಈ ಚಿತ್ರ ಆ್ಯಕ್ಷನ್​ನಿಂದ ಕೂಡಿದೆ ಎಂಬುದಕ್ಕೆ ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಸಾಕ್ಷ್ಯ ಒದಗಿಸಿತ್ತು. ಸದ್ಯ, ಸಿನಿಮಾ ಪ್ರಚಾರ ಕಾರ್ಯದಲ್ಲಿ ಜಾನ್ ಬ್ಯುಸಿ ಆಗಿದ್ದಾರೆ.

ನಾನು ಬಾಲಿವುಡ್ ಹೀರೋ, ನಾನು ಎಂದಿಗೂ ರೀಜನಲ್​ ಸಿನಿಮಾ ಮಾಡಲ್ಲ ಎಂದ ಜಾನ್​ ಅಬ್ರಾಹಂ
ಜಾನ್ ಅಬ್ರಾಹಂ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 31, 2022 | 6:00 AM

ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್​ನಲ್ಲಿ (Bollywood) ಸದ್ದು ಮಾಡುತ್ತಿವೆ, ಬಾಲಿವುಡ್​ ಮಂಕಾಗಿದೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಕೆಲ ಬಾಲಿವುಡ್​ ಹೀರೋಗಳಿಗೆ ಅಭದ್ರತೆ ಕಾಡುತ್ತಿದೆ ಎನ್ನುವ ಮಾತೂ ಕೇಳಿ ಬಂದಿದೆ. ಈ ಮಧ್ಯೆ ಸಲ್ಮಾನ್​ ಖಾನ್ (Salman Khan)​ ಸೇರಿ ಕೆಲವು ಬಾಲಿವುಡ್​ ಹೀರೋಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಟ ಜಾನ್​ ಅಬ್ರಾಹಂ (John Abraham) ಮಾತನಾಡಿದ್ದಾರೆ. ಅವರಿಗೆ ತಾವು ಬಾಲಿವುಡ್​ ಹೀರೋ ಎನ್ನುವ ಹೆಮ್ಮೆ ಇದೆ. ಅಲ್ಲದೆ, ಅವರು ಎಂದಿಗೂ ತೆಲುಗು ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಜಾನ್​ ಅಬ್ರಾಹಂ ನಟನೆಯ ‘ಅಟ್ಯಾಕ್​’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಏಪ್ರಿಲ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರ ಆ್ಯಕ್ಷನ್​ನಿಂದ ಕೂಡಿದೆ ಎಂಬುದಕ್ಕೆ ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಸಾಕ್ಷ್ಯ ಒದಗಿಸಿತ್ತು. ಸದ್ಯ, ಸಿನಿಮಾ ಪ್ರಚಾರ ಕಾರ್ಯದಲ್ಲಿ ಜಾನ್ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

‘ನನಗೆ ರಾಜಮೌಳಿ ಬಗ್ಗೆ ಗೌರವ ಇದೆ. ಅದೇ ರೀತಿ ನಾವು ಏನು ಮಾಡಿದ್ದೇವೆ ಎನ್ನುವ ಬಗ್ಗೆ ಎಲ್ಲಕ್ಕಿಂತ ಹೆಚ್ಚಿನ ಗೌರವ ಇದೆ. ಖಂಡಿತವಾಗಿಯೂ ನಾವು ಎರಡನೇ ಸ್ಥಾನದಲ್ಲಿ ಇಲ್ಲ. ನಾನು ಎಂದಿಗೂ ಪ್ರಾದೇಶಿಕ ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್​ ಹೀರೋ. ನಾನು ಅಲ್ಲಿ ನಟಿಸಬೇಕು ಎನ್ನುವ ಕಾರಣಕ್ಕೆ ಸೆಕೆಂಡ್ ಹೀರೋ ಆಗಿ ಹೋಗುವುದಿಲ್ಲ. ಇತರ ನಟರಂತೆ ತೆಲುಗು ಅಥವಾ ಯಾವುದೇ ರೀಜನಲ್​ ಸಿನಿಮಾ ಮಾಡೋಕೇ ಹೋಗಲ್ಲ’ ಎಂದಿದ್ದಾರೆ ಅವರು. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುವಾಗ ಈ ಮಾತನ್ನು ಹೇಳಿದ್ದಾರೆ.

‘ದಿ ಕಾಶ್ಮೀರ್​ ಫಿಲ್ಮ್ಸ್​’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಹಿಟ್ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಜಾನ್​ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸೋಕೆ ಅವರು ನಿರಾಕರಿಸಿದ್ದಾರೆ. ‘ನಾನು ಸಿನಿಮಾ ನೋಡಿಲ್ಲ. ನಾನು ನನ್ನ ಸಿನಿಮಾ ಬಗ್ಗೆ ಮಾತ್ರ ಉತ್ತರಿಸುತ್ತೇನೆ. ನಿಮ್ಮ ಎಡಿಟರ್​ ಕಾಂಟ್ರವರ್ಸಿ ತರೋಕೆ ಹೇಳಿರುತ್ತಾರೆ. ಅದಕ್ಕಾಗಿ ನೀವು ಇಲ್ಲಿ ಬಂದು ಕಾಶ್ಮೀರ್​ ಫೈಲ್ಸ್​ ಬಗ್ಗೆ ಕೇಳುತ್ತಿದ್ದೀರಿ. ನಾನು ಅದಕ್ಕೆ ಏಕೆ ಉತ್ತರಿಸಲಿ’ ಎಂದು ಮರುಪ್ರಶ್ನೆ ಹಾಕಿದ್ದಾರೆ ಅವರು.

ಇದನ್ನೂ ಓದಿ: ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್