‘ನನಗೆ ಹುಚ್ಚುನಾಯಿ ಕಚ್ಚಿಲ್ಲ’; ಒಂದೇ ಪ್ರಶ್ನೆಗೆ ಪಿತ್ತ ನೆತ್ತಿಗೇರಿಸಿಕೊಂಡ ರಣಬೀರ್​ ಕಪೂರ್

ರಣಬೀರ್ ಕಪೂರ್ ಈ ಮೊದಲು ಕತ್ರಿನಾ ಕೈಫ್​, ದೀಪಿಕಾ ಪಡುಕೋಣೆ ಜತೆ ಡೇಟಿಂಗ್ ನಡೆಸಿದ್ದರು. ಈ ಎರಡೂ ಸಂಬಂಧಗಳು ಮದುವೆ ವರೆಗೆ ಬಂದಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ಆಲಿಯಾ ಭಟ್.

‘ನನಗೆ ಹುಚ್ಚುನಾಯಿ ಕಚ್ಚಿಲ್ಲ’; ಒಂದೇ ಪ್ರಶ್ನೆಗೆ ಪಿತ್ತ ನೆತ್ತಿಗೇರಿಸಿಕೊಂಡ ರಣಬೀರ್​ ಕಪೂರ್
ರನಬೀರ್ ಕಪೂರ್
TV9kannada Web Team

| Edited By: Rajesh Duggumane

Mar 30, 2022 | 5:09 PM

ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ಪ್ರೀತಿಯಲ್ಲಿದ್ದು ಹಲವು ವರ್ಷಗಳೇ ಕಳೆದಿವೆ. ಈ ಜೋಡಿ ಉಳಿದ ಸೆಲೆಬ್ರಿಟಿಗಳಂತೆ ಅಲ್ಲ. ಅವರು ಪ್ರೀತಿ-ಪ್ರೇಮದ ಬಗ್ಗೆ ಮುಚ್ಚುಮರೆ ಮಾಡುತ್ತಿಲ್ಲ. ಈ ವಿಚಾರವನ್ನು ಓಪನ್​ ಆಗಿಯೇ ಹೇಳಿಕೊಳ್ಳುತ್ತಾರೆ. ಒಟ್ಟಾಗಿ ಅನೇಕ ಕಡೆಗಳಲ್ಲಿ ಸುತ್ತಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರ ವಿವಾಹದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಯಾವಾಗ ಮದುವೆ ಆಗುತ್ತೀರಿ ಎನ್ನುವ ಪ್ರಶ್ನೆಯನ್ನು ಪದೇಪದೇ ಈ ಜೋಡಿಗೆ ಕೇಳಲಾಗುತ್ತಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi) ಪ್ರಚಾರದ ಸಂದರ್ಭದಲ್ಲಿ ಈ ಪ್ರಶ್ನೆಗೆ ಉತ್ತರಿಸೋಕೆ ಆಲಿಯಾ (Alia Bhatt) ನಿರಾಕರಿಸಿದ್ದರು. ಪದೇಪದೇ ಇದನ್ನೇ ಕೇಳುತ್ತಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದರು. ಈ ಬಾರಿ ನಟ ರಣಬೀರ್ ಕಪೂರ್​ ಅವರ ಸರದಿ.

ರಣಬೀರ್ ಕಪೂರ್ ಈ ಮೊದಲು ಕತ್ರಿನಾ ಕೈಫ್​, ದೀಪಿಕಾ ಪಡುಕೋಣೆ ಜತೆ ಡೇಟಿಂಗ್ ನಡೆಸಿದ್ದರು. ಈ ಎರಡೂ ಸಂಬಂಧಗಳು ಮದುವೆ ವರೆಗೆ ಬಂದಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ಆಲಿಯಾ ಭಟ್. ಇವರು ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್​ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿದೆ. ವಿಶೇಷ ಎಂದರೆ, ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತು. ಹೀಗಿರುವಾಗಲೇ ಇಬ್ಬರೂ ಜತೆಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದೆ. ಈಗ ಈ ಪ್ರೀತಿ ಮದುವೆ ವರೆಗೆ ಬಂದು ನಿಂತಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಜೋಡಿ 2020ರಲ್ಲೇ ಮದುವೆ ಆಗಬೇಕಿತ್ತು. ಆದರೆ, ಆಗ ಕೊವಿಡ್​ ಕಾಣಿಸಿಕೊಂಡಿತು. ಆ ಬಳಿಕ ರಣಬೀರ್​ ತಂದೆ ರಿಷಿ ಕಪೂರ್ ನಿಧನ ಹೊಂದಿದರು. ಇದರಿಂದ ರಣಬೀರ್​-ಆಲಿಯಾ ಮದುವೆ ವಿಳಂಬವಾಯಿತು. ಈಗ ಇಬ್ಬರೂ ಮದುವೆ ಆಗುವ ದಿನಾಂಕ ಹತ್ತಿರವಾಗಿದೆ. ಈ ಬಗ್ಗೆ ಎನ್​ಡಿಟಿವಿ ಅವರು ರಣಬೀರ್​ಗೆ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ರಣಬೀರ್ ಸಿಟ್ಟಾಗಿದ್ದಾರೆ.

ರಣಬೀರ್​ ಅವರ ಎದುರು ‘ನಿಮ್ಮ ಮದುವೆ ಯಾವಾಗ’ ಎಂದು ಕೇಳಲಾಯಿತು. ಈ ಪ್ರಶ್ನೆಯಿಂದ ಅವರು ಅಸಮಾಧಾನಗೊಂಡಂತೆ ಕಂಡರು. ‘ನನ್ನ ಮದುವೆ ಯಾವಾಗ? ಎಲ್ಲಿ ನಡೆಯಲಿದೆ? ಎಂಬ ಮಾಹಿತಿಯನ್ನು ಮಾಧ್ಯಮದವರಿಗೆ ನೀಡಲು ನನಗೆ ಹುಚ್ಚು ನಾಯಿ ಕಚ್ಚಿಲ್ಲ’ ಎಂದರು. ಇದಾದ ನಂತರ ಸ್ವಲ್ಪ ಶಾಂತರಾದ ಅವರು ‘ಶೀಘ್ರದಲ್ಲೇ ಮದುವೆ ಆಗುತ್ತೇವೆ’ ಎಂದಷ್ಟೇ ಹೇಳಿ ಹೊರಟರು.

ಆಲಿಯಾ ಹಾಗೂ ರಣಬೀರ್​ ಅವರನ್ನು ಅಭಿಮಾನಿಗಳು ಕ್ಯೂಟ್ ಕಪಲ್​ ಎಂದೇ ಕರೆಯುತ್ತಾರೆ. ‘ರಣಬೀರ್ ಕೆಲವರಿಗೆ ಮೋಸ ಮಾಡಿದ್ದಾರೆ. ಆಲಿಯಾಗೆ ಅವರು ಸ್ಯೂಟ್​ ಆಗುವುದಿಲ್ಲ’ ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಈ ಬಗ್ಗೆ ಈ ಜೋಡಿ ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: 3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್​ ಬಾಬು ಬದಲಿಗೆ ರಣಬೀರ್ ಕಪೂರ್​?

Alia Bhatt: ಗೆಳೆಯ ರಣಬೀರ್ ಕಪೂರ್ ‘ಸೂಪರ್ ಪವರ್’ ಏನು? ಗುಟ್ಟು ಬಿಟ್ಟುಕೊಟ್ಟ ಆಲಿಯಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada