AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​​ಗೆ ಮರಳಿ ಬರುತ್ತಿದೆ ‘ಐಮ್ಯಾಕ್ಸ್’, ‘ವಾರಣಾಸಿ’ಯೇ ಕಾರಣ

IMAX screen: ಹಾಲಿವುಡ್​​ನ ಪರಮೋಚ್ಛ ನಿರ್ದೇಶಕರುಗಳು ನಿರ್ದಿಷ್ಟವಾಗಿ ಐಮ್ಯಾಕ್ಸ್ ಸ್ಕ್ರೀನ್​​ಗಳಿಗೆಂದೇ ಸಿನಿಮಾ ಮಾಡುತ್ತಾರೆ. ಇದೀಗ ರಾಜಮೌಳಿ ಸಹ ಐಮ್ಯಾಕ್ಸ್​ ಸ್ಕ್ರೀನ್​​ನ ಅನುಪಾತದಲ್ಲಿಯೇ ‘ವಾರಣಾಸಿ’ ಸಿನಿಮಾ ಮಾಡಿದ್ದಾರೆ. ಆದರೆ ಅದನ್ನು ಪ್ರದರ್ಶಿಸಲು ತೆಲುಗು ರಾಜ್ಯಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳು ಇರಲಿಲ್ಲ. ಇದೀಗ ಮೊದಲ ಬಾರಿಗೆ ಹೈದರಾಬಾದ್​​ಗೆ ಐಮ್ಯಾಕ್ಸ್ ಸ್ಕ್ರೀನ್ ಬರುತ್ತಿದೆ.

ಹೈದರಾಬಾದ್​​ಗೆ ಮರಳಿ ಬರುತ್ತಿದೆ ‘ಐಮ್ಯಾಕ್ಸ್’, ‘ವಾರಣಾಸಿ’ಯೇ ಕಾರಣ
Imax Varanasi
ಮಂಜುನಾಥ ಸಿ.
|

Updated on: Jun 02, 2026 | 2:09 PM

Share

ಐಮ್ಯಾಕ್ಸ್, ವಿಶ್ವದ ಅತ್ಯುತ್ತಮ ಸಿನಿಮಾ ಸ್ಕ್ರೀನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕೃತ ಐಮ್ಯಾಕ್ಸ್ (IMAX) ಸ್ಕ್ರೀನ್​​ನಲ್ಲಿ ಸಿನಿಮಾ ನೋಡಿದರಷ್ಟೆ ನಿಜವಾದ ಸಿನಿಮಾ ಅನುಭವ ಪಡೆದಂತೆ ಎಂಬ ನಂಬಿಕೆ ಇದೆ. ಹಾಲಿವುಡ್​​ನ ಪರಮೋಚ್ಛ ನಿರ್ದೇಶಕರುಗಳು ನಿರ್ದಿಷ್ಟವಾಗಿ ಐಮ್ಯಾಕ್ಸ್ ಸ್ಕ್ರೀನ್​​ಗಳಿಗೆಂದೇ ಸಿನಿಮಾ ಮಾಡುತ್ತಾರೆ. ಇದೀಗ ರಾಜಮೌಳಿ ಸಹ ಐಮ್ಯಾಕ್ಸ್​ ಸ್ಕ್ರೀನ್​​ನ ಅನುಪಾತದಲ್ಲಿಯೇ ‘ವಾರಣಾಸಿ’ (Varanasi) ಸಿನಿಮಾ ಮಾಡಿದ್ದಾರೆ. ಆದರೆ ಅದನ್ನು ಪ್ರದರ್ಶಿಸಲು ತೆಲುಗು ರಾಜ್ಯಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳು ಇರಲಿಲ್ಲ. ಇದೀಗ ಮೊದಲ ಬಾರಿಗೆ ಹೈದರಾಬಾದ್​​ಗೆ ಐಮ್ಯಾಕ್ಸ್ ಸ್ಕ್ರೀನ್ ಬರುತ್ತಿದೆ.

ಐಮ್ಯಾಕ್ಸ್ ಕಾರ್ಪೊರೇಷನ್ ಭಾರತದಲ್ಲಿ ಮೂರು ಹೊಸ ‘ಐಮ್ಯಾಕ್ಸ್ ವಿತ್ ಲೇಸರ್’ (IMAX with Laser) ಚಿತ್ರಮಂದಿರಗಳನ್ನು ತೆರೆಯುವ ಯೋಜನೆಗಳನ್ನು ಘೋಷಿಸಿವೆ. ಇವುಗಳಲ್ಲಿ ಎರಡು ಹೈದರಾಬಾದ್‌ನಲ್ಲಿ ಸ್ಥಾಪನೆಗೊಳ್ಳಲಿವೆ. ಮಹೇಶ್ ಬಾಬು ಮತ್ತು ಏಷಿಯನ್ ಸುನಿಲ್ ನಾರಂಗ್ ಜಂಟಿ ಒಡೆತನದ ಎಎಂಬಿ ಸಿನೆಮಾಸ್ ಹೈದರಾಬಾದ್​​ನ ಮೊದಲ ಅಧಿಕೃತ ಐಮ್ಯಾಕ್ಸ್ ಸ್ಕ್ರೀನ್ ಅನ್ನು ಹೊಂದಲಿದೆ. ಎಎಂಬಿ ಕ್ಲಾಸಿಕ್ ಸುದರ್ಶನ್​​ನಲ್ಲಿ ಹೈದರಾಬಾದ್​​ನ ಮೊದಲ ಐಮ್ಯಾಕ್ಸ್ ಅಸೆಂಬಲ್ ಆಗಲಿದೆ.

ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳ ಸಂಖ್ಯೆ ಹೆಚ್ಚಾಗಬೇಕು ಎಂದಿದ್ದರು. ಅದರ ಬೆನ್ನಲ್ಲೆ ಇದೀಗ ಹೈದರಾಬಾದ್​​ಗೆ ಐಮ್ಯಾಕ್ಸ್ ಬರುತ್ತಿದೆ. ‘ವಾರಣಾಸಿ’ ಸಿನಿಮಾದ ನಾಯಕ ಮಹೇಶ್ ಬಾಬು ಅವರ ಒತ್ತಾಸೆಯಿಂದ ಇದು ಸಾಧ್ಯವಾಗಿದೆ ಎನ್ನಲಾಗುತ್ತಿದೆ. 2026 ರ ಅಂತ್ಯದ ವೇಳೆಗೆ ಹೈದರಾಬಾದ್‌ನ ‘ಎಎಂಬಿ ಕ್ಲಾಸಿಕ್’ನಲ್ಲಿ ಐಮ್ಯಾಕ್ಸ್ ಸ್ಥಾಪನೆ ಆಗಲಿದೆ. ಉಳಿದ ಎರಡು ಸ್ಕ್ರೀನ್​​ಗಳನ್ನು 2028 ಕ್ಕೆ ಯೋಜಿಸಲಾಗಿದೆ.

ಇದನ್ನೂ ಓದಿ:‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಐಮ್ಯಾಕ್ಸ್ ಸಿಇಒ ರಿಚ್ ಗಿಲ್ಫಾಂಡ್ ಕೂಡ ಭಾರತದಲ್ಲಿ ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ (ದೊಡ್ಡ ಪರದೆ) ಅನುಭವಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ‘2025 ನೇ ವರ್ಷವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಮಗೆ ಇದುವರೆಗಿನ ಅತ್ಯುತ್ತಮ ವರ್ಷವಾಗಿತ್ತು ಹಾಲಿವುಡ್ ಮತ್ತು ಭಾರತೀಯ ಚಲನಚಿತ್ರಗಳು ಅದ್ಭುತ ಪ್ರದರ್ಶನ ನೀಡಿವೆ. ಭಾರತದಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿರುವ ಪ್ರದರ್ಶನ ಪಾಲುದಾರರಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತಿದೆ’ ಎಂದು ಗಿಲ್ಫಾಂಡ್ ಹೇಳಿದ್ದಾರೆ.

2015 ರಲ್ಲಿ ಹೈದರಾಬಾದ್​​ನ ಏಕೈಕ ಐಮ್ಯಾಕ್ಸ್ ಥಿಯೇಟರ್ ಪ್ರಸಾದ್ಸ್ ಐಮ್ಯಾಕ್ಸ್ ಮುಚ್ಚಲ್ಪಟ್ಟಿತ್ತು, ಅದಾದ ಬಳಿಕ ಹೈದರಾಬಾದ್​​ನಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳು ಇರಲೇ ಇಲ್ಲ. ಇದೀಗ 10 ವರ್ಷಗಳ ಬಳಿಕ ಹೊಸ ಮತ್ತು ಆಧುನಿಕ ತಂತ್ರಜ್ಞಾನದ ಐಮ್ಯಾಕ್ಸ್ ಸ್ಕ್ರೀನ್​​ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು