ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?

ಜಾನ್​ಗೆ ಕಾಜು ಕಟ್ಲಿ ಸ್ವೀಟ್ ಎಂದರೆ ಪಂಚಪ್ರಾಣ. ಇದನ್ನು ಅವರು ಕೊನೆಯದಾಗಿ ತಿಂದಿದ್ದು 27 ವರ್ಷಗಳ ಹಿಂದೆ! ಈ ವಿಚಾರವನ್ನು ಅವರು ಈ ಶೋನಲ್ಲಿ ಹೇಳಿಕೊಂಡಿದ್ದಾರೆ.

ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?
ಜಾನ್​ ಅಬ್ರಾಹಂ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 20, 2022 | 6:32 PM

ಸಿಹಿಯನ್ನು ಕಂಡರೆ ದ್ವೇಷ ಮಾಡುವವರು ತುಂಬಾನೇ ಕಡಿಮೆ. ಹುಡುಕಿದರೆ ಅಲ್ಲೊಬ್ಬರು ಇಲ್ಲೊಬ್ಬರು ಸಿಗಬಹುದು. ಅಚ್ಚರಿ ಎಂದರೆ ಜಾನ್​ ಅಬ್ರಾಹಂ (John Abraham) ಅವರು ಸಿಹಿಯನ್ನು ಸಿಗರೇಟ್​ಗಿಂತಲೂ ಹೆಚ್ಚು ದ್ವೇಷ ಮಾಡುತ್ತಾರೆ. ಕಳೆದ 27 ವರ್ಷಗಳಿಂದ ಅವರು ತಮ್ಮ ನೆಚ್ಚಿನ ಸ್ವೀಟ್​ಅನ್ನು ನಾಲಿಗೆಗೂ ಟಚ್​ ಮಾಡಿಲ್ಲ. ಕೋಲ್ಡ್​ ಡ್ರಿಂಕ್ಸ್​ (Cold Drinks) ಎಂದರೆ ಅವರು ತುಂಬಾನೇ ದ್ವೇಷ ಮಾಡುತ್ತಾರೆ. ಹಾಗಾದರೆ, ಜಾನ್ ಅವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದೇಕೆ? ಸ್ವೀಟ್​ ಕಂಡರೆ ಅವರು ದೂರ ಓಡೋದು ಏಕೆ? ಈ ಪ್ರಶ್ನೆಗೆ ಉತ್ತರವನ್ನು ಜಾನ್​ ಅಬ್ರಾಹಂ ಅವರೇ ಹೇಳಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ‘ಶೇಪ್ ಆಫ್​ ಯು’ ಕಾರ್ಯಕ್ರಮದಲ್ಲಿ ಜಾನ್​ ಅಬ್ರಾಹಂ ಮಾತನಾಡಿದ್ದಾರೆ. ಶಿಲ್ಪಾ ಶೆಟ್ಟಿ ಮೊದಲಿನಿಂದಲೂ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನ್​ ಅಬ್ರಾಹಂ ಕೂಡ ಫಿಟ್​ನೆಸ್​ ಫ್ರೀಕ್​. ಈ ಕಾರಣಕ್ಕೆ ಶಿಲ್ಪಾ ಶೆಟ್ಟಿ ಶೋನಲ್ಲಿ ಜಾನ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಜಾನ್​ ಬಿಚ್ಚಿಟ್ಟ ಮಾಹಿತಿ ಅನೇಕರಿಗೆ ಅಚ್ಚರಿ ತಂದಿದೆ.

ಜಾನ್​ಗೆ ಕಾಜು ಕಟ್ಲಿ ಸ್ವೀಟ್ ಎಂದರೆ ಪಂಚಪ್ರಾಣ. ಇದನ್ನು ಅವರು ಕೊನೆಯದಾಗಿ ತಿಂದಿದ್ದು 27 ವರ್ಷಗಳ ಹಿಂದೆ! ಈ ವಿಚಾರವನ್ನು ಅವರು ಈ ಶೋನಲ್ಲಿ ಹೇಳಿಕೊಂಡಿದ್ದಾರೆ. ‘ನಾನು 27 ವರ್ಷಗಳಿಂದ ನನ್ನ ಫೇವರಿಟ್​ ಕಾಜು ಸ್ವೀಟ್​ ತಿಂದಿದ್ದೆ. ನಾನು ಯಾವುದೇ ಕೋಲ್ಡ್​ ಡ್ರಿಂಕ್ಸ್ ಕುಡಿದಿಲ್ಲ, ಕುಡಿಯುವುದೂ ಇಲ್ಲ. ನೀವು (ಶಿಲ್ಪಾ) ಇದೇ ಡಯಟ್ ಫಾಲೋ ಮಾಡುತ್ತೀರಿ ಎಂದು ನಾನು ಅಂದುಕೊಂಡಿದ್ದೇನೆ. ಸಿಹಿ ಅನ್ನೋದು ವಿಶ್ವದ ಅತಿ ದೊಡ್ಡ ವಿಷ. ಸಿಗರೇಟ್​ಗಿಂತಲೂ ಇದು ಅಪಾಯ’ ಎಂದಿದ್ದಾರೆ ಜಾನ್​.

ಕೆಲಸ ಮಾಡುವವರು ವರ್ಷಕ್ಕೆ ಒಂದಷ್ಟು ದಿನ ಬ್ರೇಕ್ ತೆಗೆದುಕೊಂಡು ಹೊರಗೆ ಸುತ್ತಾಟ ನಡೆಸುತ್ತಾರೆ. ಆದರೆ, ಜಾನ್​ ಅಬ್ರಾಹಂಗೆ ತಾವು ಮಾಡೋ ಕೆಲಸದ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಕಳೆದ 17-18 ವರ್ಷಗಳಲ್ಲಿ ಅವರು ಬ್ರೇಕ್​ ಎಂದು ಪಡೆದಿದ್ದು ಕೇವಲ ಮೂರು ದಿನ! ಈ ವಿಚಾರವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್​ ಅಚ್ಚರಿ ಹೊರಹಾಕಿದ್ದಾರೆ.

‘ಏಕ್​ ವಿಲನ್​ ರಿಟರ್ನ್​​’ನಲ್ಲಿ ಜಾನ್​ ಅಬ್ರಾಹಂ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಶಾರುಖ್​ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾದಲ್ಲಿ ಜಾನ್​ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್​ ರಿಲೀಸ್ ಆಗಿತ್ತು. ಇದಲ್ಲದೆ ಇನ್ನೂ ಹಲವು ಪ್ರಾಜೆಕ್ಟ್​ಗಳಲ್ಲಿ ನಟಿಸುತ್ತಿದ್ದಾರೆ ಅವರು.

ಇದನ್ನೂ ಓದಿ: ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ

ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ