Chethana Raj: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ

Chethana Raj: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ
ಚೇತನಾ ರಾಜ್​

Chethana Raj Death: ಬೆಂಗಳೂರಿನಲ್ಲಿ ಕಿರುತೆರೆ ನಟಿ ಚೇತನಾ ರಾಜ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚೇತನಾಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ ಹಾಕುವಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದಾರೆ.

TV9kannada Web Team

| Edited By: shivaprasad.hs

May 18, 2022 | 10:16 PM

ಬೆಂಗಳೂರು: ಬೆಂಗಳೂರಿನಲ್ಲಿ ಕಿರುತೆರೆ ನಟಿ ಚೇತನಾ ರಾಜ್​ (Chethana Raj) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚೇತನಾಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ ಹಾಕುವಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದಾರೆ. ಈ ಮೊದಲು ‘ಶೆಟ್ಟಿ ಕಾಸ್ಮೆಟಿಕ್ ಸೆಂಟರ್​’ಗೆ ಜಿಲ್ಲಾ ಆರೋಗ್ಯ ಅಧಿಕಾರಿ ನೋಟಿಸ್ ನೀಡಿದ್ದರು. ‘‘ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಯನ್ನು ನಡೆಸಲು ಮಾತ್ರ ಪರವಾನಗಿ ನೀಡಲಾಗಿತ್ತು. ಅವರು ಮಾಡಿದ ಸರ್ಜರಿಗೆ ಪರವಾನಗಿ ಇರಲಿಲ್ಲ. ಈ ಸಂಬಂಧ ಘಟನೆಯ ಬಗ್ಗೆ ಲಿಖಿತ ವಿವರಣೆಯನ್ನು ಸಲ್ಲಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’’ ಎಂದು ಬೆಂಗಳೂರು ನಗರದ ಜಿಲ್ಲಾ ಆರೋಗ್ಯಾಧಿಕಾರಿ ಎಎನ್​ಐಗೆ ತಿಳಿಸಿದ್ದರು. ಇದೀಗ ಕಾಸ್ಮೆಟಿಕ್ ಕೇಂದ್ರಕ್ಕೆ ಬೀಗ ಹಾಕುವಂತೆ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ್ದ ಮಾಹಿತಿ:

ಇದನ್ನೂ ಓದಿ: ಫ್ಯಾಟ್​ ಸರ್ಜರಿಯಿಂದ ಅಪಾಯವಿದೆಯಾ?; ಯಾವೆಲ್ಲ ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿಗೆ ನಿಷೇಧ?

ಚೇತನಾ ರಾಜ್ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿರುವ ನಟಿಯ ತಂದೆ:

ಚೇತನಾ ಪರ ದೂರು ನೀಡಿರುವ ಅವರ ತಂದೆ ವರದರಾಜು, ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗಳು ಚೇತನಾ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಡಾ.ಸಾಹೇಬ್ ಗೌಡ ಶೆಟ್ಟಿ, ಡಾ.ಶೆಟ್ಟಿ ಕಾಸ್ಮಿಟಿಕ್ ಸೆಂಟರ್ ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಸಿಆರ್ ಪಿಸಿ 174(C) ಅಡಿ UDR (Unnatural Death Report) ದಾಖಲಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದು, ಆರೋಪ ಸಾಬೀತಾದಲ್ಲಿ ಐಪಿಎಸ್ ಸೆಕ್ಷನ್ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚೇತನಾ ಮೃತದೇಹ ಶ್ವಾಸಕೋಶ ಸೇರಿದಂತೆ ಕೆಲ ಅಂಗಾಂಗಗಳ ಮಾದರಿ ಸಂಗ್ರಹಿಸಲಾಗಿದ್ದು, ಅದರ ಮಾದರಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಬ್ಬಂದಿ ಎಫ್ಎಸ್​ಎಲ್​ಗೆ ರವಾನೆ ಮಾಡಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್​ಎಲ್ ರಿಪೋರ್ಟ್ ಈ ಪ್ರಕರಣದಲ್ಲಿ ಮಹತ್ವವಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಚೇತನಾ ಸಾವಿಗೆ ನಿಖರ ಕಾರಣವಾಗಿರುವ ಸಾಕ್ಷಿ ಲಭ್ಯವಾಗುವ ಸಾಧ್ಯತೆ ಇದೆ.

Fat ಸರ್ಜರಿ ಎಷ್ಟು ಅಪಾಯಕಾರಿ? | ಈ ಕುರಿತು ಮಾಹಿತಿ ನೀಡಿದ್ದಾರೆ ಡಾ.ಎಂ ರಮೇಶ್​:

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ 

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada