AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈವ್​ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ

ಸ್ನೇಹನ್ ಹಾಗೂ ಕನ್ನಿಕಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈವ್​ ಬರುತ್ತಾರೆ. ಇತ್ತೀಚೆಗೆ ಇಬ್ಬರೂ ಲೈವ್ ಬಂದಿದ್ದರು. ಈ ವೇಳೆ ಕನ್ನಿಕಾಗೆ ಕಿಸ್ ಮಾಡೋಕೆ ಹೋದರು ಸ್ನೇಹನ್.

ಲೈವ್​ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ
TV9 Web
| Edited By: |

Updated on: May 19, 2022 | 7:29 PM

Share

ತಮಿಳು ಚಿತ್ರರಂಗದಲ್ಲಿ ಸ್ನೇಹನ್ ಅವರು ಹೆಸರು ಮಾಡಿದ್ದಾರೆ. ಅವರು ಗೀತ ಸಾಹಿತಿ ಕೂಡ ಹೌದು. ತಮಿಳು ಬಿಗ್ ಬಾಸ್ ಶೋಗೆ (Bigg Boss) ತೆರಳುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಕನ್ನಿಕಾ ರವಿ ಅವರನ್ನು (Kannika Ravi) ಸ್ನೇಹನ್ 7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 29ರಂದು ಇಬ್ಬರೂ ವಿವಾಹ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಪತಿ ಮಾಡಿದ ಕೆಲಸಕ್ಕೆ ಕನ್ನಿಕಾ ಮುನಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್​ ಬಾಸ್​ಗೆ ಕಾಲಿಟ್ಟ ನಂತರದಲ್ಲಿ ಜನಪ್ರಿಯತೆ ಹೆಚ್ಚುತ್ತದೆ. ಸ್ನೇಹನ್ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಬಿಗ್ ಬಾಸ್ ಫಿನಾಲೆವರೆಗೆ ತೆರಳಿದ್ದರು. ಅವರು ಗೆಲ್ಲಬೇಕು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಈ ರಿಯಾಲಿಟಿ ಶೋನಿಂದ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಅವರನ್ನು ಗುರುತಿಸೋಕೆ ಆರಂಭಿಸಿದರು.

ಇದನ್ನೂ ಓದಿ
Image
ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ
Image
ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು?
Image
Chethana Raj: ಚೇತನಾ ರಾಜ್ ಸಾವು ಪ್ರಕರಣ;​ ಚಿನ್ನ ಅಡವಿಟ್ಟು ಸರ್ಜರಿಗೆ ಒಳಗಾಗಿದ್ದ ಯುವ ನಟಿ​

ಸ್ನೇಹನ್ ಹಾಗೂ ಕನ್ನಿಕಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈವ್​ ಬರುತ್ತಾರೆ. ಇತ್ತೀಚೆಗೆ ಇಬ್ಬರೂ ಲೈವ್ ಬಂದಿದ್ದರು. ಈ ವೇಳೆ ಕನ್ನಿಕಾ ಅವರು ತಾವು ಬಿಡಿಸಿದ ಹೊಸ ಪೇಂಟಿಂಗ್ ತೋರಿಸಿದ್ದಾರೆ. ಪೇಂಟಿಂಗ್ ಹೇಗಿದೆ ಎಂದು ಪತಿ ಬಳಿ ಕನ್ನಿಕಾ ಪ್ರಶ್ನೆ ಮಾಡಿದ್ದಾರೆ. ಸ್ನೇಹನ್ ಅವರು ಬಾಯ್ತುಂಬ ಈ ಪೇಂಟಿಂಗ್ ಹೊಗಳಿದ್ದಾರೆ.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ

ಈ ವೇಳೆ ಕನ್ನಿಕಾ ಕೆನ್ನೆಗೆ ಸ್ನೇಹನ್ ಕಿಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಿಕಾ ಕೊಂಚ ಹುಸಿಗೋಪ ಮಾಡಿಕೊಂಡರು. ಲೈವ್​ನಲ್ಲಿ ಕಿಸ್ ಮಾಡಿದ್ದು ಅವರಿಗೆ ಕೊಂಚವೂ ಇಷ್ಟ ಆಗಲಿಲ್ಲ. ‘ಈ ರೀತಿ ಕಿಸ್ ಮಾಡಿದರೆ ಹಿಂಬಾಲಕರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ’ ಎಂದರು ಅವರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಹೇಗಿದ್ದಾರೆ ನೋಡಿ ರಶ್ಮಿಕಾ ತಂಗಿ; ಇಲ್ಲಿದೆ ಮಂದಣ್ಣ ಫ್ಯಾಮಿಲಿಯ ಲೇಟೆಸ್ಟ್​ ಫೋಟೋ

ಸ್ನೇಹನ್ ಅವರು ‘ಬಿಗ್ ಬಾಸ್ ಅಲ್ಟಿಮೇಟ್​’ನಲ್ಲೂ ಕಾಣಿಸಿಕೊಂಡಿದ್ದರು. 42ನೇ ದಿನ ಬಿಗ್​ ಬಾಸ್​ ಮನೆಯಲ್ಲಿ ಇದ್ದ ಅವರು ಬಿಗ್ ಬಾಸ್​ನಿಂದ ಹೊರ ನಡೆದರು. ಅವರು ಕೆಲ ಸಿನಿಮಾಗೆ ಸಾಹಿತ್ಯ ಬರೆಯುವುದರಲ್ಲಿ ಬ್ಯುಸಿ ಇದ್ದಾರೆ. ಕನ್ನಿಕಾ ಅವರಿಗೆ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ಅವರು ಕೆಲ ವೆಬ್​ ಸೀರಿಸ್​ಗಳನ್ನು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ