AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ

ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಇಂದೇ ನೆರವೇರಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ
TV9 Web
| Edited By: |

Updated on:May 19, 2022 | 6:17 PM

Share

ನಟಿ ಸಂಜನಾ ಗಲ್ರಾನಿ ಅವರು (Sanjjanaa Galrani) ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ಬಗ್ಗೆ ಘೋಷಣೆ ಮಾಡಿದ್ದರು. ಅಲ್ಲದೆ, ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಅವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ (Nikki Galrani) ಮದುವೆ ಇಂದೇ ನೆರವೇರಿದೆ.

ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಸಂಜನಾ ಈ ಮೊದಲೇ ಹೇಳಿದ್ದರು. ಅವರು 7ನೇ ತಿಂಗಳಿಗೆ ಕಾಲಿಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮೂಲಕ ಪ್ರಶ್ನಿಸಿದ್ದರು. ‘ಪ್ರಾಯಶಃ ಮೇ ತಿಂಗಳ ಅಂತ್ಯದಲ್ಲಿ’ ಎಂದು ಸಂಜನಾ ಉತ್ತರ ನೀಡಿದ್ದರು. ಅಂತೆಯೇ ಮೇ ತಿಂಗಳ ಮುಗಿಯುವುದರೊಳಗೆ ಖುಷಿ ಸುದ್ದಿ ಸಿಕ್ಕಿದೆ.

ಇದನ್ನೂ ಓದಿ
Image
ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು?
Image
ತಲೆಕೂದಲು ದಾನ ಮಾಡಿದ ಸಂಜನಾ ಗಲ್ರಾನಿ; ಹೊಸ ಲುಕ್​ ನೋಡಿ ಅಚ್ಚರಿ ಹೊರಹಾಕಿದ ಫ್ಯಾನ್ಸ್
Image
ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ರೀಲ್ಸ್​ ವೈರಲ್​; ಮಗುವಿನ ಆಗಮನ ಯಾವಾಗ ಎಂದು ತಿಳಿಸಿದ ನಟಿ

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ

ತಮ್ಮ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ, ಯಾವುದಕ್ಕೂ ಅವರು ಅಂಜಿಲ್ಲ. ಎಷ್ಟೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಈಗ ಅವರ ಬಾಳಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ನಡೆಯುತ್ತಿವೆ. ಸಂಜನಾ ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಿಕ್ಕಿ ಗಲ್ರಾನಿ ವಿವಾಹ

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ  2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಈಗ ಖ್ಯಾತ ನಟ ಆದಿ ಪಿನಿಸೆಟ್ಟಿ ಜೊತೆಗೆ ಹೊಸ ಬಾಳು ಆರಂಭಿಸಿದ್ದಾರೆ. ಇಂದು ಅವರ ವಿವಾಹ ನೆರವೇರಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬಂದಿವೆ.

ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರು ಆಗಾಗ ಒಟ್ಟಾಗಿ ಸುತ್ತಾಡುತ್ತಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಮಾರ್ಚ್​ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಇಬ್ಬರೂ ಹಸೆಮಣೆ ಏರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:43 pm, Thu, 19 May 22