AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ರೀಲ್ಸ್​ ವೈರಲ್​; ಮಗುವಿನ ಆಗಮನ ಯಾವಾಗ ಎಂದು ತಿಳಿಸಿದ ನಟಿ

ಸಂಜನಾ ಗಲ್ರಾನಿ ಅವರು ತುಂಬು ಗರ್ಭಿಣಿ. ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ. ಅದಕ್ಕೆ ಸಂಜನಾ ಉತ್ತರ ನೀಡಿದ್ದಾರೆ.

ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ರೀಲ್ಸ್​ ವೈರಲ್​; ಮಗುವಿನ ಆಗಮನ ಯಾವಾಗ ಎಂದು ತಿಳಿಸಿದ ನಟಿ
ಸಂಜನಾ ಗಲ್ರಾನಿ ರೀಲ್ಸ್
TV9 Web
| Edited By: |

Updated on: Feb 24, 2022 | 12:38 PM

Share

ನಟಿ ಸಂಜನಾ ಗಲ್ರಾನಿ (Sanjjanaa Galrani) ಅವರು ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಕೆಲವು ವಾರಗಳ ಹಿಂದೆ ಸುದ್ದಿ ತಿಳಿದುಬಂದಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಸಂಜನಾ ಗಲ್ರಾನಿ ಅವರ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಶೇರ್​ ಮಾಡಿಕೊಂಡಿರುವ ಒಂದು ರೀಲ್ಸ್ (Sanjjanaa Galrani Reels)​ ವಿಡಿಯೋ ವೈರಲ್​ ಆಗಿದೆ. ಬೇಬಿ ಬಂಪ್​ ಕಾಣುವಂತೆ ಕ್ಯಾಮೆರಾಗೆ ಪೋಸ್​ ನೀಡಿರುವ ಅವರು, ಖುಷಿಯಿಂದ ಕಣ್ಣರಳಿಸಿದ್ದಾರೆ. ಸಂಜನಾ ಜೊತೆಗೆ ಅವರ ಯೋಗ ಟೀಚರ್​ ಕೂಡ ಇದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಂಜನಾಗೆ ಅಭಿನಂದನೆ ತಿಳಿಸಿದ್ದಾರೆ. ಹಲವು ಬಗೆಯ ಪ್ರಶ್ನೆಗಳನ್ನು ಕೂಡ ಜನರು ಕೇಳಿತ್ತಿದ್ದು, ಅವುಗಳಿಗೆ ಸಂಜನಾ ಉತ್ತರ ನೀಡಿದ್ದಾರೆ. ಪ್ರೆಗ್ನೆಂಟ್​ (Sanjjanaa Galrani Pregnant) ಆದ ಕಾರಣ ಸಿನಿಮಾ ಕೆಲಸಗಳಿಂದ ಅವರು ಬಿಡುವು ಪಡೆದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಫ್ಯಾನ್ಸ್​ ಜೊತೆ ಸಂಪರ್ಕದಲ್ಲಿ ಇದ್ದಾರೆ.

ಸಂಜನಾ ಗಲ್ರಾನಿ ಅವರು ತುಂಬು ಗರ್ಭಿಣಿ. ಅವರೀಗ 7ನೇ ತಿಂಗಳಿಗೆ ಕಾಲಿಟ್ಟಿದ್ದಾರೆ. ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ. ಪ್ರಾಯಶಃ ಮೇ ತಿಂಗಳ ಅಂತ್ಯದಲ್ಲಿ ಎಂದು ಸಂಜನಾ ಉತ್ತರ ನೀಡಿದ್ದಾರೆ. ಸಂಜನಾ ಅವರ ಉತ್ತಮ ಆರೋಗ್ಯಕ್ಕಾಗಿ ಅನೇಕ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಎಲ್ಲರಿಗೂ ಸಂಜನಾ ಧನ್ಯವಾದ ತಿಳಿಸಿದ್ದಾರೆ.

ನಟನೆ ಮಾತ್ರವಲ್ಲದೇ ಯೋಗದ ಬಗ್ಗೆಯೂ ಸಂಜನಾ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯೋಗ ತರಬೇತಿ ಕೇಂದ್ರದ ಮೂಲಕ ಅವರು ಅನೇಕರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಈಗ ಯೋಗ ಟೀಚರ್​ ಜೊತೆಗೆ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೆಗ್ನೆನ್ಸಿ ಸಮಯದಲ್ಲೂ ಅವರು ಯೋಗ ಕಡೆಗೆ ಗಮನ ಹರಿಸಿದ್ದಾರೆ.

ಬಹುಭಾಷೆಯಲ್ಲಿ ಸಂಜನಾ ಫೇಮಸ್​ ಆಗಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿರುವ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಕಿರುತೆರೆಯಲ್ಲೂ ಬಣ್ಣ ಹಚ್ಚಿದ ಅನುಭವ ಅವರಿಗೆ ಇದೆ. ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ಆ ಮೂಲಕ ಎಲ್ಲ ರಾಜ್ಯಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.

‘ಬಿಗ್​ ಬಾಸ್ ಕನ್ನಡ’​, ‘ಮುಜ್ಸೇ ಶಾದಿ ಕರೋಗೆ’ ರೀತಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಅವರು ಭಾಗವಹಿಸಿದ್ದಾರೆ. ಪ್ರತಿಷ್ಠಿತ ಆರ್ಕಾ ಮೀಡಿಯಾ ನಿರ್ಮಾಣದ ‘ಸ್ವರ್ಣ ಖಡ್ಗಂ’ ಧಾರಾವಾಹಿಯಲ್ಲಿ ಅವರು ರಾಣಿ ಪಾತ್ರ ಮಾಡಿದ್ದರು. ಕೆಲವು ವೆಬ್​ ಸೀರಿಸ್​ಗಳಲ್ಲಿ ನಟಿಸುವ ಮೂಲಕವೂ ಪ್ರೇಕ್ಷಕರನ್ನು ಸಂಜನಾ ರಂಜಿಸಿದ್ದಾರೆ. ಇದೆಲ್ಲದರ ನಡುವೆ ಅವರು ಕೆಲವು ವಿವಾದಗಳನ್ನು ಕೂಡ ಎದುರಿಸಿದ್ದಾರೆ. ಈಗ ಎಲ್ಲದರಿಂದ ಕೊಂಚ ರಿಲೀಫ್​ ಪಡೆದಿರುವ ಅವರು ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯ ಜತೆ ಶಿಲ್ಪಾ ಗಣೇಶ್​ ಫೋಟೋ ಟೈಮ್​; ಇಲ್ಲಿದೆ ಕ್ಯೂಟ್​ ಗ್ಯಾಲರಿ

ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು