‘ನಟ ಭಯಂಕರ’ ಪೋಸ್ಟರ್ ರಿಲೀಸ್ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ; ಕಾರಣ ವಿವರಿಸಿದ ಪ್ರಥಮ್
ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು.

‘ಬಿಗ್ ಬಾಸ್’ (Bigg Boss) ವಿನ್ ಆಗೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ನಟ ‘ಒಳ್ಳೇ ಹುಡುಗ’ ಪ್ರಥಮ್ (Olle Hudga Pratham). ಅವರು ಈಗ ನಟನಾಗಿ, ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದು (ಫೆಬ್ರವರಿ 24) ಅವರ ಬರ್ತ್ಡೇ. ಈ ಪ್ರಯುಕ್ತ ಅವರು ನಿರ್ದೇಶಿಸಿ, ನಟಿಸುತ್ತಿರುವ ‘ನಟ ಭಯಂಕರ’ ಸಿನಿಮಾದ (Nata Bhayankara) ಪೋಸ್ಟರ್ ರಿಲೀಸ್ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪೋಸ್ಟರ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಇದನ್ನು ರಿಲೀಸ್ ಮಾಡುವಾಗ ಒಂದು ನಿಮಿಷ ಅವರು ಬೆಚ್ಚಿದರಂತೆ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ ಪ್ರಥಮ್.
ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು. ಅವರು ಮಾಡುವ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ ಸಿದ್ದರಾಮಯ್ಯ. ಇಂದು ಪ್ರಥಮ್ ಬರ್ತ್ಡೇ ಹಿನ್ನೆಲೆಯಲ್ಲಿ ‘ನಟ ಭಯಂಕರ’ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡದವರಿಗೆ ವಿಶ್ ಮಾಡಿದ್ದಾರೆ. ಈ ಬಗ್ಗೆ ಪ್ರಥಮ್ ಮಾಹಿತಿ ನೀಡಿದ್ದಾರೆ.
‘ಸಿದ್ದರಾಮಯ್ಯ ಅವರು ಬೆಳಗ್ಗೆ ದೆಹಲಿಗೆ ತೆರಳುವವರಿದ್ದರು. ಅದಕ್ಕೂ ಮೊದಲು ಮನೆಗೆ ಬರೋಕೆ ಹೇಳಿದ್ದರು. ನಾವು ತಂಡದ ಜತೆ ಅವರ ಮನೆಗೆ ತೆರಳಿದೆವು. ದೆವ್ವದ ಪಾತ್ರ ಮಾಡಿದವರು ಕೂಡ ಇದ್ದರು. ಸರ್ ಅವರ ಪಕ್ಕ ನಿಲ್ಲಬೇಡಿ, ಅವಳು ದೆವ್ವ ಎಂದೆ. ಅವರು ಒಮ್ಮೆ ಗಾಬರಿ ಆದರು. ಸಿದ್ದರಾಮಯ್ಯ ಅವರೇ ಅವಳು ಸಿನಿಮಾದಲ್ಲಷ್ಟೇ ದೆವ್ವ ಎಂದೆ. ಆಗ ಕೊಂಚ ರಿಲೀಫ್ ಆದರು’ ಎಂದು ಘಟನೆ ವಿವರಿಸಿದರು ಪ್ರಥಮ್.
‘ಈ ಪೋಸ್ಟರ್ ವಿಶೇಷವಾಗಿದೆ. ರಾಮನ ಭಕ್ತ ಹನುಮಂತ ಹಾಗೂ ದೆವ್ವದ ನಡುವೆ ನಡೆಯುವ ಕಾಳಗದ ಪೋಸ್ಟರ್ ಇದು. ಪೋಸ್ಟರ್ ನೋಡಿ ಖುಷಿಪಟ್ಟರು. ನಮ್ಮ ಜತೆ ಬಂದ ಎಲ್ಲರ ಜತೆಗೂ ಮಾತನಾಡಿದರು. ನಿನ್ನ ಡೈರೆಕ್ಷನ್ ಸಿನಿಮಾ ಎಂದರೆ ಪೂರ್ತಿಯಾಗಿ ನೋಡುತ್ತೇನೆ ಎಂಬುದಾಗಿ ಸಿದ್ದರಾಮಯ್ಯ ಅವರು ಪ್ರಾಮಿಸ್ ಮಾಡಿದ್ದಾರೆ’ ಎಂದರು ಪ್ರಥಮ್.
ಮಾರ್ಚ್ 17ರಂದು ‘ಜೇಮ್ಸ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಹಲವು ವಾರಗಳ ಕಾಲ ಈ ಸಿನಿಮಾದ ಹವಾ ಇರಲಿದೆ. ಹೀಗಾಗಿ, ಏಪ್ರಿಲ್ ತಿಂಗಳಲ್ಲಿ ‘ನಟ ಭಯಂಕರ’ ಸಿನಿಮಾ ತೆರೆಗೆ ತರಲು ನಿರ್ದೇಶಕರು ಪ್ಲ್ಯಾನ್ ರೂಪಿಸಿದ್ದಾರೆ. ರಿಲೀಸ್ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ.
ಪ್ರಥಮ್, ಸುಷ್ಮಿತಾ ಜೋಶಿ, ನಿಹಾರಿಕಾ ಶೆಣೋಯ್, ಸಾಯಿಕುಮಾರ್, ಲೀಲಾವತಿ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬೀರಾದಾರ್ ಮೊದಲಾದವರು ನಟಿಸಿದ್ದಾರೆ.
Meghana Raj: ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್ ಆಕ್ರೋಶ
Published On - 3:08 pm, Thu, 24 February 22




