AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು?

‘ಆರ್​ಆರ್​​ಆರ್​’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರು ಜ್ಯೂ.ಎನ್​ಟಿಆರ್​ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು.

ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು?
ಜ್ಯೂ.ಎನ್​ಟಿಆರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:May 19, 2022 | 5:57 PM

Share

ಜ್ಯೂ.ಎನ್​ಟಿಆರ್​ ( Jr. NTR) ಹಾಗೂ ಕೊರಟಾಲ ಶಿವ (Koratala Siva) ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ. ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್’ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ, ಕೊರಟಾಲ ಶಿವ ‘ಆಚಾರ್ಯ’ ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದಾರೆ. ಶುಕ್ರವಾರ (ಮೇ 20) ಜ್ಯೂ.ಎನ್​ಟಿಆರ್​ ಜನ್ಮದಿನ ( Jr. NTR Birthday). ಈ ಸಿನಿಮಾ ಕುರಿತು ಅಪ್​ಡೇಟ್​ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲ, ಈ ಚಿತ್ರದ ನಾಯಕಿ ಯಾರು ಎಂಬ ಬಗ್ಗೆಯೂ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

‘ಆರ್​ಆರ್​​ಆರ್​’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರು ಜ್ಯೂ.ಎನ್​ಟಿಆರ್​ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಇದಾದ ಬಳಿಕ ಶ್ರದ್ಧಾ ಕಪೂರ್ ಅವರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ, ಅದು ಕೂಡ ಸುಳ್ಳಾಗಿದೆ. ಅವರ ಜತೆ ಈ ಬಗ್ಗೆ ಮಾತುಕತೆ ಆಗಿಲ್ಲ ಎನ್ನುತ್ತಿವೆ ಮೂಲಗಳು. ‘ಸಾಹೋ’ ಸಿನಿಮಾ ಮೂಲಕ ಶ್ರದ್ಧಾ ಕಪೂರ್ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಈ ಚಿತ್ರ ಸೋತಿತು. ಆ ಬಳಿಕ ಅವರು ಬಾಲಿವುಡ್​ನಲ್ಲೇ ಬ್ಯುಸಿ ಆಗಿದ್ದಾರೆ. ಈಗ ತಂಡ ಸೇರಿಕೊಳ್ಳುತ್ತಿರುವ ನಾಯಕಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ
Image
ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ
Image
‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?
Image
ಜ್ಯೂ. ಎನ್​ಟಿಆರ್​ ತಾಯಿ ಜತೆ ಇರುವ ವಿಶೇಷ ಬಾಂಧವ್ಯದ ಬಗ್ಗೆ ಮಾತಾಡಿದ ಯಶ್​; ಇದು ಕನ್ನಡದ ನಂಟು
Image
Alia Bhatt: ‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ’; ಜ್ಯೂ ಎನ್​ಟಿಆರ್​ ಬಳಿ ಆಲಿಯಾ ವಿಶೇಷ ಬೇಡಿಕೆ

ಇದನ್ನೂ ಓದಿ: ಜ್ಯೂ. ಎನ್​ಟಿಆರ್​ ಬರ್ತ್​ಡೇ ದಿನವೇ ‘ಆರ್​ಆರ್​ಆರ್’ ಚಿತ್ರದ ಒಟಿಟಿ ಪ್ರೀಮಿಯರ್​; ಇಲ್ಲಿದೆ ಹೊಸ ಟ್ರೇಲರ್​

ಜ್ಯೂ.ಎನ್​ಟಿಆರ್ ಹಾಗೂ ಕೊರಟಾಲ ಶಿವ ಹೊಸ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಟೈಟಲ್ ಮೇ 20ರಂದು ಅನಾವರಣಗೊಳ್ಳುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಜ್ಯೂ.ಎನ್​ಟಿಆರ್ ಯಾವ ಅವತಾರ ತಾಳಲಿದ್ದಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ನಾಯಕಿಯನ್ನು ಬಾಲಿವುಡ್​ನಿಂದ ಕರೆಸಿಕೊಳ್ಳಲಾಗುತ್ತದೆಯೋ ಅಥವಾ ದಕ್ಷಿಣ ಭಾರತದ ಹೀರೋಯಿನ್​ಗೆ ಮಣೆ ಹಾಕಲಾಗುತ್ತದೆಯೇ ಎನ್ನುವ ಪ್ರಶ್ನೆ ಸದ್ಯದ್ದು.

ಇದನ್ನೂ ಓದಿ: ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ

ಜ್ಯೂ.ಎನ್​ಟಿಆರ್​ ಜನ್ಮದಿನ ಆಚರಣೆಗೆ ಫ್ಯಾನ್ಸ್ ದೊಡ್ಡ ಮಟ್ಟದ ಪ್ಲ್ಯಾನ್ ಮಾಡಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾ ಗೆಲುವಿನಿಂದ ಈ ಬಾರಿಯ ಬರ್ತ್​ಡೇ ಅವರಿಗೆ ವಿಶೇಷವಾಗಿದೆ. ಕೊವಿಡ್ ಕಾರಣದಿಂದ ಹಿಂದಿನ ಎರಡು ವರ್ಷ ಜ್ಯೂ.ಎನ್​ಟಿಆರ್​ಗೆ ಬರ್ತ್​ಡೇ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:08 pm, Thu, 19 May 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ